No menu items!
18.7 C
Munich
Saturday, August 1, 2026

ನನ್ನ ಹೆಸರಿನಲ್ಲಿ ಶಿವ ಇದ್ದಾನೆ, ಸಿದ್ದರಾಮಯ್ಯ ಹೆಸರಿನಲ್ಲಿ ರಾಮ ಇದ್ದಾನೆ !

Must read

ಬೆಂಗಳೂರು: ರಾಜ್ಯದಲ್ಲಿ ರಾಮಮಂದಿರ ಹವಾ, ಮೋದಿ ಹವಾ ಇಲ್ಲ. ನಾವು ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಇದು ಸಾಬೀತಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಕೆಪಿಸಿಸಿ ಕಚೇರಿ ಇಂದಿರಾ ಭವನದಲ್ಲಿ ನಡೆದ ಗ್ಯಾರಂಟಿ ಸಮಿತಿಗಳ ಅಧ್ಯಕ್ಷ, ‌ಉಪಾಧ್ಯಕ್ಷ ಹಾಗೂ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಹೆಸರಿನಲ್ಲಿ ಶಿವ ಇದ್ದಾನೆ, ಸಿದ್ದರಾಮಯ್ಯ ಹೆಸರಿನಲ್ಲಿ ರಾಮ ಇದ್ದಾನೆ. ನಾವುಗಳು ಕೂಡಾ ಹಿಂದೂಗಳು ಎಂದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಸೂಚಿಸಿದರು.ಗ್ಯಾರಂಟಿಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ, ಮನೆ ಮನೆಗೆ ಹೋಗಬೇಕು. ತಂಡ‌ ಮಾಡಿ ಹೋಗಬೇಕು. ಓಟರ್ ಲಿಸ್ಟ್ ತಗೊಂಡು ಮನೆ ಮನೆಗೆ ತೆರಳಬೇಕು. ಕಮಲ ಕೆರೆಯಲ್ಲಿ ಚೆಂದ, ತೆನೆ ಹೊಲದಲ್ಲಿ ಇದ್ದರೆ ಈ ದಾನ ಧರ್ಮ‌ ಮಾಡುವ ಕೈ ಅಧಿಕಾರದಲ್ಲಿದ್ದರೆ ಒಳ್ಳೆಯದು ಎಂದರು.
ಐದು ಗ್ಯಾರಂಟಿ ಶಕ್ತಿಯಿಂದ ಜನ ತೆನೆ ಎತ್ತಿ ಬಿಸಾಕಿದ್ದಾರೆ. ಸ್ವಾಭಿಮಾನ‌ ಬಿಡಬೇಕು.‌ ನಾವು ಮೊದಲು ಕಾರ್ಯಕರ್ತರಾಗಿದ್ದೇವೆ. ಪಂಚಾಯತ್ ನಲ್ಲಿ ಲೀಡ್ ಕೊಡಿಸುವ ಕೆಲಸ ಮಾಡಬೇಕು. ಐಡಿ ಕಾರ್ಡ್, ಫೋಟೋ ಅಪ್ ಲೋಡ್ ಮಾಡಿ ಐಡಿ ಹಾಕಿ ಮನೆ ಮನೆಗೆ ಹೋಗಿ ಗ್ಯಾರಂಟಿ ಬಗ್ಗೆ ಮನವರಿಕೆ ಮಾಡಿ ಎಂದು ಸೂಚಿಸಿದರು.

- Advertisement -spot_img

More articles

- Advertisement -spot_img

Latest article