No menu items!
25 C
Munich
Monday, July 13, 2026

ಕಾಶ್ಮೀರ ಪೈಲ್ಸ್ ಸಿನಿಮಾದ ಬಗ್ಗೆ ಇದ್ದ ಆಸಕ್ತಿ ‌ಪಂಡಿತರ ರಕ್ಷಣೆಯ ವಿಚಾರದಲ್ಲಿ ಯಾಕಿಲ್ಲ

Must read

ಬೆಂಗಳೂರು : ಕಾಶ್ಮೀರ ಪೈಲ್ಸ್ ಸಿನಿಮಾದ ಬಗ್ಗೆ ಇದ್ದ ಆಸಕ್ತಿ ‌ಪಂಡಿತರ ರಕ್ಷಣೆಯ ವಿಚಾರದಲ್ಲಿ ಯಾಕಿಲ್ಲ ಎಂದು ಶಾಸಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಅವರು, ಕಾಶ್ಮೀರದಲ್ಲಿ ಉಗ್ರರಿಂದ‌ ಹತ್ಯೆ ಭೀತಿಯಿಂದ ಕಾಶ್ಮೀರ್ ಪಂಡಿತರು ಸಾಮೂಹಿಕ ವಲಸೆ ಮಾಡುತ್ತಿದ್ದಾರೆ. ರಕ್ಷಣೆಗಾಗಿ ಕೇಂದ್ರದ ಬಳಿ ರೋಧಿಸುತ್ತಿದ್ದಾರೆ. ಆದರೆ ನಮ್ಮ ಪ್ರಧಾನಿಗೆ ಪಂಡಿತರ ರೋಧನೆ ಕಾಣಿಸುತ್ತಲೇ ಇಲ್ಲ. ಕಾಶ್ಮೀರ ಪೈಲ್ಸ್ ಸಿನಿಮಾದ ಬಗ್ಗೆ ಇದ್ದ ಆಸಕ್ತಿ ‌ಪಂಡಿತರ ರಕ್ಷಣೆಯ ವಿಚಾರದಲ್ಲಿ ಯಾಕಿಲ್ಲ. ಕೆಲದಿನಗಳಿಂದ ಕಾಶ್ಮೀರದಲ್ಲಿ ಪಂಡಿತರ ಸರಣಿ ಹತ್ಯೆ ನಡೆಯುತ್ತಿದೆ. ಕೇಂದ್ರಾಡಳಿತ ಪ್ರದೇಶ ಕಾಶ್ಮೀರ ಸಾವಿನ ಕಣಿವೆಯಾಗಿದೆ. ಈಗ ನಡೆಯುತ್ತಿರುವ ಪಂಡಿತರ ಹತ್ಯೆಗೆ ಯಾರು ಹೊಣೆ? ಹತ್ಯೆಯ ಬಗ್ಗೆ ಬಿಜೆಪಿಯ ಒಬ್ಬರೇ ನಾಯಕರು ತುಟಿ ಬಿಚ್ಚುತ್ತಿಲ್ಲ. ಕಾಶ್ಮೀರ ಫೈಲ್ಸ್ -2 ಮಾಡಲು ಈಗ ಬಿಜೆಪಿಯವರು ವಿವೇಕ್ ಅಗ್ನಿಹೋತ್ರಿಗೆ ಹೇಳುತ್ತಾರೆಯೆ? ಎಂದು ಪ್ರಶ್ನಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article