ಚಾಕ್ಲೇಟ್ ಸವಿಯಲು ಕೆಲಸಗಾರರು ಬೇಕಾಗಿದ್ದಾರೆ..! ಸಂಬಳ 2474610 ರೂಪಾಯಿ ಅಂತೆ..!

0
94

ಯಾರಾದರೂ ಬಿಟ್ಟಿಯಾಗಿ ಚಾಕಲೇಟ್ ಕೊಟ್ರೆ ಥ್ಯಾಂಕ್ಸ್ ಕೂಡಾ ಹೇಳದೇ ಮುಕ್ಕಿಬಿಡುತ್ತೇವೆ. ಆನಂತರವೇ ಧನ್ಯವಾದ ಅರ್ಪಿಸುತ್ತೇವೆ. ಆದರೆ ಚಾಕಲೇಟ್ ತಿನ್ನುವುದೇ ಕೆಲಸವಾಗಿಬಿಟ್ಟರೇ..? ಜೀವನವೇ ಪಾವನವಾಗಿಬಿಡುತ್ತದೆ ಅಂತೀರಾ..? ಹೌದು ಅಂಥದ್ದೊಂದು ಕೆಲಸಕ್ಕೆ ಜನರು ಬೇಕಾಗಿದ್ದಾರಂತೆ. ಅದಕ್ಕೂ ಭರ್ಜರಿ ಸಂಬಳ ಕೂಡಾ ಇದೆಯಂತೆ..!
ಗ್ರೀನ್ ಅಂಡ್ ಬ್ಲಾಕ್ ಎಂಬ ಚಾಕ್ಲೇಟ್ ಕಂಪನಿಯೊಂದು ತಮ್ಮ ಹೊಸ ಫ್ಯಾಕ್ಟರಿಗೆ ಚಾಕ್ಲೇಟ್ ಟೇಸ್ಟರ್ ಹುದ್ದೆಗೆ ಉದ್ಯೋಗಿಗಳು ಬೇಕು ಎಂದು ಹೇಳಿದೆ. ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿ ಚಾಕ್ಲೇಟನ್ನು ಸವಿದು ನೋಡಿ ರುಚಿ ಹೇಗಿದೆ ಎಂದು ಹೇಳಿದರಾಯ್ತು. ಇನ್ನುಳಿದ ಜವಾಬ್ದಾರಿಯೆಂದರೆ ಚಾಕ್ಲೇಟ್ ಗುಣಮಟ್ಟ ಪರಿಶೀಲಿಸುವುದು, ಬೇರೆ ಕಂಪನಿಗಳ ಚಾಕ್ಲೇಟ್ ಗಳನ್ನು ಟೇಸ್ಟ್ ಮಾಡಿದರೆ ಸಾಕು ಕೆಲಸ ಮುಗಿದಂತೆ.
ಚಾಕಲೇಟ್ ಸವಿದು ರುಚಿ ಹೇಳುವುದರಲ್ಲಿ ಮಹಿಳೆಯರೇ ಬೆಸ್ಟ್ ಅಂತೆ. ಈ ಮಾತನ್ನು ಯಾರೂ ಹೇಳುತ್ತಿಲ್ಲ. ಬದಲಿಗೆ ಗ್ರೀನ್ ಅಂಡ್ ಬ್ಲಾಕ್ ಚಾಕ್ಲೇಟ್ ಕಂಪನಿಯ ಚಾಟ್ಲೇಟ್ ಟೇಸ್ಟರ್ ನ ಹೆಡ್ ಮಿಖಾ ಕಾರ್ಗಿಲ್ ಎಂಬುವವರು ಹೇಳಿದ್ದಾರೆ. ಆದ್ದರಿಂದ ಈ ಕೆಲಸಕ್ಕೆ ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆಯಂತೆ.

