ತೀರ್ಪು ವಿಳಂಬಕ್ಕೆ ಸುಪ್ರೀಂ ಕೋರ್ಟ್ ಕಿಡಿ: ಹೈಕೋರ್ಟ್ಗಳ ಕಾರ್ಯವೈಖರಿಯ ಮೇಲೆ ಅಸಮಾಧಾನ

Date:

ತೀರ್ಪು ವಿಳಂಬಕ್ಕೆ ಸುಪ್ರೀಂ ಕೋರ್ಟ್ ಕಿಡಿ: ಹೈಕೋರ್ಟ್ಗಳ ಕಾರ್ಯವೈಖರಿಯ ಮೇಲೆ ಅಸಮಾಧಾನ

ನವದೆಹಲಿ: ಹೈಕೋರ್ಟ್ಗಳ ಕಾರ್ಯವೈಖರಿಯ ಬಗ್ಗೆ ಸುಪ್ರೀಂ ಕೋರ್ಟ್ ಮತ್ತೊಮ್ಮೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣಗಳ ತೀರ್ಪುಗಳನ್ನು ತಿಂಗಳುಗಟ್ಟಲೆ ಕಾಯ್ದಿರಿಸಿ ಪ್ರಕಟಿಸದಿರುವ ಚಾಳಿಯನ್ನು ಗಂಭೀರವಾಗಿ ಟೀಕಿಸಿದೆ.
ಜಾರ್ಖಂಡ್ ಹೈಕೋರ್ಟ್ ಪ್ರಕರಣವೊಂದರ ತೀರ್ಪನ್ನು ಮೌಖಿಕವಾಗಿ ಪ್ರಕಟಿಸಿ, ಅದನ್ನು ನ್ಯಾಯಾಲಯದ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡದಿರುವುದನ್ನು ಉಲ್ಲೇಖಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಾಂಚೋಲಿ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿತು.
ಮಂಗಳವಾರ ವಿಚಾರಣೆ ವೇಳೆ ಮಾತನಾಡಿದ ಸಿಜೆಐ ಸೂರ್ಯ ಕಾಂತ್, “ಹೈಕೋರ್ಟ್ಗಳು ತೀರ್ಪುಗಳನ್ನು ಪ್ರಕಟಿಸದೆ ತಿಂಗಳುಗಟ್ಟಲೆ ಕಾಯ್ದಿರಿಸುವ ಅಭ್ಯಾಸ ಗಂಭೀರ ಕಾಯಿಲೆಯಾಗಿ ಮಾರ್ಪಟ್ಟಿದೆ. ಇದನ್ನು ತಕ್ಷಣ ನಿರ್ಮೂಲನೆ ಮಾಡಬೇಕಾಗಿದೆ” ಎಂದು ಹೇಳಿದರು.
ನ್ಯಾಯಾಧೀಶರಲ್ಲಿ ಎರಡು ರೀತಿಯವರು ಇದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು. “ಒಂದು ವರ್ಗದ ನ್ಯಾಯಾಧೀಶರು ಕಠಿಣ ಪರಿಶ್ರಮದಿಂದ ಎಲ್ಲಾ ಪ್ರಕರಣಗಳನ್ನು ಆಲಿಸಿ ತೀರ್ಪು ನೀಡುತ್ತಾರೆ. ಆದರೆ ಮತ್ತೊಂದು ವರ್ಗದ ನ್ಯಾಯಾಧೀಶರು ಕೆಲವು ಪ್ರಕರಣಗಳ ವಿಚಾರಣೆ ನಡೆಸಿ, ತೀರ್ಪು ಪ್ರಕಟಿಸದೇ ಸುಮ್ಮನೆ ಕಾಯ್ದಿರಿಸುತ್ತಾರೆ. ಇದರಿಂದ ನ್ಯಾಯ ವಿಳಂಬವಾಗುವುದಲ್ಲದೆ, ನ್ಯಾಯಾಂಗದ ಮೇಲಿನ ಕಾರ್ಯದೊತ್ತಡವೂ ಹೆಚ್ಚುತ್ತಿದೆ” ಎಂದು ಹೇಳಿದರು.
“ನಾವು ಯಾರ ಮೇಲೂ ವೈಯಕ್ತಿಕವಾಗಿ ಟೀಕೆ ಮಾಡುವುದಿಲ್ಲ. ಆದರೆ ನ್ಯಾಯ ವಿಳಂಬವು ನ್ಯಾಯಾಂಗದ ಮುಂದಿರುವ ದೊಡ್ಡ ಸವಾಲು. ತೀರ್ಪು ಕಾಯ್ದಿರಿಸುವ ಪ್ರವೃತ್ತಿ ಕಾಯಿಲೆಯಂತೆ ಹರಡುತ್ತಿದೆ. ಇದಕ್ಕೆ ಚಿಕಿತ್ಸೆ ನೀಡಬೇಕು ಮತ್ತು ಇನ್ನಷ್ಟು ವಿಸ್ತರಿಸಲು ಬಿಡಬಾರದು” ಎಂದು ಸಿಜೆಐ ಗಂಭೀರವಾಗಿ ಹೇಳಿದರು.
ಕೆಲವು ಪ್ರಕರಣಗಳಲ್ಲಿ ವಾದ-ಪ್ರತಿವಾದ ಆಲಿಸಿದ ಬಳಿಕ ಅವುಗಳನ್ನು ಮುಂದಿನ ನಿರ್ದೇಶನಕ್ಕಾಗಿ ಕಾಯ್ದಿರಿಸಲಾಗುತ್ತದೆ. ಈ ಸಮಸ್ಯೆಯನ್ನು ಹೈಕೋರ್ಟ್ಗಳ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ನಡೆಯಲಿರುವ ಸಭೆಯಲ್ಲಿ ಚರ್ಚಿಸಿ, ನ್ಯಾಯ ವಿಳಂಬಕ್ಕೆ ಪರಿಹಾರ ಕಂಡುಹಿಡಿಯಲಾಗುವುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಜಾರ್ಖಂಡ್ ಹೈಕೋರ್ಟ್ನ ಒಂದು ಪ್ರಕರಣವನ್ನು ಉದಾಹರಿಸಿದ ಸುಪ್ರೀಂ ಕೋರ್ಟ್, 2025ರ ಡಿಸೆಂಬರ್ 4ರಂದು ಪ್ರಕರಣವೊಂದನ್ನು ವಜಾಗೊಳಿಸಲಾಗಿದೆ. ಆದರೆ ಆ ತೀರ್ಪು ಇನ್ನೂ ನ್ಯಾಯಾಲಯದ ವೆಬ್ಸೈಟ್ನಲ್ಲಿ ಅಪ್ಲೋಡ್ ಆಗಿಲ್ಲ. ಈ ವಿಳಂಬಕ್ಕೆ ಯಾವುದೇ ಸಮಂಜಸ ಕಾರಣವಿಲ್ಲ. ವಕೀಲರಿಗೂ ಮಾಹಿತಿ ನೀಡದಿರುವುದು ನ್ಯಾಯಪಾಲನೆಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದೆ.
ಇದೇ ವೇಳೆ, ಕಳೆದ ನವೆಂಬರ್ನಲ್ಲಿ ದೇಶದ ಎಲ್ಲಾ ಹೈಕೋರ್ಟ್ಗಳಲ್ಲಿ ಕಾಯ್ದಿರಿಸಿದ, ಪ್ರಕಟಿಸಿದ ಹಾಗೂ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿರುವ ತೀರ್ಪುಗಳ ಕುರಿತು ದಿನಾಂಕದೊಂದಿಗೆ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ಗಳ ಕಾರ್ಯವೈಖರಿಯ ಮೇಲೆ ಸುಪ್ರೀಂ ಕೋರ್ಟ್ ಪ್ರಶ್ನೆಗಳನ್ನು ಎತ್ತಿದೆ.

