ಒಂಟಿಕಾಲಲ್ಲೇ `ಮೌಂಟ್ ಎವರೆಸ್ಟ್' ಏರಿದ ಸಾಹಸಿ..!

0
105

ಉತ್ತರ ಪ್ರದೇಶದ ಅಂಬೇಡ್ಕರ್ ನಗರದ ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿದ ಆಕೆ ಪುರುಷ ಪ್ರಧಾನ ಸಮಾಜಕ್ಕೆ ಸೆಡ್ಡು ಹೊಡೆದು ಬೆಳೆದವರು..! ಇಲ್ಲಿ ಮಹಿಳೆಗೆ ಸ್ವಾಂತಂತ್ರ್ಯ ಇಲ್ಲ..! ಇದ್ದರೂ ಅದು ಪುಸ್ತಕದ ಬದನೆಕಾಯಿ ಅಂತ ಇವರಿಗೆ ಬಾಲ್ಯದಲ್ಲೇ ಗೊತ್ತಾಗಿತ್ತು..! ಆದರೆ ನಾನು ಅಂದು ಕೊಂಡಿದ್ದನ್ನು ಸಾಧಿಸಿದರೆ ಹೀಯಾಳಿಸುತ್ತಿರುವವರೇ ಭೇಷ್ ಅಂತಾರೆ ಅನ್ನೋದೂ ಕೂಡ ಗೊತ್ತಿತ್ತು..! ಯಾರು ಏನಂದರೂ ಅದಕ್ಕೆ ಕಿವಿಗೊಡದ ಇವರು ಛಲ ಬಿಡದೆ ಮುನ್ನಗ್ಗಿದರು..! ಹಾಕಿ ಸ್ಟಿಕ್ ಇಟ್ಕೊಂಡು ಅಭ್ಯಾಸಕ್ಕೆ ಹೊರಟರೆ ಇವರನ್ನು ನೋಡಿ ಒಂದಿಷ್ಟು ಜನ ನಗ್ತಾ ಇದ್ದರು..! ಟ್ರ್ಯಾಕ್ಸೂಟ್ ಹಾಕಿಕೊಂಡು ಹೋಗ್ತಾ ಇದ್ದ ಇವರನ್ನು ಹೀಯಾಳಿಸುವ ಮಂದಿಗೇನೂ ಬರವಿರಲಿಲ್ಲ..!
ಇಷ್ಟೇ ಅಲ್ಲದೇ ಬಾಲ್ಯದಲ್ಲಿಯೇ ಇವರಿಗೆ ಮದುವೆಯನ್ನೂ ಮಾಡಿದ್ದರು..! ಆ ಮದುವೆ ಕೇವಲ ಇಪ್ಪತ್ತೇ ಇಪ್ಪತ್ತು ದಿನಕ್ಕೆ ಮುರಿದು ಬಿದ್ದಿತ್ತು..! ಇಂಥಾ ನೋವಿನ ನಡುವೆಯೇ ಇವರಲ್ಲೊಂದು ಛಲವಿತ್ತು, ಆತ್ಮವಿಶ್ವಾಸ ಗಟ್ಟಿಯಾಗಿತ್ತು..! ಅದೃಷ್ಟವಶಾತ್ ಕುಟುಂಬದ ಬೆಂಬಲ ಕೂಡ ಇವರಿಗಿತ್ತು..! ಕಷ್ಟಪಟ್ಟು ಬೆಳೆದರು..! ರಾಷ್ಟ್ರಮಟ್ಟದ ವಾಲಿಬಾಲ್ ಪಟು ಕೂಡ ಆದರು..!
ಹೀಗೆ ಹಂತ-ಹಂತವಾಗಿ ಬೆಳೆಯುತ್ತಾ ಸಾಗಿದ್ದ ಇವರ ಪಾಲಿಗೆ ಏಪ್ರಿಲ್ 11 2011 ಕರಾಳ ದಿನ..!