original-201301-HD-best-chocolate-frans-chocolates
ಗ್ರೀನ್ ಅಂಡ್ ಬ್ಲಾಕ್ ಕಂಪನಿಯು ಚಾಕ್ಲೇಟ್ ಟೇಸ್ಟರ್ ಗಳಿಗೆ ಭರ್ಜರಿ ಸಂಬಳ ನೀಡುತ್ತಿದೆ. ಅದೂ ಕೂಡಾ ವರ್ಷಕ್ಕೆ 35 ಸಾವಿರ ಬ್ರಿಟಿಷ್ ಡಾಲರ್ ಅಂತೆ. ಅದನ್ನು ಭಾರತದ ರೂಪಾಯಿಗೆ ಪರಿವರ್ತಿಸಿದರೆ ಬರೋಬ್ಬರಿ 35 ಲಕ್ಷ ರೂಪಾಯಿ ಆಗುತ್ತದೆ..!
ಇಡೀ ಜಗತ್ತಿನಲ್ಲಿ ಇಂಥದ್ದೊಂದು ಕೆಲಸ ಸಿಗುವುದು ಅಪರೂಪ. ಅವರೇ ತಿನ್ನಲು ಚಾಕ್ಲೇಟ್ ಕೊಡ್ತಾರೆ, ಜೊತೆಗೆ ಸಂಬಳವನ್ನೂ ನೀಡುತ್ತಾರೆ ಎಂದರೆ ಸುಮ್ಮನೇನಾ..? ಆದರೆ ಇಲ್ಲೂ ಒಂದು ಸಮಸ್ಯೆ ಇದೆ. ಅದೇನೆಂದರೆ ಸಕ್ಕರೆ ಖಾಯಿಲೆ ಬೇಗನೇ ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ. ಅದಕ್ಕೆ ಅಲ್ಲವೇ ಗ್ರೀನ್ ಅಂಡ್ ಬ್ಲ್ಯಾಕ್ ನವರು 35 ಲಕ್ಷ ರೂಪಾಯಿ ಸಂಬಳ ನೀಡುತ್ತಿರುವುದು..!?

 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ಮೂರನೇ ಕ್ಲಾಸ್ ಹುಡುಗಿ ಗ್ರಂಥಪಾಲಕಿ..! ಕೊಳಗೇರಿ ಮಕ್ಕಳಿಗೆ ಗ್ರಂಥಾಲಯ ತೆರೆದ ಜಾಣೆ..!

ಅವರಿಬ್ಬರ ಸಾವಿನ ಅಂತರ ಒಂದು ಗಂಟೆ ಮಾತ್ರ..!

ಈ ಬದುಕನ್ನು ಅತಿಭಾವುಕರಾಗಿ ಪ್ರೀತಿಸೋಣ, ಬೇಕಿದ್ದರೆ ಆ ಪ್ರೀತಿಗೆ ಆತ್ಮ ಹಿರಿಹಿರಿ ಹಿಗ್ಗಿ ಹೃದಯವೇ ಒಡೆದುಹೋಗಲಿ.!

ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!

ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..

ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!

ನಾವು ಭಾರತೀಯರು.. ಹೆಮ್ಮೆಯಿಂದ ಹೇಳಿಕೊಳ್ಳಿ ಏಕೆಂದರೆ..?

ಅಭಿಷೇಕ್ ಗೆ ಗೂಗಲ್ ನೀಡುತ್ತೆ 20000000 ರೂಪಾಯಿಗಳ ಸಂಬಳ..! ಐಐಟಿ ವಿದ್ಯಾರ್ಥಿಗೆ ಕೋಟಿ ಕೋಟಿ ಸಂಬಳದ ಆಫರ್ ..!

ಫೇಸ್ ಬುಕ್ ಜನಪ್ರಿಯತೆಯಲ್ಲಿ ಮೊದಲನೇ ಸ್ಥಾನದಲ್ಲಿ ಯಾರಿದ್ದಾರೆ ಗೊತ್ತಾ..?! ಈ ಪಟ್ಟಿಯನ್ನು ನೋಡಿದ್ರೆ, ನಿಮಗೆ ಖಂಡಿತಾ ಆಶ್ಚರ್ಯವಾಗುತ್ತೆ..!

ಅವಳಲ್ಲದೆ ಅವನನ್ನು ಬೇರೆ ಯಾರೂ ಮದುವೆ ಆಗ್ತಿರಲಿಲ್ಲ..! ಈ ಸ್ಟೋರಿ ಓದಿದ ಮೇಲೆ ಹೇಳ್ತೀರಾ, ಅವಳು ನಿಜಕ್ಕೂ ಗ್ರೇಟ್..!

ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!

 

LEAVE A REPLY

Please enter your comment!
Please enter your name here