ಹುಡುಗಿಯರ ದೇಹವೆಂದರೆ…!? ಕಮ್ಮಿ ಬಟ್ಟೆ ಹಾಕೋ ಹುಡುಗೀರು ಓದಲೇಬೇಕಾದ ಸ್ಟೋರಿ..!

0
110

ಅದು ಪ್ರತಿಷ್ಟಿತ ಕಾಲೇಜು. ಅಲ್ಲಿಗೆ ಬರೋರೆಲ್ಲಾ ಶ್ರೀಮಂತರ ಮಕ್ಕಳೇ..! ಬರೋರೆಲ್ಲಾ ಐಶಾರಾಮಿ ಕಾರುಗಳಲ್ಲೇ ಬರೋರು..! ಆದ್ರೆ ಆ ಕಾಲೇಜಿನಲ್ಲಿ ಅದೇ ಶ್ರೀಮಂತರ ಮಕ್ಕಳ ಪಟ್ಟಿಗೆ ಸೇರೋ ಇಬ್ಬರು ಹುಡುಗೀರಿದ್ರು. ಅವರಿಬ್ರು ಪ್ರತೀದಿನ ಕಾಲೇಜಿಗೆ ಕಾರಲ್ಲಿ ಬಂದು ಇಳಿದ್ರೆ ಇಡೀ ಕಾಲೇಜೇ ಅವರನ್ನು ಕಣ್ಣುಕಣ್ಣು ಬಿಟ್ಕೊಂಡು ನೋಡೋದು..! ಕಾರಣ ಅವರು ಹಾಕೋ ಬಟ್ಟೆ…! ದೇಹದ ಅಂಗಾಂಗ ಪ್ರದರ್ಶನ ಮಾಡೋದು ಅವರ ಫ್ಯಾಶನ್..! ಅವರಿಬ್ಬರೂ ಮೈತುಂಬಾ ಬಟ್ಟೆ ಹಾಕ್ಕೊಂಡ ಉದಾಹರಣೆಯೇ ಇರಲಿಲ್ಲ..! ಒಂದು ರೀತಿಯಲ್ಲಿ ಅವರಿಬ್ರೂ ಇಡೀ ಕಾಲೇಜಿನ ಹುಡುಗರನ್ನು ಸಿಕ್ಕಾಪಟ್ಟೆ ಡಿಸ್ಟರ್ಬ್ ಮಾಡಿದ್ರು..! ಈ ವಿಷಯ ಪ್ರಿನ್ಸಿಪಾಲ್ ಕಿವಿಗೂ ಬಿತ್ತು.. ಅವರಿಬ್ಬರನ್ನೂ ಪ್ರಿನ್ಸಿಪಾಲ್ ತನ್ನ ಚೇಂಬರ್ ಗೆ ಕರೆಸಿಕೊಂಡ್ರು..!

