No menu items!
8 C
Munich
Saturday, May 2, 2026

ಕೊನೆಗೂ ಚಾಲೆಜಿಂಗ್ ಸ್ಟಾರ್ ದರ್ಶನ್‍ಗೆ ನೋಟಿಸ್ ಜಾರಿ..!

Must read

ಬೆಂಗಳೂರಿನ ರಾಜಕಾಲುವೆ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಚಾಲೆಜಿಂಗ್ ಸ್ಟಾರ್ ದರ್ಶನ್ ಅವರ ಮನೆ ಹಾಗೂ ಶಾಮನೂರು ಆಸ್ಪತ್ರೆ ಸೇರಿದಂತೆ ಐಡಿಯಲ್ ಹೋಮ್ಸ್ ಲೇಔಟ್‍ನಲ್ಲಿರುವ ಕೆಲವು ಕಟ್ಟಡ ತೆರವು ಸಂಬಂಧಿಸಿದಂತೆ ಸ್ವಲ್ಪ ನಿರಾಳ ಹೊಂದಿದ ಅಲ್ಲಿನ ಜನರಿಗೆ ಮತ್ತೆ ಭಾರಿ ಶಾಕ್ ಆಗಿದೆ. ನಟ ದರ್ಶನ್ ಸೇರಿದಂತೆ ಒಟ್ಟು 67 ಒತ್ತುವರಿದಾರರಿಗೆ ಜಿಲ್ಲಾಡಳಿತ ನೋಟೀಸ್ ಜಾರಿ ಮಾಡಿದ್ದಲ್ಲದೇ ಒತ್ತುವರಿ ಸಂಬಂಧ ದಾಖಲೆಗಳನ್ನು ಇನ್ನು ಏಳು ದಿನಗಳೊಳಗಾಗಿ ಸಲ್ಲಿಸಬೇಕೆಂದು ತಿಳಿಸಿದೆ.
ಆರ್‍ಆರ್ ನಗರದ ಐಡಿಯಲ್ ಹೋಮ್ ಲೇಔಟ್‍ನಲ್ಲಿರುವ ನಟ ದರ್ಶನ್ ಮನೆ, ಶಾಮನೂರು ಆಸ್ಪತ್ರೆಯಿಂದ ರಾಜಕಾಲುವೆಗೆ ಸೇರಿದೆ ಎನ್ನಲಾದ ಸುಮಾರು 22 ಗುಂಟೆ ಜಾಗ ಒತ್ತುವರಿ ಮಾಡಿರುವುದು ಸ್ಪಷ್ಟವಾಗಿರುವ ಹಿನ್ನಲೆಯಲ್ಲಿ ಅಲ್ಲಿನ ಜನರಿಗೆ ನೋಟೀಸ್ ಜಾರಿ ಮಾಡಲಾಗಿದೆ.
ಬೆಂಗಳೂರು ನಗರದ ಡಿ.ಸಿ. ಶಂಕರ್ ಅವರ ಆದೇಶದ ಮೇರೆಗೆ ಅಲ್ಲಿನ 33 ಮನೆಗಳು ಹಾಗೂ 36 ಕಟ್ಟಡಗಳಿಗೆ ನೋಟೀಸ್ ಜಾರಿ ಮಾಡಿ ಒತ್ತುವರಿದಾರರು ಅಕ್ಟೋಬರ್ ಏಳರ ಒಳಗಾಗಿ ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕೆಂದು ಸೂಚನೆ ನೀಡಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಒತ್ತುವರಿ ತೆರವಿಗೆ ಆದೇಶ ನೀಡಲಾಗುವುದು ಎಂದು ಹೇಳಿದ್ದಾರೆ.

Like us on Facebook  The New India Times

POPULAR  STORIES :

ವಿದ್ಯಾರ್ಥಿಯ ಮೇಲೆ ಲೇಡಿ ಕಂಡಕ್ಟರ್‍ನ ಗೂಂಡಾಗಿರಿ..! Lady Conductor Fight

ಕೇಳ್ಬೇಡ ಕಣೇ ಸುಮ್ಕಿರೆ…! Cauvery Issue Comedy Song

ಎಚ್ಚರಿಕೆ.. ದೇಶದ ಪ್ರಮುಖ ನಗರಗಳಲ್ಲಿ ಪಾಕ್ ಉಗ್ರರು ದಾಳಿ ನಡೆಸುವ ಸಾಧ್ಯತೆ..!

ಅರ್ಜುನ್ ತೆಂಡೂಲ್ಕರ್ ರಮೇಶನಾದ್ರೆ..!! ಸುರೇಶ್ ಯಾರು ಗೊತ್ತಾ..?

ಬಿಗ್ ಬಾಸ್ ಮನೆಯ ರಹಸ್ಯ ಲೀಕ್..!

ಜಿಯೋ ಕಾಲ್‍ಡ್ರಾಪ್ ಸಮಸ್ಯೆ: ಏರ್‍ಟೆಲ್, ಐಡಿಯಾ, ವೊಡಾಫೋನ್ಗೆ 9900ಕೋಟಿ ದಂಡ..?

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article