ಮನೆಯೇ ಮೃಗಾಲಯ, ಪ್ರಾಣಿಗಳೇ ಕುಟುಂಬಸ್ಥರು..!

0
94

ಡಾ. ಪ್ರಕಾಶ್ ಆಮ್ಟೆ.. ಮಹಾರಾಷ್ಟ್ರದ ಹೇಮಾಲ್ಕಸಾ ಎಂಬ ಊರಿನಲ್ಲಿ ವೈದ್ಯ ವೃತ್ತಿಯನ್ನು ಮಾಡ್ತಿದ್ದಾರೆ. ತಮ್ಮ ವಿಶಿಷ್ಟ ಕಾರ್ಯದ ಮೂಲಕವೇ ಇಡೀ ದೇಶದ ಗಮನ ಸೆಳೆದ ಹೆಗ್ಗಳಿಕೆ ಇವರದ್ದು. ಇಷ್ಟಕ್ಕೂ ಪ್ರಕಾಶ್ ಆಮ್ಟೆಯವರು ಮಾಡಿದ ಅಂಥಾ ಮಹಾನ್ ಸಾಧನೆ ಏನು ಅಂತೀರಾ ಈ ಸ್ಟೋರಿ ನೋಡಿ.
ಬಡ ಜನರಿಗಾಗಿ 1973ರಲ್ಲೇ ಬಿರಾದಾರಿ ಪ್ರಕಲ್ಪ್ ಅನ್ನೋ ಪ್ರಾಜೆಕ್ಟ್ ಆರಂಭಿಸಿದರು. ಅದರ ಮೂಲಕ ಕಡುಬಡವರಿಗೆ ಚಿಕಿತ್ಸೆ ನೀಡುವುದು ಅವರ ಉದ್ದೇಶವಾಗಿತ್ತು. ಅದು ಅದ್ಭುತ ಯಶಸ್ಸನ್ನೂ ಕಂಡಿದೆ. ವಿಶೇಷವೆಂದರೆ ಅವರು ವರ್ಷಕ್ಕೆ 40,000ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದರ ಜೊತೆಗೆ ಮತ್ತೊಂದು ಪ್ರಮುಖ ಕಾರ್ಯವನ್ನು ಮಾಡುತ್ತಿದ್ದಾರೆ. ಅದೇ ಪ್ರಾಣಿ ಸೇವೆ..!

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಹೇಮಾಲ್ಕಸಾದಲ್ಲಿ ಪ್ರಾಣಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೇಟೆಯಾಡುತ್ತಾರೆ. ಆ ವೇಳೆ ಸಾವನ್ನಪ್ಪುವ ಪ್ರಾಣಿಗಳು ಅನಾಥವಾಗುತ್ತವೆ. ಅಂಥಹ ಮರಿಗಳನ್ನು ತಂದು ತಮ್ಮ ಮನೆಯಲ್ಲಿಯೇ ಸಾಕುತ್ತಾರೆ. ಅಲ್ಲದೇ ಗಾಯಗೊಂಡ ಪ್ರಾಣಿಗಳಿಗೂ ಕೂಡಾ ಚಿಕಿತ್ಸೆ ನೀಡಿ ಕಾಡಿಗೆ ಬಿಡುತ್ತಾರೆ. ಸಧ್ಯಕ್ಕೆ ಡಾ. ಪ್ರಕಾಶ್ ಆಮ್ಟೆ ಮನೆಯಲ್ಲಿ ಹಾವು, ಮೊಸಳೆ, ನವಿಲು, ಗೂಬೆ, ತೋಳ, ಚಿರತೆ, ಸಿಂಹ, ಜಿಂಕೆ ಸೇರಿದಂತೆ ಹತ್ತಾರು ಪ್ರಾಣಿಗಳಿವೆ.
ಪ್ರಕಾಶ್ ಆಮ್ಟೆ ಮನೆಯಲ್ಲಿರುವ ಪ್ರಾಣಿಗಳಿಗೆ ಸರಿಯಾದ ಸಮಯಕ್ಕೆ ಆಹಾರ, ನೀರನ್ನು ಪೋರೈಸುತ್ತಾರೆ. ಇದಕ್ಕೆ ಕುಟುಂಬಸ್ಥರೂ ಕೂಡಾ ಸಾಥ್ ನೀಡಿದ್ದು, ಪ್ರಾಣಿಗಳ ಪೋಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಪ್ರಕಾಶ್ ಆಮ್ಟೆಯವರ ಪತ್ನಿ ಡಾ. ಮಂದಾಕಿನಿಯವರೂ ಕೂಡಾ ಈ ಕಾರ್ಯಕ್ಕೆ ಕೈ ಜೋಡಿಸಿದ್ದು, ಈ ದಂಪತಿಗೆ 2008ರಲ್ಲಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯೂ ಲಭಿಸಿದೆ. ಅಲ್ಲದೇ ಮಹಾರಾಷ್ಟ್ರ ಸರ್ಕಾರ ನೀಡುವ ಆದಿವಾಸಿ ಸೇವಕ್ ಪ್ರಶಸ್ತಿ ನೀಡಿದೆ. ಇನ್ನು ಇವರ ಸಾಧನೆ ಕೇಂದ್ರ ಸರ್ಕಾರಕ್ಕೂ ತಲುಪಿದ್ದು, ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಇನ್ನು `ಪ್ರಕಾಶ್ ಆಮ್ಟೆ’ ದಿ ರೀಯಲ್ ಹೀರೋ ಹೆಸರಿನಲ್ಲಿ ಆಮ್ಟೆ ಜೀವನಾಧಾರಿತ ಚಿತ್ರ ತೆರೆಕಂಡಿತ್ತು. ಚಿತ್ರದಲ್ಲಿ ಪ್ರಕಾಶ್ ಆಮ್ಟೆಯವರ ಪಾತ್ರವನ್ನು ನಾನಾ ಪಾಟೇಕರ್ ನಿರ್ವಹಿಸಿದ್ದರು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು.
ಇದರ ಮಧ್ಯೆ ಪ್ರಾಣಿಗಳನ್ನು ಕೊಲ್ಲುವ ಬದಲು, ಅವುಗಳನ್ನು ರಕ್ಷಿಸಿದರೆ ಬಹುದೊಡ್ಡ ಪುಣ್ಯ ಸಿಗುತ್ತದೆ ಎನ್ನುವ ಡಾ ಪ್ರಕಾಶ್ ಆಮ್ಟೆಯವರು ಸರ್ವರಿಗೂ ಮಾದರಿಯಾಗಿ ನಿಂತಿದ್ದಾರೆ.

