No menu items!
15 C
Munich
Saturday, June 13, 2026

ಮುಖ್ಯಮಂತ್ರಿ ಕುರ್ಚಿಗೆ ಕಸರತ್ತು ; 40-50 ಶಾಸಕರು ದೆಹಲಿಗೆ ತೆರಳಲು ಸಿದ್ಧತೆ-HDK ಹೊಸ ಬಾಂಬ್

Must read

ಸಾಮಾಜಿಕ ಬದಲಾವಣೆ ತರಬೇಕಾದರೆ ರಾಜಕೀಯ ಶಕ್ತಿಯ ನೆರವು ಅತ್ಯಗತ್ಯ ಎಂದು ಗಾಂಧೀಜಿ ಭಾವಿಸಿದ್ದರು. ಆದರೆ ಇಂದು ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಬದಲಾವಣೆ ಯಾರೊಬ್ಬರಿಗೂ ಬೇಡ. ಬೇಕಿರುವುದು ಅಧಿಕಾರ ಮಾತ್ರ. ಇದಕ್ಕೆ ಕೈಗನ್ನಡಿ ಎಂಬಂತೆ ಕರ್ನಾಟಕದಲ್ಲಿ ಕಳೆದ ಕೆಲ ದಿನಗಳಿಂದ ಸಿಎಂ ಕುರ್ಚಿಗಾಗಿ ಕಸರತ್ತು ನಡೆಯುತ್ತಿದೆ.

ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು, ಸಿಎಂ ಬದ್ಧ ಎಂದು ಡಿಕೆ ಶಿವಕುಮಾರ್ ಅವರೇನೋ ಹೇಳುತ್ತಿದ್ದಾರೆ. ಆದರೆ ಮತ್ತೊಂದು ಕಡೆ ಸಿಎಂ ಸಿದ್ದರಾಮಯ್ಯ 5 ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ವಿಶೇಷ ಅಂದರೆ ಈ ಕುರ್ಚಿ ಕಾದಾಟದ ನಡುವೆಯೂ ಕೂಡ ಇಬ್ಬರು ಒಬ್ಬರ ಗುಣಗಾನವನ್ನು ಒಬ್ಬರು ಮಾಡುತ್ತಿದ್ದಾರೆ.

ಸದ್ಯ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹುಟ್ಟು ಹಬ್ಬದ ಹಿನ್ನೆಲೆ ಈ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಹೀಗಿರುವಾಗ ಕೋಲಾರದಲ್ಲಿ‌ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.ಈ ಕುರಿತು ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಮಾತನಾಡಿರುವ ಕುಮಾರಸ್ವಾಮಿ, ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದ್ದು, ಒಬ್ಬರು ನಾನೇ ಐದು ವರ್ಷ ಸಿಎಂ ಎನ್ನುತ್ತಾರೆ. ಮತ್ತೊಬ್ಬರು ನನಗೆ ಎರಡೂವರೆ ವರ್ಷ ನಿಗದಿಯಾಗಿತ್ತು ಎನ್ನುತ್ತಾರೆ ಎಂದು ಹೇಳಿದ್ದಾರೆ. ಪ್ರತಿನಿತ್ಯ ಇದನ್ನು ಬಿಟ್ಟರೆ ರಾಜ್ಯದಲ್ಲಿ ಯಾವ ಸಮಸ್ಯೆ ಚರ್ಚೆಯಾಗುತ್ತಿದೆ ಎಂದು
ಕಿಡಿ ಕಾರಿದ್ದಾರೆ.


ಮುಖ್ಯಮಂತ್ರಿ ಹುದ್ದೆಗಾಗಿ 40 ರಿಂದ 50 ಶಾಸಕರು ದೆಹಲಿಗೆ ತೆರಳಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಿರುವ ಕುಮಾರಸ್ವಾಮಿ ರಾಜ್ಯದಲ್ಲಿ ಈಗ ಜನ ಎದುರಿಸುತ್ತಿರುವ ಕುಡಿಯುವ ನೀರು ಮತ್ತು ಬಿಸಿಲಿನಂತಹ ಗಂಭೀರ ಸಮಸ್ಯೆಗಳ ಬಗ್ಗೆ ಯಾವುದೇ ಚಿಂತನೆ ಇಲ್ಲ ಎಂದು ಕುಮಾರಸ್ವಾಮಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

- Advertisement -spot_img

More articles

- Advertisement -spot_img

Latest article