ನವದೆಹಲಿ: ನಮ್ಮ ಡಿಮ್ಯಾಂಡ್ ಏನಿಲ್ಲ. ಕೃಷಿ ಕ್ಷೇತ್ರದಲ್ಲಿ ನನಗೆ ಆಸಕ್ತಿ ಇದೆ. ಪ್ರಧಾನಿ ಮೋದಿ ಜೊತೆಗೆ ಮೀಟಿಂಗ್ ಆದ ಬಳಿಕ ಎಲ್ಲವೂ ನಿರ್ಧಾರ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಎನ್‍ಡಿಎ ಸಭೆ ಹಿನ್ನೆಲೆಯಲ್ಲಿ ದೆಹಲಿಗೆ ಆಗಮಿಸಿದ ಕುಮಾರಸ್ವಾಮಿಯವರು ಪ್ರತಿಕ್ರಿಯಿಸಿ, ಕೃಷಿ ಕ್ಷೇತ್ರದಲ್ಲಿ ನನಗೆ ಆಸಕ್ತಿ ಇದೆ.
ಪ್ರಧಾನಿ ಮೋದಿ ಜೊತೆಗೆ ಮೀಟಿಂಗ್ ಆದ ಬಳಿಕ ಎಲ್ಲವೂ ನಿರ್ಧಾರ ಆಗಲಿದೆ. ಈ ಹಂತದಲ್ಲಿ ಯಾವುದೇ ರೀತಿ ನೆಗೆಟಿವ್ ಆದ ನಿರ್ಧಾರ ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡು ಮಾಡುವುದಿಲ್ಲ ಎಂದು ಅನಿಸುತ್ತದೆ. ನನ್ನ ಪ್ರಜ್ಞೆ ಪ್ರಕಾರ ಅವರು ಯಾವುದೇ ನೆಗೆಟಿವ್ ತೀರ್ಮಾನ ಮಾಡುವುದಿಲ್ಲ ಎಂದುಕೊಂಡಿದ್ದೇನೆ ಎಂದರು.
ನಮ್ಮ ಡಿಮ್ಯಾಂಡ್ ಏನಿಲ್ಲ. ಹಲವಾರು ಸಮಸ್ಯೆ ಎದುರಿಸುತ್ತೇವೆ. ನಮ್ಮ ಮೊದಲ ಆದ್ಯತೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಬೇಕು. ನಮ್ಮ ಪಕ್ಷದ ಪ್ರಮುಖ ಆಸಕ್ತಿ ಇರೋದು ರೈತರಿಗೆ ಸಹಾಯ ಮಾಡಬೇಕು ಅನ್ನೋದು. ನೋಡೋಣ ಏನು ತೀರ್ಮಾನ ಆಗುತ್ತೆ ಎಂದರು.