  • ರಾಜಶೇಖರ ಜೆ

POPULAR  STORIES :

ಇದು ಭಾರತದ `ಶ್ರೀಮಂತ’ ಭಿಕ್ಷುಕರ ಕಥೆ..!

ವಿಶ್ವೇಶ್ವರಯ್ಯನವರ ಬಗ್ಗೆ ನಿಮಗೆಷ್ಟು ಗೊತ್ತು..? ಇವತ್ತಿನ ದಿನವಾದ್ರೂ ಅವರ ಬಗ್ಗೆ ತಿಳಿದುಕೊಳ್ಳಿ..

ಟಿವಿ ಸ್ಟೂಡಿಯೋದಲ್ಲೇ ಸಖತ್ ಫೈಟಿಂಗ್..! ಬಾಬಾಗೂ, ಲೇಡಿ ಜ್ಯೋತಿಷಿಗೂ ಲೈವ್ ಜಟಾಪಟಿ..!

ಅವನ ಕಣ್ಣು ಕಿವಿಯಲ್ಲಿತ್ತು..!? ಮಾನವ ಜಗತ್ತಿನಲ್ಲಿ ಇವನೊಂದು ಅದ್ಭುತ..!

ಗೂಗಲ್ ನಲ್ಲಿ ಯಾವ ದೇಶದ ಜನರು ಏನ್ ಏನ್ ಹುಡಕ್ತಾರೆ ಗೊತ್ತಾ..?

ಮದುವೆ ಆಯ್ತಾ..? ಡೈವೋರ್ಸ್ ಯಾವಾಗ..?!

ಸಿಹಿ ಚಹಾದ ಹಿಂದಿನ ಕಹಿ ಸತ್ಯ…!

ಲೋಡ್ ಶೆಡ್ಡಿಂಗ್ ಹೊಡೆತಕ್ಕೆ ಜನಸಾಮಾನ್ಯನ ಲೈಫ್ ಚಿಂದಿ ಚಿತ್ರಾನ್ನ..! 

ಅವತ್ತು ಎಮ್ಮೆ ಕಾಯುತ್ತಿದ್ದವ ಇಂದು ಬಿಪಿಒ ಕಂಪನಿಯ ಮಾಲಿಕ..! ರಿಯಲ್ ಹೀರೋ..

ಇಟ್ ಹ್ಯಾಪನ್ಸ್ ಓನ್ಲಿ ಇನ್ ದುಬೈ..!

ಸಿಸಿಟಿವಿ ಬಯಲು ಮಾಡ್ತು ಹೆಂಡತಿಯ “ಅತ್ತೆಪ್ರೀತಿ”

ಇಡೀ ಊರನ್ನೇ ಶ್ರೀಮಂತ ಮಾಡಿದ ವ್ಯಕ್ತಿಯ ಕಥೆ..!

ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!

 ಅವನು ಐಎಎಸ್ ಆಫೀಸರ್…ಇವನು ಗ್ರೇಟ್ ಕ್ರಿಕೆಟರ್…!

ನಿಮ್ ಮನೇಲೂ ಕರೆಂಟಿಲ್ವಾ..? ಏನೂ ಮಾಡಕ್ಕಾಗಲ್ಲ… ಈ ವೀಡಿಯೋ ನೋಡಿ ನಕ್ಕುಬಿಡಿ..!

ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!

ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

LEAVE A REPLY

Please enter your comment!
Please enter your name here