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಇಬ್ಬರೂ ಹುಡುಗೀರು ಪ್ರಿನ್ಸಿಪಾಲ್ ಕ್ಯಾಂಪಸ್ ಒಳಗೆ ಬರ್ತಿದ್ದ ಹಾಗೇ ಪ್ರಿನ್ಸಿಪಾಲ್ ಗೆ ಇವರ ಬಗ್ಗೆ ಬಂದ ಕಂಪ್ಲೇಂಟ್ ಗಳ ತೀವ್ರತೆ ಅರ್ಥ ಆಯ್ತು..! ಅಳೆದೂ ತೂಗಿದ್ರೂ ಇಬ್ಬರ ದೇಹದ ಮೇಲೂ 4 ಕರ್ಚೀಫಿಗಿಂತ ಹೆಚ್ಚಿನ ಬಟ್ಟೆ ಇರಲಿಲ್ಲ..! ಪ್ರಿನ್ಸಿಪಾಲ್ ಅವರಿಬ್ಬರನ್ನೂ ಬಿಟ್ಟಕಣ್ಣು ಬಿಟ್ಟ ಹಾಗೆ ನೋಡಿದ್ರು..! ಕೂತ್ಕೊಳಿ ಅಂತ ಹೇಳಿ ಮಾತು ಶುರು ಮಾಡಿದ್ರು..! `ಏನ್ರಮ್ಮಾ ಇದು ನಿಮ್ಮ ಬಟ್ಟೆ..? ಇಡೀ ದೇಹ ಪ್ರದರ್ಶನ ಮಾಡ್ತಿದೀರಲಾ, ತಪ್ಪಲ್ವಾ..?’ ಅವರಿಬ್ಬರೂ ಒಟ್ಟಿಗೇ ಉತ್ತರ ಕೊಟ್ರು, `ಇದು ಫ್ಯಾಶನ್ ಸಾರ್, ಈಗ ಇದೇ ಟ್ರೆಂಡ್’ ಅಂತ..! ಪ್ರಿನ್ಸಿಪಾಲ್ ಗೆ ಕೋಪ ಬಂತಾದ್ರೂ ಸಹಿಸ್ಕೊಂಡು ಕೂಲಾಗಿ ಹೇಳೋಕೆ ಶುರು ಮಾಡಿದ್ರು..! www.tnit.in

