No menu items!
18.3 C
Munich
Thursday, April 23, 2026

ಬೆಂಗಳೂರಿನಲ್ಲಿ ಜಿಎಸ್‌ಟಿ ವಂಚನೆ ಜಾಲ ಪತ್ತೆ, 410 ಕೋಟಿ ರೂಪಾಯಿ ಹಗರಣ ; ಆಂಧ್ರ ಮೂಲದ ಕಿಂಗ್‌ಪಿನ್ ಬಂಧನ

Must read

ಹಣ ಬದುಕಿಗೆ ಅನಿವಾರ್ಯ ನಿಜಾ. ಆದರೆ ಹಣ ಗಳಿಸಲು ನಾವು ಆಯ್ಕೆ ಮಾಡಿಕೊಳ್ಳುವ ದಾರಿ ಮುಖ್ಯ.ಅಡ್ಡದಾರಿಯಲ್ಲಿ ಸಂಪಾದಿಸಿದ ಹಣ ಅಲ್ಪಕಾಲದ ಸುಖ ನೀಡಬಹುದೇ ಹೊರತು, ನೆಮ್ಮದಿಯನ್ನಲ್ಲ. ಪ್ರಾಮಾಣಿಕವಾಗಿ ಬೆವರು ಸುರಿಸಿ ಗಳಿಸಿದ ಒಂದೊಂದು ರೂಪಾಯಿಯಲ್ಲೂ ಗೌರವವಿದೆ, ತೃಪ್ತಿಯಿದೆ.

ಆದರೆ ಈಗೀಗ ಹಣ ಗಳಿಸುವ ಧಾವಂತದಲ್ಲಿ ಜೀವನ ಮೌಲ್ಯಗಳನ್ನು ಹಲವರು ಮರೆಯುತ್ತಿದ್ದಾರೆ. “ಕಾಯಕವೇ ಕೈಲಾಸ” ಎಂಬ ಮಾತನ್ನು ಅಕ್ಷರಶಃ ಕಡೆಗಣಿಸುತ್ತಿದ್ದಾರೆ. ಅಡ್ಡದಾರಿಯ ಮೇಲೆ ಅಡ್ಡದಾರಿಯನ್ನು ಹಿಡಿಯುತ್ತಿದ್ದಾರೆ. ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಬೆಂಗಳೂರಿನಲ್ಲಿ 410 ಕೋಟಿ ರೂಪಾಯಿಯ ಜಿಎಸ್ ಟಿ ಹಗರಣ ಬೆಳಕಿಗೆ ಬಂದಿದೆ.

ಹೌದು, ಬೆಂಗಳೂರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸುತ್ತಿದ್ದ ಅಂತರರಾಜ್ಯ ಜಾಲವನ್ನು ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗ ಯಶಸ್ವಿಯಾಗಿ ಭೇದಿಸಿದೆ. ಸುಮಾರು 410 ಕೋಟಿ ರೂ. ಮೌಲ್ಯದ ವಹಿವಾಟು ನಡೆಸಿದಂತೆ ಬಿಂಬಿಸಿ, 102.5 ಕೋಟಿ ರೂ. ಗಳಷ್ಟು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಲೂಟಿ ಮಾಡಿರುವುದು ಬೆಳಕಿಗೆ ಬಂದಿದೆ.

ಆಂಧ್ರ ಮೂಲದ ಕಿಂಗ್‌ಪಿನ್ ತೌಕೀರ್‌ನನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಈತನನ್ನು ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಇನ್ನೂ ತೌಕಿರನ ಸಹಚರ ಶೇಕ್ ಜಾಕೀರ್ ಹುಸೇನ್ ಅಲಿಯಾಸ್ ಬಾಷಾ ಎಂಬಾತ ವಿದೇಶಕ್ಕೆ ಪರಾರಿಯಾಗಿದ್ದು, ಆತನಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ.

ಮುಗ್ದ ಜನರ ಪಾನ್-ಆಧಾರ್ ದುರುಪಯೋಗಪಡಿಸಿಕೊಂಡು, ನಕಲಿ ಕಂಪನಿಗಳನ್ನು ಸೃಷ್ಟಿಸಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆದು ತೆರಿಗೆ ಇಲಾಖೆಗೆ ಈ ಇಬ್ಬರು ವಂಚಿಸುತ್ತಿದ್ದರು. ಸರಕು ಅಥವಾ ಸೇವೆಗಳನ್ನು ಸರಬರಾಜು ಮಾಡದೆಯೇ, ಕೇವಲ ಸಿಮೆಂಟ್, ಕಬ್ಬಿಣದ ಸರಳುಗಳ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯುತ್ತಿದ್ದರು. ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲೂ ಈ ಜಾಲ ಹಬ್ಬಿತ್ತು. ನಕಲಿ ಐಟಿಸಿಯನ್ನು ವಿವಿಧ ಕಾಂಟ್ರಾಕ್ಟರ್‌ಗಳಿಗೆ ವರ್ಗಾಯಿಸಿ ತೆರಿಗೆ ವಂಚನೆಗೆ ಸಹಕರಿಸುತ್ತಿದ್ದರು.

ವಂಚನೆಯ ಜಾಲ:

ಕೇವಲ ಕರ್ನಾಟಕಕ್ಕೆ ಸೀಮಿತವಾಗದೆ ಆಂಧ್ರಪ್ರದೇಶ ಮತ್ತು ತಮಿಳುನಾಡಿಗೂ ಈ ಜಾಲ ಹಬ್ಬಿತ್ತು. ತೆರಿಗೆ ಇಲಾಖೆಯ ಕಣ್ಣು ತಪ್ಪಿಸಲು ಇಲಾಖೆಯಿಂದ ನೋಟಿಸ್ ಅಥವಾ ತಪಾಸಣೆ ಬರುವ ಸುಳಿವು ಸಿಗುತ್ತಿದ್ದಂತೆಯೇ, ಜಿಎಸ್‌ಟಿ ನೋಂದಣಿ ರದ್ದುಗೊಳಿಸಿ, ಮೊಬೈಲ್ ಸಂಖ್ಯೆಗಳನ್ನು ಬದಲಿಸಿ ಅಲ್ಲಿಂದ ಪರಾರಿಯಾಗುತ್ತಿದ್ದರು.

ಮುಂದಿನ ಕ್ರಮ

ಪ್ರಸ್ತುತ ಬೆಂಗಳೂರಿನ ಅಣ್ಣಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ವಂಚನೆಗೊಳಗಾದ 102.5 ಕೋಟಿ ರೂ.ಗಳನ್ನು ವಸೂಲಿ ಮಾಡಲು ಅಧಿಕಾರಿಗಳು ಕಾನೂನು ಪ್ರಕ್ರಿಯೆ ಆರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವು ಪಡೆಯುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

- Advertisement -spot_img

More articles

- Advertisement -spot_img

Latest article