Share post:

Subscribe

spot_imgspot_img

Popular

More like this
Related

ಅಬಕಾರಿ ಸಚಿವರ ರಾಜೀನಾಮೆ ಪಡೆದು ತನಿಖೆ ನಡೆಸಲಿ: ಬಿ.ವೈ. ವಿಜಯೇಂದ್ರ ಒತ್ತಾಯ

ಅಬಕಾರಿ ಸಚಿವರ ರಾಜೀನಾಮೆ ಪಡೆದು ತನಿಖೆ ನಡೆಸಲಿ: ಬಿ.ವೈ. ವಿಜಯೇಂದ್ರ ಒತ್ತಾಯ ಬೆಂಗಳೂರು:...

ಗರ್ಭಾವಸ್ಥೆಯಲ್ಲಿ ಕಂಡುಬರುವ ಖಿನ್ನತೆ ತಡೆಯಲು ಈ ರೀತಿ ಮಾಡಿ!

ಗರ್ಭಾವಸ್ಥೆಯಲ್ಲಿ ಕಂಡುಬರುವ ಖಿನ್ನತೆ ತಡೆಯಲು ಈ ರೀತಿ ಮಾಡಿ! ಗರ್ಭಾವಸ್ಥೆಯಲ್ಲಿ ಮಹಿಳೆ ಅನುಭವಿಸುವ...

ನೈಋತ್ಯ ರೈಲ್ವೆಗೆ ₹7,748 ಕೋಟಿ ಅನುದಾನ: 2009–14ಕ್ಕೆ ಹೋಲಿಸಿದರೆ 9 ಪಟ್ಟು ಹೆಚ್ಚಳ – ಅಶ್ವಿನಿ ವೈಷ್ಣವ್

ನೈಋತ್ಯ ರೈಲ್ವೆಗೆ ₹7,748 ಕೋಟಿ ಅನುದಾನ: 2009–14ಕ್ಕೆ ಹೋಲಿಸಿದರೆ 9 ಪಟ್ಟು...

ತಾಂತ್ರಿಕ ದೋಷ: ಲಂಡನ್–ಬೆಂಗಳೂರು ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ಸುರಕ್ಷಿತ ಲ್ಯಾಂಡ್

ತಾಂತ್ರಿಕ ದೋಷ: ಲಂಡನ್–ಬೆಂಗಳೂರು ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ಸುರಕ್ಷಿತ...