No menu items!
12.5 C
Munich
Tuesday, April 28, 2026

ದೀದೀ ಕೋಟೆಯಲ್ಲಿ ನಮೋ ಶಪಥ: ಮೇ 4ಕ್ಕೆ ಬಿಜೆಪಿ ಸರ್ಕಾರ, ಬಂಗಾಳಕ್ಕೆ 5 ಗ್ಯಾರಂಟಿ

Must read

ಚುನಾವಣೆಯ ಕಣ ರಂಗೇರಿದೆ. ಅಧಿಕಾರದ ಗದ್ದುಗೆಗೆ ನಡೆಯುತ್ತಿರುವ ಕಸರತ್ತು ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲಿಪಿದೆ. ಯಾರಿಗೆ ಬಣ್ಣ..? ಯಾರಿಗೆ ಸುಣ್ಣ..? ಎನ್ನುವ ವಿಚಾರ ಇನ್ನೇನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯನ್ನು ಮಣಿಸುವುದು ಸುಲಭ ಅಲ್ಲ. ತಮಿಳುನಾಡಿನಲ್ಲಿ ದ್ರಾವಿಡ ಪಕ್ಷದ ಕೋಟೆಯನ್ನು ಕೂಡ ಉರುಳಿಸುವುದು ಅಂದುಕೊಂಡತೆ ಅಲ್ಲ.

ಆದರೂ.. ಬಿಜೆಪಿ ಪಕ್ಷಕ್ಕೆ ಈ ಬಾರಿ ಈ ಎರಡು ಕಡೆ ತಮ್ಮ ಧ್ವಜ ನೆಡುವ ಬಯಕೆ ಇದೆ. ಗೆಲ್ಲುವ ವಿಶ್ವಾಸವೂ ಇದೆ. ಇದೇ ವಿಶ್ವಾಸದಲ್ಲಿ ಸದ್ಯ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಶ್ಚಿಮ ಬಂಗಾಳಕ್ಕೆ 5 ಡೆಡ್ಲಿ ಭರವಸೆಗಳನ್ನು ನೀಡಿದ್ದಾರೆ.

ಹೌದು, ಮೋದಿಯ ಪ್ರಚಾರಕ್ಕೆ ಪಶ್ಚಿಮ ಬಂಗಾಳದ ಬಾರಕ್‌ಪೋರ್‌ನಲ್ಲಿ ಅದ್ಧೂರಿ ತೆರೆ ಬಿದ್ದಿದೆ. ತಮ್ಮ ಈ ಕೊನೆಯ ಪ್ರಚಾರ ಕಾರ್ಯಕ್ರಮದಲ್ಲಿ ಮೋದಿ ಕೇವಲ ರಾಜಕೀಯ ಭಾಷಣವನ್ನು ಮಾತ್ರ ಮಾಡದೆ ಬಂಗಾಳದ ಜನರ ಹೃದಯ ಗೆಲ್ಲಲು ಭಾವನಾತ್ಮಕವಾದ ಮಾತುಗಳನ್ನಾಡಿದ್ಧಾರೆ.

ರಾಜ್ಯದಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದು ಹೇಳಿರುವ ನರೇಂದ್ರ ಮೋದಿ ಇದು ನನ್ನ ಈ ಚುನಾವಣೆಯ ಕೊನೆಯ ರ‍್ಯಾಲಿ, ಆದರೆ ಗೆಲುವಿನ ಬಳಿಕ ಪ್ರಮಾಣವಚನ ಸ್ವೀಕಾರಕ್ಕೆ ನಾನು ಮತ್ತೆ ಮರಳಿ ಬರುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಗೆಲುವು ನಮ್ಮದೇ ಎನ್ನುವ ಸ್ಪಷ್ಟವಾದ ಸಂದೇಶವನ್ನು ರವಾನೆ ಮಾಡಿದ್ಧಾರೆ. 

ಬಂಗಾಳದ ನೆಲಕ್ಕೂ ತಮ್ಮ ಆಧ್ಯಾತ್ಮಿಕ ಪಯಣಕ್ಕೂ ಇರುವ ನಂಟನ್ನು ಸ್ಮರಿಸಿದ ಮೋದಿ, ಇಲ್ಲಿನ ಜನರ ಪ್ರೀತಿಯೇ ತಮಗೆ ಅತಿದೊಡ್ಡ ಆಶೀರ್ವಾದ ಎಂದು ಹೇಳಿದ್ದಾರೆ. ತಂತನಿಯಾ ಕಾಳಿಬಾರಿ ದೇವಸ್ಥಾನದ ಭೇಟಿಯನ್ನು ಮೆಲುಕು ಹಾಕುತ್ತಾ, ಬಂಗಾಳದ ಮೇಲಿನ ತಮ್ಮ ಭಕ್ತಿ ಅಚಲವಾದುದು ಎಂದು ಭಾವುಕರಾಗಿದ್ದಾರೆ. 