ಅವತ್ತು ರೈಲಿನಲ್ಲಿಪ್ರಯಾಣಿಸ್ತಾ ಇದ್ದಾಗ, ಬೋಗಿಯಲ್ಲಿ ಒಬ್ಬರೇ ಇರೋದನ್ನು ತಿಳಿದ ಕಳ್ಳರು ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಅಪಹರಿಸೋಕೆ ಪ್ರಯತ್ನ ಪಟ್ಟರು..! ಆದರೆ ಈಕೆಯ ಕುತ್ತಿಗೆಯಿಂದ ಸರ ಎಗರಿಸೋದು ಕಳ್ಳರಿಗೆ ಅಂದುಕೊಂಡಷ್ಟು ಸುಲಭವಾಗಿರ್ಲಿಲ್ಲ..! ಅವರೊಡನೆ ಈಕೆ ಗುದ್ದಾಡಿದರು.! ದೈರ್ಯದಿಂದ ಪ್ರತಿರೋಧ ತೋರಿದರು..! ಆಗ ಕಳ್ಳರು ಜೋರಾಗಿ ಆಕೆಯನ್ನು ಚಲಿಸುತ್ತಿದ್ದ ರೈಲಿನಿಂದ ಹೊರಕ್ಕೆ ತಳ್ಳಿಯೇ ಬಿಟ್ಟರು..! ರೈಲಿನಿಂದ ಹೊರಬೀಳುತ್ತಿದ್ದಂತೆ ಆಕೆ ಸತ್ತೇ ಹೋದಳೆಂದು ಕಳ್ಳರು ಭಾವಿಸಿದರು..! ಆದರೆ ಆಕೆ ಸತ್ತಿರಲಿಲ್ಲ..! ಸಾವೇ ಇವರ ದೈರ್ಯವನ್ನು ಕಂಡು ಮೆಚ್ಚಿ ಇವರನ್ನು ಜೀವಂತವಾಗಿಟ್ಟಿತ್ತು..! ರಕ್ತದ ಮಡುವಿನಲ್ಲಿ ಬಿದ್ದಿದ್ದ ಇವರನ್ನು ಅಲ್ಲಿನ ಹಳ್ಳಿ ಜನರೇ ಆಸ್ಪತ್ರೆಗೆ ಸೇರಿಸಿದ್ರು..! ಅದೃಷ್ಟವಶಾತ್ ಇವರು ಬದುಕುಳಿದು ಬಿಟ್ಟರು..! ಆದರೆ ಕಾಲು ಕೊಳೆಯುತ್ತಿತ್ತು..! ಇದನ್ನು ತೆಗೆಯದೇ ಇದ್ದರೇ ಇಡೀ ದೇಹವೇ ಕೊಳೆಯುತ್ತಾ ಹೋಗುತ್ತೆ ಅನ್ನೋ ಕಾರಣಕ್ಕೆ ವೈದ್ಯರ ಸಲಹೆ ಮೇರೆಗೆ ಇವರ ಕಾಲನ್ನು ಕತ್ತರಿಸಲಾಯಿತು..! ಕಾಲು ಕಳೆದುಕೊಂಡಿದ್ದರಿಂದ ಕ್ರೀಡೆಯಲ್ಲಿ ಸಾಧನೆಯ ಶಿಖರವನ್ನೇರಬೇಕೆಂದು ಕಂಡಿದ್ದ ಕನಸಿಗೆ ತಣ್ಣೀರಿ ಎರಚಿದಂತಾಯಿತು..! ಕನಸು ನುಚ್ಚು ನೂರಾಯಿತು..! ಆದರೆ ಈ ದೈಹಿಕ ಅಂಗವಿಕಲತೆ ಇವರ ಸಾಧನೆಗೆ ಅಡ್ಡಲಾಗಿ ಬಹಳ ದಿನಗಳ ಕಾಲ ಉಳಿಯಲಿಲ್ಲ..! ಹಠದಿಂದ ಮುನ್ನುಗ್ಗಿದರು..! ಅಂಗವಿಕಲತೆಯನ್ನು ಸವಾಲಾಗಿ ಸ್ವೀಕರಿಸಿ ಗೆಲುವಿನತ್ತ ಮುಖ ಮಾಡಿದರು..!