`ನೋಡ್ರಮ್ಮಾ, ನೀವು ದೇಹ ಪ್ರದರ್ಶನ ಮಾಡೋದ್ರಿಂದ ನಿಮಗೇನು ಸಿಗುತ್ತೋ ಗೊತ್ತಿಲ್ಲ..! ಆದ್ರೆ ಅದರಿಂದ ಏನೇನಾಗುತ್ತೆ ಅಂತ ಹೇಳ್ತೀನಿ ಕೇಳಿ.. ಆ ದೇವ್ರು ತುಂಬಾ ಬೆಲೆಬಾಳುವ ಹಾಗೂ ಸುಂದರವಾದ ವಸ್ತುಗಳನ್ನು ತುಂಬಾ ಕವರ್ ಮಾಡಿ, ಸುಲಭವಾಗಿ ಯಾರಿಗೂ ಸಿಗದ ಹಾಗೆ ಇಟ್ಟಿರ್ತಾನೆ..! ಉದಾಹರಣೆಗೆ ಹೇಳೋದಾದ್ರೆ, ನಿಮಗೆ ವಜ್ರಗಳು ಎಲ್ಲಿ ಸಿಗುತ್ತೆ..? ಭೂಮಿಯ ಆಳದಲ್ಲಿ, ತುಂಬಾ ಆಳದಲ್ಲಿ, ಅಷ್ಟು ಸುಲಭಕ್ಕೆ ಯಾರ ಕೈಗೂ ಸಿಗದ ಹಾಗೆ..! ಹಾಗೆಯೇ ಮುತ್ತು ಸಿಗಬೇಕು ಅಂದ್ರೆ ಸಮುದ್ರದ ಆಳಕ್ಕೆ ಹೋಗಬೇಕು. ಅದೂ ಅಷ್ಟು ಸುಲಭಕ್ಕೆ ಸಿಗಲ್ಲ..! ಅದಕ್ಕೂ ತುಂಬಾ ಶ್ರಮಪಡಬೇಕು.. ! ಹಾಗೆಯೇ ಚಿನ್ನವೂ ಸಹ. ಭೂಮಿಯ ಆಳದಲ್ಲಿ ಇರೋದನ್ನು ಅಗೆದು ತೆಗೀಬೇಕು..! ಈ ಮೂರೂ ವಸ್ತುಗಳು ಪ್ರಪಂಚದಲ್ಲಿ ತುಂಬಾ ಬೆಲೆಬಾಳುವ, ಸುಂದರವಾದ, ಎಲ್ಲರೂ ಇಷ್ಟಪಡುವ ವಸ್ತುಗಳು..! ಆದ್ರೆ ಯಾವತ್ತೂ ಅದು ಸುಲಭವಾಗಿ ಸಿಗೋದಿಲ್ಲ..! ಸುಲಭವಾಗಿ ಕೈಗೆಟುಕೋ ಹಾಗಿದ್ದಿದ್ರೆ ಯಾವತ್ತೂ ಅವುಗಳಿಗೆ ಬೆಲೆ ಇರ್ತಿರಲಿಲ್ಲ..! ಹಾಗೆಯೇ ನಿಮ್ಮ ದೇಹವೂ ಸಹ..! ಅದು ತುಂಬಾ ಬೆಲೆಬಾಳುವಂತದ್ದು, ಅದು ಸುಲಭಕ್ಕೆ ಯಾರಿಗೂ ನೋಡೋಕೆ ಸಿಗಬಾರದು..! ಯಾವಾಗ ಸುಲಭವಾಗಿ ಸಿಗುತ್ತೆ ಅನ್ಸುತ್ತೋ, ಆಗ ಕಳ್ಳ ಗಣಿಗಾರಿಕೆ ಮಾಡೋರು ನಿಮ್ಮ ಗಣಿಯಲ್ಲಿ ಅಕ್ರಮ ಗಣಿಗಾರಿಕೆ ಮಾಡಿ ಅವರಿಗೆ ಬೇಕಾಗಿದ್ದನ್ನು ತಗೊಂಡು ಹೋಗ್ತಾರೆ..! ಅದೇ ಅದು ತುಂಬಾ ಬೆಲೆಬಾಳುವಂತದ್ದು ಅಂತ ಗೊತ್ತಾಗಿ ಸುಲಭವಾಗಿ ಸಿಗೋದಿಲ್ಲ ಅಂತ ಅನ್ಸಿದ್ರೆ, ಗಣಿಗಾರಿಕೆಗೆ ಸರ್ಕಾರಕ್ಕೆ ಅನುಮತಿ ಕೋರಿದ ಹಾಗೆ ನಿಮ್ಮ ಅಪ್ಪ ಅಮ್ಮನ ಬಳಿ ಬಂದು ಮದುವೆಗೆ ಅನುಮತಿ ಕೋರುತ್ತಾರೆ..! ಆಗ ನಿಮಗೂ ಬೆಲೆ, ನಿಮ್ಮ ಅಪ್ಪಅಮ್ಮನಿಗೂ ಹೆಮ್ಮೆ, ಗೌರವ..! ಸದ್ಯಕ್ಕೆ ನೀವು ಅಕ್ರಮ ಗಣಿಗಾರಿಕೆ ಮಾಡುವವರಿಗೆ ನಿಮ್ಮಲ್ಲಿರುವ ಸೌಂದರ್ಯ ಬೆಲೆಬಾಳುವಂತದ್ದಲ್ಲ ಅಂತ ತೋರಿಸ್ತಿದ್ದೀರಿ..! ನಿಮ್ಮ ಬೆಲೆ ನೀವೇ ಕಳೆದುಕೊಳ್ತಿದ್ದೀರಿ..! ಮುಂದಿನದು ನಿಮ್ಮ ಕೈಲಿದೆ, ಇನ್ನಾದ್ರೂ ನಿಮ್ಮ ಸೌಂದರ್ಯದ ಬೆಲೆ ನಿಮಗೆ ಗೊತ್ತಾದ್ರೆ ಬದಲಾಗಿ. ಇಲ್ಲವಾದ್ರೆ ನನ್ನ ಮಾತು ನಿಜವಾಗೋದ್ರಲ್ಲಿ ಅನುಮಾನವಿಲ್ಲ..! ನನ್ನ ಪ್ರಕಾರ ಹೆಣ್ಣುಮಕ್ಕಳು ವಜ್ರ, ಮುತ್ತು, ಚಿನ್ನಕ್ಕಿಂತ ಅಮೂಲ್ಯ…! ಏನ್ ಮಾಡ್ತೀರೋ ನೋಡಿ ಅಂತ ಹೇಳಿ ಕಳಿಸಿಬಿಟ್ರು..! ಅವತ್ತೇ ಕೊನೆ.. ಮತ್ಯಾವತ್ತೂ ಅವರು ಅಂತ ಬಟ್ಟೆ ಹಾಕಲೇ ಇಲ್ಲ..! ಈಗವರು ಕಾಲೇಜಿನ ಡೀಸೆಂಟ್ ಹುಡುಗೀರ ಲೀಸ್ಟಲ್ಲಿದ್ದಾರೆ..!

