No menu items!
16 C
Munich
Tuesday, September 29, 2026

ಹೈಕೋರ್ಟ್ ಬಳಿಕ ಸುಪ್ರೀಂ ಮೆಟ್ಟಿಲೇರಿದ ದರ್ಶನ್ ದಂಪತಿ! ಪ್ರದೋಷ್ ಹೇಳಿಕೆಯತ್ತ ಎಲ್ಲರ ಚಿತ್ತ

Must read

ಹೈಕೋರ್ಟ್ ಬಳಿಕ ಸುಪ್ರೀಂ ಮೆಟ್ಟಿಲೇರಿದ ದರ್ಶನ್ ದಂಪತಿ! ಪ್ರದೋಷ್ ಹೇಳಿಕೆಯತ್ತ ಎಲ್ಲರ ಚಿತ್ತ

 ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರು ಹೈಕೋರ್ಟ್ ತೀರ್ಪುಗಳನ್ನು ಪ್ರಶ್ನಿಸಿ ದೇಶದ ಸರ್ವೋಚ್ಛ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ಗೆ (Supreme Court) ಒಟ್ಟು ಮೂರು ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.

 ಪ್ರಕರಣದಲ್ಲಿ ಮಾಫಿ ಸಾಕ್ಷಿ (Approver) ನಿಯಮಾವಳಿಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ತೀರ್ಪುಗಳನ್ನು ಪ್ರಶ್ನಿಸಿ ನಟ ದರ್ಶನ್ ಸುಪ್ರೀಂ ಕೋರ್ಟ್‌ಗೆ ಎರಡು ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದಾರೆ. “ಮಾಫಿ ಸಾಕ್ಷಿ ಆದೇಶ ನೀಡುವ ಮುನ್ನ ಸಹ-ಆರೋಪಿಯ ವಾದ ಆಲಿಸುವ ಅಗತ್ಯವಿಲ್ಲ” ಎಂಬ ಹೈಕೋರ್ಟ್‌ನ ತೀರ್ಪು ಹಾಗೂ ಮಾಫಿ ಸಾಕ್ಷಿ ನಿರ್ಧಾರವನ್ನು ಮರುಪರಿಶೀಲಿಸುವಂತೆ ನೀಡಿದ್ದ ಆದೇಶವನ್ನು ದರ್ಶನ್ ಪ್ರಶ್ನಿಸಿದ್ದಾರೆ.

ಇನ್ನೊಂದೆಡೆ, ಮಾಫಿ ಸಾಕ್ಷಿ ಆದೇಶವನ್ನು ಎತ್ತಿಹಿಡಿದಿದ್ದ ಹೈಕೋರ್ಟ್‌ನ ಸೆಪ್ಟೆಂಬರ್ 23ರ ತೀರ್ಪನ್ನು ಪ್ರಶ್ನಿಸಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತೊಂದು ಮೇಲ್ಮನವಿ ಸಲ್ಲಿಸಿದ್ದಾರೆ. ಈ ಅರ್ಜಿಗಳ ವಿಚಾರಣೆ ಇದೇ ವಾರದಲ್ಲೇ ನಡೆಯುವ ಸಾಧ್ಯತೆಯಿದೆ.

ಮತ್ತೊಂದೆಡೆ, ರೇಣುಕಾಸ್ವಾಮಿ ಕೊಲೆ ಕೇಸ್‌ನ ಮಾಫಿ ಸಾಕ್ಷಿ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಕೊಲೆಯಲ್ಲಿ ನಟ ದರ್ಶನ್ ಅವರ ಪಾತ್ರವೇನು ಎಂಬುದನ್ನು ಆರೋಪಿ ಪ್ರದೋಷ್ ವಿಚಾರಣೆ ವೇಳೆ ಬಿಚ್ಚಿಡುತ್ತಿದ್ದಾರೆ. ಪ್ರದೋಷ್ ನೀಡುತ್ತಿರುವ ಹೇಳಿಕೆಗಳು ಪ್ರಕರಣದಲ್ಲಿ ತೀವ್ರ ಪ್ರಾಮುಖ್ಯತೆ ಪಡೆದುಕೊಂಡಿದ್ದು, ದರ್ಶನ್ ಪಾಳಯದಲ್ಲಿ ಆತಂಕ ಮತ್ತು ನಡುಕ ಸೃಷ್ಟಿಸಿದೆ. ಪ್ರದೋಷ್ ಅವರ ವಿಚಾರಣೆ ಇಂದೂ ಸಹ ಕೋರ್ಟ್‌ನಲ್ಲಿ ಮುಂದುವರಿದಿದೆ.

- Advertisement -spot_img

More articles

- Advertisement -spot_img

Latest article