ಕಾಲಿಲ್ಲದೇ ಇದ್ದರೂ ಮೌಂಟ್ಎವರೆಸ್ಟ್ ಏರಬೇಕೆಂದು ಕನಸು ಕಂಡರು..! 2012ರ ಮಾರ್ಚ್ 3ರಿಂದ ಉತ್ತರಕಾಶಿಯ ಟಾಟಾ ಸ್ಟೀಲ್ ಅಡ್ವೆಂಚರ್ ಫೌಂಡೇಶನ್-ರನ್ ಟ್ರೈನಿಂಗ್ ಕ್ಯಾಂಪ್ನಲ್ಲಿ ತರಬೇತಿ ಪಡೆದರು..! ಕಾಲಿಲ್ಲದೇ ಇದ್ದರೂ ಧೃತಿಗೆಡದೆ ಬಚೇಂದ್ರಿ ಪಾಲ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದರು..! ಕ್ಯಾನ್ಸರ್ ಅನ್ನೇ ಗೆದ್ದು ಬಂದ ಕ್ರಿಕೆಟಿಗ ಯುವರಾಜ್ ಸಿಂಗ್ರನ್ನು ನೆನೆದು, ಸ್ಪೂರ್ತಿ ಪಡೆದು ಒಂದೊಂದೆ ಹೆಜ್ಜೆಯನ್ನು ನಿಧಾನಕ್ಕೆ ಇಡುತ್ತಾ ಮೌಂಟ್ ಎವರೆಸ್ಟ್ ಏರಿಯೇ ಬಿಟ್ಟರು..!
ರೈಲು ಅಪಘಾತದಲ್ಲಿ ಕಾಲನ್ನು ಕಳೆದು ಕೊಂಡು ಆಸ್ಪತ್ರೆಯಲ್ಲಿರುವಾಗ ಮೌಂಟ್ ಎವರೆಸ್ಟ್ ಕುರಿತ ಪುಸ್ತಕವನ್ನು ಓದಿ, ನಾನೂ ಅದನ್ನು ಏರಬೇಕೆಂದು ಕನಸು ಕಂಡಿದ್ದ ಇವರು ಕೃತಕ ಕಾಲಿನಲ್ಲೇ ಮೇ.21,2013 ರಂದು ಎವರೆಸ್ಟ್ ಏರಿಯೇ ಬಿಟ್ಟರು..! ಕನಸನ್ನು ನನಸು ಮಾಡಿಕೊಂಡರು..! ಕೃತಕ ಕಾಲಿನಲ್ಲಿ ಎತ್ತರದ ಶಿಖರವನ್ನೇರೋ ಮೂಲಕ ದೇಶದ ಹೆಮ್ಮೆಯ ಸಾಧಕಿ ಎನಿಸಿದ್ದರು..! ಈಗ ಎರಡನೇ ಮೌಂಟ್ ಎವರೆಸ್ಟ್ ಏರುವ ಮೂಲಕ ಸುದ್ದಿಯಲ್ಲಿದ್ದಾರೆ..! ಇವರೀಗ ಅರ್ಜೆಂಟೈನಾದ ಅಕಾಂಗೊ ಪರ್ವತವೇರಿದ್ದಾರೆ..!
ಎರಡನೇ ಮೌಂಟ್ ಎವರೆಸ್ಟ್ ಎಂದೇ ಕರೆಯಲ್ಪಡುವ ಅಕಾಂಗೊವನ್ನು ಡಿಸೆಂಬರ್ 25(2015)ರಂದು ಏರಿ ಅದರ ತುತ್ತ ತುದಿಯಲ್ಲಿ ನಮ್ಮ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ..! ಜಗತ್ತಿನ ಏಳು ಪರ್ವತಗಳನ್ನು ಏರುವ ಗುರಿಯನ್ನು ಹೊಂದಿರೋ ಇವರು ಈಗ 5 ಪರ್ವತಗಳನ್ನು ಯಶಸ್ವಿಯಾಗಿ ಏರಿದ್ದಾರೆ..! ಇವರಿಗೆ ಪದ್ಮಶ್ರಿ ಪ್ರಶಸ್ತಿ ಕೂಡ ಲಭಿಸಿದೆ..!
ಅಂದಹಾಗೆ ಈ ಸಾಧಕಿಯ ಹೆಸರನ್ನು ಎಲ್ಲರೂ ಕೇಳಿರುತ್ತೀರಿ..! ಇವರು ಬೇರ್ಯಾರು ಅಲ್ಲ ನಮ್ಮ ದೇಶದ ಹೆಮ್ಮೆಯ ಮಹಿಳೆ ಅರುಣಿಮಾ ಸಿನ್ಹಾ.

