ಬ್ರೇಕಿಂಗ್ ನ್ಯೂಸ್… ‘ದಿ ಕಪಿಲ್ ಶರ್ಮಾ ಶೋ’ ಗೆ ಸಿದ್ದು ಗುಡ್‍ಬೈ…?

0
162

ಸದಾ ಹಸೋನ್ಮುಖಿಯಾಗಿ, ಫಟಾಫಟ್ ಮಾತಿನ ಮೂಲಕ ಎಲ್ಲರ ಮನೆ ಮಾತಾಗಿದ್ದ ಪಂಜಾಬ್‍ನ ಮಾಜಿ ಕ್ರಿಕೇಟಿಗ ಹಾಗೂ ರಾಜಕೀಯ ರಂಗದಲ್ಲಿ ಸದ್ದು ಮಾಡ್ತಾ ಇರೋ ನವಜೋತ್ ಸಿಂಗ್ ಸಿದ್ದು ಇನ್ಮೇಲೆ ಸೋನಿ ವಾಹಿನಿಯಲ್ಲಿ ಪ್ರಸಾರವಾಗ್ತಾ ಇರೋ ‘ದಿ ಕಪಿಲ್ ಶರ್ಮಾ ಶೋ’ ನಲ್ಲಿ ಕಾಣಿಸಿಕೊಳ್ಳೊದು ಅನುಮಾನವಾಗಿದೆ..? ಕ್ರಿಕೆಟ್‍ನಿಂದ ರಾಜಕೀಯ ಪ್ರವೇಶ ಮಾಡಿ ಅಲ್ಲಿ ತಮ್ಮದೇ ಆದ ಪಕ್ಷವನ್ನು ಕಟ್ಟಿ ಪಂಜಾಬ್ ಜನತೆಯ ಸೇವೆಗೆ ಮುಂದಾಗಿರುವ ಸಿದ್ದು ಅವರು ಕಿರುತೆರೆಯ ಸುಪ್ರಸಿದ್ದ ‘ಕಾಮಿಡಿ ಶೋ’ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎನ್ನಲಾಗ್ತಾ ಇದೆ…!
ಈ ಹಿಂದೆ ಕಲರ್ಸ್‍ನಲ್ಲಿ ಪ್ರಸಾರವಾಗ್ತಾ ಇದ್ದ ‘ಕಾಮಿಡಿ ನೈಟ್ಸ್ ವಿತ್ ಕಪೀಲ್’ ಶೋ ನಿಂದ ಕಪಿಲ್ ಶರ್ಮಾ ಹೊರ ನಡೆದ ನಂತರ ಅವರ ಜೊತೆಯಲ್ಲಿ ಸಿದ್ದು ಕೂಡ ಹೊರ ನಡೆದಿದ್ದರು. ಅನಂತರ ಸಿದ್ದು ಅವರು ಯಾವ ಕಾಮಿಡಿ ಶೋನಲ್ಲೂ ಕಾಣಿಸಿಕೊಳ್ಳುವುದಿಲ್ಲ ಎಂಬ ವಧಂತಿಗಳು ಹಬ್ಬುತ್ತಿದ್ದಂತೆ ಸೋನಿಯಲ್ಲಿ ಪ್ರಸಾರವಾದ ‘ದಿ ಕಪಿಲ್ ಶರ್ಮಾ ಶೋ’ ಕಾರ್ಯಕ್ರಮದಲ್ಲಿ ಸಿದ್ದು ಅವರು ಕಾಣಿಸಿಕೊಳ್ಳೋ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದರು.
ಆದರೆ ಇದೀಗ ಸಿದ್ದು ಮತ್ತೆ ಎಲ್ಲಾ ರಿಯಾಲಿಟಿ ಶೋನಿಂದ ಹೊರಗಳಿಯಲು ಇಚ್ಚಿಸಿದ್ದು ಮುಂದಿನ ತಿಂಗಳಿಂದ ಕಪಿಲ್ ಶರ್ಮಾ ಶೋನಲ್ಲಿ ಸಿದ್ದು ಕಾಣಿಸಿಕೊಳ್ಳೋದು ಅನಿಮಾನ ಎಂದು ಹೇಳಲಾಗ್ತಾ ಇದೆ. ಶೋ ತೊರೆದು ಅಕ್ಟೋಬರ್ ತಿಂಗಳಲ್ಲಿ ಅಮೃತಸರಕ್ಕೆ ಭೇಟಿ ನೀಡಲಿರುವ ಸಿದ್ದು, ಅವರ ಅದ್ಧೂರಿ ಸ್ವಾಗತಕ್ಕೆ ಈಗಾಗಲೇ ಎಲ್ಲಾ ರೀತಿಯ ತಯಾರಿಗಳು ನಡೆಯುತ್ತಿವೆ. ಆವಾಜ್-ಈ-ಪಂಜಾಬ್ ಸಿದ್ದು ಕಟ್ಟಿರುವ ಹೊಸ ರಾಜಕೀಯ ಪಕ್ಷವಾಗಿದೆ. ಇನ್ನು ಸಿದ್ದು ಇಲ್ಲದ ಶೋ ಯಾವ ರೀತಿ ಇರುತ್ತೋ ಎಂಬ ನಿರಾಶಾ ಭಾವ ಎಲ್ಲರಲ್ಲೂ ಮೂಡಿದೆ..!

Like us on Facebook  The New India Times

POPULAR  STORIES :

ಕಾವೇರಿಗಾಗಿ ಮಣ್ಣು ತಿಂದು ವಿನೂತನ ಪ್ರತಿಭಟನೆ..!

ಬೈಕ್‍ನಲ್ಲಿ ಸ್ಟಂಟ್ ಪ್ರದರ್ಶನ ಮಾಡುವ ಯುವಕರೇ ಎಚ್ಚರಾ… ಎಚ್ಚರ…!

ಚಲಿಸುತ್ತಿರುವ ಕಾರಿನಲ್ಲೇ ಯುವತಿಯರ ‘ಕಿಸ್ಸಿಂಗ್ ಕಿಸ್ಸಿಂಗ್’… ಆರ್.ಟಿ ನಗರದಲ್ಲಿ ಸರಣಿ ಅವಘಡ..!

ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!

ತಾಮ್ರದ ಪಾತ್ರೆಯಲ್ಲಿ ಕೂಡಿಟ್ಟ ನೀರನ್ನು ಸೇವಿಸುವುದು ಉತ್ತಮ ಯಾಕೆ..?

ಗ್ರೀನ್ ಟೀ ಹುಚ್ಚು ನಿಮಗೂ ಇದೆಯಾ?