No menu items!
33.2 C
Munich
Friday, August 14, 2026

ತಾಂತ್ರಿಕ ದೋಷ ಹಿನ್ನಲೆ: ತುರ್ತು ಭೂ ಸ್ಪರ್ಷ ಮಾಡಿದ ಹೆಲಿಕಾಪ್ಟರ್

Must read

ತಾಂತ್ರಿಕ ದೋಷ ಹಿನ್ನಲೆ: ತುರ್ತು ಭೂ ಸ್ಪರ್ಷ ಮಾಡಿದ ಹೆಲಿಕಾಪ್ಟರ್

ಕೋಲಾರ: ತಾಂತ್ರಿಕ ದೋಷ ಹಿನ್ನಲೆಯಲ್ಲಿ ಭಾರತೀಯ ವಾಯಸೇನೆಗೆ ಸೇರಿದ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ ಮಾಡಿದೆ. ಯಲಹಂಕದಿಂದ ಚೆನೈಗೆ ತೆರಳುತ್ತಿದ್ದ ವಾಯುಸೇನಾ ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಕೋಲಾರದ ಬಂಗಾರಪೇಟೆ ತಾಲ್ಲೂಕಿನ ಕರಪನಹಳ್ಳಿಯಲ್ಲಿ ಭೂ ಸ್ಪರ್ಶ ಮಾಡಲಾಗಿದೆ.
ಮಹಿಳಾ ಪೈಲಟ್ ಸೇರಿದಂತೆ ಇಬ್ಬರು ಹೆಲಿಕಾಪ್ಟರ್ನಲ್ಲಿದ್ದು, ಸದ್ಯ ಸುರಕ್ಷಿತವಾಗಿದ್ದಾರೆ. ರಾತ್ರಿ 10 ಗಂಟೆ ನಂತರ ತಾಂತ್ರಿಕ ದೋಷ ನಿವಾರಣೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಸೇನಾ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ ಹಿನ್ನೆಲೆ ಮತ್ತೊಂದು ಹೆಲಿಕಾಪ್ಟರ್ ಸ್ಥಳಕ್ಕೆ ಬಂದಿದೆ. ವಾಯುಸೇನೆಯ ಮೆಕ್ಯಾನಿಕ್ಸ್ ಕೂಡ ಸ್ಥಳಕ್ಕೆ ಬಂದಿಳಿದಿದ್ದಾರೆ.

- Advertisement -spot_img

More articles

- Advertisement -spot_img

Latest article