  • ಶಶಿಧರ ಡಿ ಎಸ್ ದೋಣಿಹಕ್ಲು

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

ಒಂದೇ ಇನ್ನಿಂಗ್ಸ್ ನಲ್ಲಿ 1009 ರನ್ ಬಾರಿಸದ ಪೋರ..! ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಆಟೋ ಚಾಲಕನ ಮಗ..!

ಕನ್ನಡದವರು ಅಂದ್ರೆ ಏನಂದುಕೊಂಡಿದ್ದಾರೆ..? ಅಷ್ಟಕ್ಕೂ ಪರಿಸ್ಥಿತಿ ಯಾಕೆ ಹೀಗಾಗಿದೆ ಗೊತ್ತಾ..? ಈ ವೀಡಿಯೋ ನೋಡಿ..!

6ನೇ ಕ್ಲಾಸ್ ಫೇಲ್ ಆದವಳು ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೆ ಟಾಪ್ 2 ರ್ಯಾಂಕ್ ಪಡೆದಳು..!

ಕಳ್ಳನಿಂದ ಅಮ್ಮನನ್ನು ಕಾಪಾಡಿದ 13ರ ಪೋರ..! ಕೆಚ್ಚೆದೆಯ ಬಾಲಕನಿಗೆ ನ್ಯಾಷನಲ್ ಬ್ರೇವರಿ ಅವಾರ್ಡ್..!

ಹೆಂಡತಿಗಾಗಿ ಸರ್ವಸ್ವವನ್ನೇ ತ್ಯಾಗ ಮಾಡಿದ ಪತಿದೇವ..! ಇವರು ಕಳೆದ 59 ವರ್ಷದಿಂದಲೂ ಹೆಂಡತಿಯ ಸೇವೆ ಮಾಡ್ತಿದ್ದಾರೆ..!

ಕಿಲ್ಲಿಂಗ್ ವೀರಪ್ಪನ್ ಸಿನಿಮಾ ನೀವಿನ್ನೂ ನೋಡಿಲ್ವಾ..?

800 ವರ್ಷ ಇತಿಹಾಸ ಇರೋ ಮೊಬೈಲ್..! ನೀವಿನ್ನೂ 800 ವರ್ಷ ಇತಿಹಾಸದ ಮೊಬೈಲ್ ನೋಡಿಲ್ವಾ..?!

ರತನ್ ಟಾಟಾ ಹೇಳಿದರು ಅನ್ನದ ಪಾಠ ಜರ್ಮನಿಯಲ್ಲಿ ಪಾಠ ಕಲಿಸಿದ್ದಳಂತೆ ಓರ್ವ ಅಜ್ಜಿ..!

LEAVE A REPLY

Please enter your comment!
Please enter your name here