ಅನುವಾದ – ಕೀರ್ತಿ ಶಂಕರಘಟ್ಟ

POPULAR  STORIES :

ಇದು ಭಾರತದ `ಶ್ರೀಮಂತ’ ಭಿಕ್ಷುಕರ ಕಥೆ..!

ವಿಶ್ವೇಶ್ವರಯ್ಯನವರ ಬಗ್ಗೆ ನಿಮಗೆಷ್ಟು ಗೊತ್ತು..? ಇವತ್ತಿನ ದಿನವಾದ್ರೂ ಅವರ ಬಗ್ಗೆ ತಿಳಿದುಕೊಳ್ಳಿ..

ಟಿವಿ ಸ್ಟೂಡಿಯೋದಲ್ಲೇ ಸಖತ್ ಫೈಟಿಂಗ್..! ಬಾಬಾಗೂ, ಲೇಡಿ ಜ್ಯೋತಿಷಿಗೂ ಲೈವ್ ಜಟಾಪಟಿ..!

ಅವನ ಕಣ್ಣು ಕಿವಿಯಲ್ಲಿತ್ತು..!? ಮಾನವ ಜಗತ್ತಿನಲ್ಲಿ ಇವನೊಂದು ಅದ್ಭುತ..!

ಗೂಗಲ್ ನಲ್ಲಿ ಯಾವ ದೇಶದ ಜನರು ಏನ್ ಏನ್ ಹುಡಕ್ತಾರೆ ಗೊತ್ತಾ..?

ಮದುವೆ ಆಯ್ತಾ..? ಡೈವೋರ್ಸ್ ಯಾವಾಗ..?!

ಸಿಹಿ ಚಹಾದ ಹಿಂದಿನ ಕಹಿ ಸತ್ಯ…!

ಲೋಡ್ ಶೆಡ್ಡಿಂಗ್ ಹೊಡೆತಕ್ಕೆ ಜನಸಾಮಾನ್ಯನ ಲೈಫ್ ಚಿಂದಿ ಚಿತ್ರಾನ್ನ..! 

ಅವತ್ತು ಎಮ್ಮೆ ಕಾಯುತ್ತಿದ್ದವ ಇಂದು ಬಿಪಿಒ ಕಂಪನಿಯ ಮಾಲಿಕ..! ರಿಯಲ್ ಹೀರೋ..

ಇಟ್ ಹ್ಯಾಪನ್ಸ್ ಓನ್ಲಿ ಇನ್ ದುಬೈ..!

ಸಿಸಿಟಿವಿ ಬಯಲು ಮಾಡ್ತು ಹೆಂಡತಿಯ “ಅತ್ತೆಪ್ರೀತಿ”

ಇಡೀ ಊರನ್ನೇ ಶ್ರೀಮಂತ ಮಾಡಿದ ವ್ಯಕ್ತಿಯ ಕಥೆ..!

ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!

 ಅವನು ಐಎಎಸ್ ಆಫೀಸರ್…ಇವನು ಗ್ರೇಟ್ ಕ್ರಿಕೆಟರ್…!

ನಿಮ್ ಮನೇಲೂ ಕರೆಂಟಿಲ್ವಾ..? ಏನೂ ಮಾಡಕ್ಕಾಗಲ್ಲ… ಈ ವೀಡಿಯೋ ನೋಡಿ ನಕ್ಕುಬಿಡಿ..!

ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!

ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

LEAVE A REPLY

Please enter your comment!
Please enter your name here