ಬಿಜೆಪಿ ಅಧಿಕಾರಕ್ಕೆ ಬಂದರೆ ಯುವಕರಿಗೆ  ಮತ್ತು ಉದ್ಯೋಗಿಗಳಿಗೆ ಸಿಗುವ 5 ಬಂಪರ್ ಕೊಡುಗೆ

ಪಾರದರ್ಶಕ ಸರ್ಕಾರಿ ನೇಮಕಾತಿ : ಇನ್ನು ಮುಂದೆ ಉದ್ಯೋಗಕ್ಕಾಗಿ ಕಾಯುವ ಅವಶ್ಯಕತೆ ಇಲ್ಲ. ನಿಗದಿತ ಸಮಯಕ್ಕೆ ಸರಿಯಾಗಿ ಪರೀಕ್ಷೆ ನಡೆಸಿ, ಪಾರದರ್ಶಕವಾಗಿ ‘ಉದ್ಯೋಗ ಮೇಳ’ಗಳ ಮೂಲಕ ನೇಮಕಾತಿ ಪತ್ರಗಳನ್ನು ಕೈಗೆ ನೀಡಲಾಗುವುದು.

ನೌಕರರಿಗೆ 7ನೇ ವೇತನ ಆಯೋಗದ ಲಾಭ: ಸದ್ಯದ ಆಡಳಿತದ ಭೀತಿಯಿಂದ ಸರ್ಕಾರಿ ನೌಕರರನ್ನು ಮುಕ್ತಗೊಳಿಸಿ, ಕೇಂದ್ರ ಮಾದರಿಯಲ್ಲಿ 7ನೇ ವೇತನ ಆಯೋಗದ ಎಲ್ಲಾ ಸೌಲಭ್ಯಗಳನ್ನು ತಲುಪಿಸಲಾಗುವುದು.

ಕಂಟೆಂಟ್‌ ಕ್ರಿಯೆಟರ್‌ಗಳಿಗೆ ಹೊಸ ವೇದಿಕೆ: ಇಂದಿನ ಡಿಜಿಟಲ್ ಯುಗಕ್ಕೆ ತಕ್ಕಂತೆ ಶಾಲೆ-ಕಾಲೇಜುಗಳಲ್ಲಿ ‘ಕಂಟೆಂಟ್ ಕ್ರಿಯೆಟರ್ ಲ್ಯಾಬ್‌’ಗಳನ್ನು ಸ್ಥಾಪಿಸಿ, ಯುವ ಪ್ರತಿಭೆಗಳಿಗೆ ಆಧುನಿಕ ಉದ್ಯೋಗದ ಹಾದಿ ತೋರಿಸಲಾಗುವುದು.

125 ದಿನಗಳ ಉದ್ಯೋಗ ಖಾತ್ರಿ: ಹಳ್ಳಿಗಳ ಅಭಿವೃದ್ಧಿಗಾಗಿ ‘ವಿಬಿ-ಜಿ ರಾಮ್-ಜಿ’ ಕಾಯ್ದೆಯಡಿ 125 ದಿನಗಳ ಕೆಲಸ ಖಚಿತಪಡಿಸಿ, ಪಿಎಂ ವಿಶ್ವಕರ್ಮ ಮತ್ತು ಪಿಎಂ ಸಂಪದ ಯೋಜನೆಗಳನ್ನು ಮನೆಮನೆಗೆ ತಲುಪಿಸಲಾಗುವುದು.

ಬೀದಿ ವ್ಯಾಪಾರಿಗಳಿಗೆ ಬ್ಯಾಂಕ್ ನೆರವು: ನಗರದ ಸಣ್ಣ ವ್ಯಾಪಾರಿಗಳಿಗೆ ‘ಪಿಎಂ ಸ್ವನಿಧಿ’ ಅಡಿಯಲ್ಲಿ ಬ್ಯಾಂಕುಗಳಿಂದ ಸುಲಭ ಸಾಲ ಮತ್ತು ಆರ್ಥಿಕ ಭದ್ರತೆ ಒದಗಿಸಿ ಅವರ ಬದುಕನ್ನು ಹಸನುಗೊಳಿಸಲಾಗುವುದು.

ಮೋದಿಯವರ ಈ ಪಂಚ ಭರವಸೆಗೆ ಬಂಗಾಳದ ಜನ ಮತ ಹಾಕ್ತಾರಾ..? ಮಮತಾ ಬ್ಯಾನರ್ಜಿಗೆ ಈ ಬಾರಿ ರಾಜಕೀಯದ ರಣರಂಗದಲ್ಲಿ ಮೋದಿ ಸೆಡ್ಡು ಹೊಡೆಯುತ್ತಾರಾ..? ಉತ್ತರ ಮೇ 4ರಂದು ಸಿಗಲಿದೆ. 

- Advertisement -spot_img

More articles

- Advertisement -spot_img

Latest article