No menu items!
14.8 C
Munich
Tuesday, June 16, 2026

ಬೆಂಗಳೂರಿನಲ್ಲಿ ಮಳೆ ಆರ್ಭಟ… ಇಪ್ಪತ್ತಕ್ಕೂ ಹೆಚ್ಚು ಕಡೆ ರಸ್ತೆಗಳು ಜಲಾವೃತ!

Must read

ಬೆಂಗಳೂರು:- ಬೆಂಗಳೂರಿನಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆ ಹಿನ್ನೆಲೆ ನಗರದ ಇಪ್ಪತ್ತಕ್ಕೂ ಹೆಚ್ಚ ಕಡೆ ರಸ್ತೆಗಳು ಜಲಾವೃತವಾಗಿದೆ. ರಸ್ತೆಗಳ ಜಲಾವೃತದಿಂದ ಮಧ್ಯರಾತ್ರಿವರೆಗೂ ವಾಹನಸವಾರರು ಪರದಾಡಿದ್ದಾರೆ.

ಒಂದು ಕಡೆ ರಸ್ತೆಗಳು ಜಲಾವೃತ ಮತ್ತೊಂದು ಕಡೆ ಮರಗಳ ನೆಲಸಮವಾಗಿದೆ. ಟ್ರಾಫಿಕ್ ನಿಯಂತ್ರಣಕ್ಕೆ ಟ್ರಾಫಿಕ್ ಪೊಲೀಸರಿಂದಲೂ ಪರದಾಟ ನಡೆಸಿದ್ದಾರೆ. ನೀರು ನಿಂತಕಡೆಯಲ್ಲೆಲ್ಲಾ ಸ್ವತಃ ಪೊಲೀಸರಿಂದಲೇ ನೀರಿನ ತೆರವು ಕಾರ್ಯ ನಡೆದಿದೆ.

ಹೆಬ್ಬಾಳ, ಮಾನ್ಯತಾಟೆಕ್ ಪಾರ್ಕ್ ರಸ್ತೆ, ಕಸ್ತೂರಿ ನಗರ MMT ಜಂಕ್ಷನ್, ಬಿಇಎಲ್, ಟಿನ್ ಫ್ಯಾಕ್ಟರಿ, ಟ್ಯಾನರಿ ರೋಡ್ ಸೇರಿ ಇತೆರಡೆ ತೊಂದರೆ ಆಗಿತ್ತು. ಈ ವೇಳೆ ಸ್ವತಃ ಟ್ರಾಫಿಕ್ ಪೊಲೀಸರಿಂದಲೇ ರಸ್ತೆಯಲ್ಲಿ ನಿಂತಿದ್ದ ನೀರಿನ ತೆರವು ಕಾರ್ಯ ನಡೆದಿದೆ. ಸಂಚಾರಿ ಪೊಲೀಸರ ಕಾರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

- Advertisement -spot_img

More articles

- Advertisement -spot_img

Latest article