ಫೇಸ್ ಬುಕ್ ನಲ್ಲಿ ಪರಿಚಿತವಾದವಳು ಹುಡುಗಿಯಲ್ಲ ಹೆಂಡತಿ..!

1
54

ಫೇಸ್ ಬುಕ್ ನಲ್ಲಿ ಪರಿಚಯವಾಗಿ, ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಮದುವೆಯಾದವರ ಸ್ಟೋರಿ ಕೇಳ್ತಾನೇ ಇರ್ತೀರಿ..! ಫೇಸ್ ಬುಕ್ ನಲ್ಲಿ ಪರಿಚಯ ಆದವನ ಮೇಲೆ ಪ್ರೀತಿ ಹುಟ್ಟಿ ಲಿಂಗವನ್ನೇ ಬದಲಾಯಿಸಿಕೊಂಡವನ ಕಥೆಯನ್ನೂ ನೀವು ಇತ್ತೀಚೆಗೆ ಓದಿದ್ದೀರಿ..! ಆದರೆ ನಿಮೆಗೆ ಫೇಸ್ ಬುಕ್ ನಲ್ಲಿ ಪರಿಚಿತವಾದವಳು ಹುಡುಗಿಯಲ್ಲ ಹೆಂಡತಿ..! ಚಾಟ್ ಮಾಡಿ, ಪರಸ್ಪರ ಭೇಟಿಯೂ ಆಗಿ, ಭೇಟಿಯ ನಂತರ ಜಗಳವಾಡಿ ದೂರಾದ ಗಂಡ-ಹೆಂಡತಿ ಕಥೆ ಗೊತ್ತಾ?
ಫೇಸ್ ಬುಕ್ ನಲ್ಲಿ ಪರಿಚಿತವಾದವಳು ಹುಡುಗಿಯಲ್ಲ ಹೆಂಡತಿ..! ಹೊಸಬರನ್ನು ಪರಿಚಯಿಸಿ ಕೊಳ್ಳೋದು, ಹಾಯ್-ಬಾಯ್ ಇಂದ ಶುರುವಾಗೋ ಎಫ್.ಬಿ ಫ್ರೆಂಡ್ ಶಿಪ್ ತಿಂಡಿ ಆಯ್ತಾ? ಊಟ ಆಯ್ತಾ? ಕಾಫಿ ಆಯ್ತಾ? ಗುಡ್ ಮಾನರ್ಿಂಗ್..! ಗುಡ್ ನೈಟ್ ಗೂ ಮಗಿಯದೇ ಮೀಟಿಂಗ್ ಡೇಟಿಂಗ್ ತನಕೂ ಹೋಗೋದುಂಟು..! ಇಂಥಾ ಹೊಸ ಪರಿಚಯ ಒಂಥಾರ ಖುಷಿ ಕೊಡುತ್ತೆ ಅನ್ನೋದು ಅನುಭವಿಸಿದವರ ಅನುಭವ..!
ಹೀಗೆ ಬರೇಲಿಯ ಒಂದು ಅಂಕಲ್, ಆಂಟಿಗೂ ಫೇಸ್ ಬುಕ್ ನಲ್ಲಿ ಪರಿಚಯ ಆಗುತ್ತೆ..! ಈಗ ಫೇಸ್ಬುಕ್ಕಲ್ಲಿ ತಮ್ಮ ಹೆಸರನ್ನು ಮರೆಮಾಚಿ ಬೇರೆ ಹೆಸರಲಿ ಫ್ರೊಫೈಲ್ ಕ್ರಿಯೇಟ್ ಮಾಡ್ಕೊಂಡು ಗುರಿತಿಸಿಕೊಳ್ಳೋದು ಹೆಚ್ಚಾಗ್ತಾ ಇದೆಯಲ್ಲಾ? ಈ ಅಂಕಲ್, ಆಂಟಿಯೂ ಫೇಕ್ ಪ್ರೊಫೈಲ್ ಕ್ರಿಯೇಟ್ ಮಾಡ್ಕೊಂಡು ಫೇಸ್ ಬುಕ್ ನಲ್ಲಿ ಆ್ಯಕ್ಟಿವ್ ಆಗಿದ್ರು..! ಒಂದು ದಿನ ಫೇಸ್ ಬುಕ್ ನಲ್ಲಿ ಅಂಕಲ್ಗೆ ಆಂಟಿ ಪರಿಚಯ ಆಗುತ್ತೆ..! ಆಂಟಿ-ಅಂಕಲ್ ಬರ್ತಾ ಬರ್ತಾ ತುಂಬಾನೇ ಕ್ಲೋಸ್ ಆಗ್ತಾರೆ..! ಬರೀ, ಚ್ಯಾಟಿಂಗ್, ಚ್ಯಾಟಿಂಗ್ ಚ್ಯಾಟಿಂಗ್. ಸ್ವಲ್ಪ ಟೈಮ್ ಆದ್ಮೇಲೆ ಇಬ್ಬರೂ ಮುಖತಃ ಭೇಟಿ ಮಾಡೋಕೆ ಡಿಸೈಡ್ ಮಾಡ್ತಾರೆ..! ಎಫ್ಬಿಲೀ ಪರಿಚಯವಾಗಿ ಮೂರು ತಿಂಗಳ ನಂತರ ಪರಸ್ಪರ ಭೇಟಿ ಮಾಡ್ತಾರೆ..! ಇಬ್ಬರೂ ಎಫ್ಬಿಲೇ ಎಲ್ಲಿ ಸಿಗೋದು ಅಂಥ ಪ್ಲೇಸ್ ಕೂಡ ಪಕ್ಕಾ ಮಾಡ್ಕೊಂಡಿರ್ತಾರೆ..! ಇಬ್ಬರೂ ನಿರ್ಧರಿಸಿದ ದಿನ, ನಿರ್ಧರಿಸಿದ ಟೈಮ್ ಗೆ, ನಿರ್ಧರಿಸಿದ ಸ್ಥಳಕ್ಕೆ ಬರ್ತಾರೆ..! ಅವರಿಬ್ಬರೂ ಅಲ್ಲಿ ಭಾರೀ ಆಶ್ಚರ್ಯ ಆಘಾತ ಕಾದಿತ್ತು..! ಏಕಂದರೆ ಅವರಿಬ್ಬರು ಮೊದಲೇ ಗಂಡ-ಹೆಂಡತಿಯಾಗಿದ್ರು..! ಬೇರೆ ಹೆಸರಲ್ಲಿ ಫ್ರೊಫೈಲ್ ಕ್ರಿಯೇಟ್ ಮಾಡ್ಕೊಂಡು ಏಪ್ ಯೂಸ್ ಮಾಡ್ತಾ ಇದ್ರಲ್ಲಾ?! ಕಾಕತಾಳೀಯ ಎಂಬಂತೆ ಎಫ್.ಬಿ.ಲಿ ಪರಸ್ಪರ ತಗಲಾಕಿಕೊಂಡಿದ್ದಾರೆ..! ಆಮೇಲೆ ಇಷ್ಟು ದಿನ ತಾವೇ ಚ್ಯಾಟ್ ಮಾಡಿದ್ದಂತ ಗೊತ್ತಾಗಿ, ಇಬ್ಬರಿಗೂ ಅವಮಾನದ ಜೊತೆಗೆ ಒಬ್ಬರ ಮೇಲೊಬ್ಬರಿಗೆ ಸಿಟ್ಟೂ ನೆತ್ತಿಗೇರಿದೆ..! ಕೊನೆಗೆ ಸಾರ್ವಜನಿಕವಾಗಿಯೇ ಜಗಳವಾಡಿದ್ದಾರೆ..! ಈಗ ಅವನೊಂದು ತೀರ ಅವಳೊಂದು ತೀರಾ? ಪುಣ್ಯ, ಆ ಅಂಕಲ್ ಬೇರೆ ಆಂಟಿನಾ, ಆ ಆಂಟಿ ಬೇರೆ ಅಂಕಲ್ ನ ಎಫ್.ಬಿ.ಲೀ ಯಾಮಾರ್ಸಿ ಸಂಸಾರ ಹಾಳ್ಮಾಡ್ಲಿಲ್ಲಲ್ಲಾ?! ಅಲ್ಲಾ..ಈ ಗಂಡ-ಹೆಂಡತಿಗೆ ಇವೆಲ್ಲಾ ಬೇಕಿತ್ತಾ? ಹೋಗ್ಲಿಬಿಡಿ.

 

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

1 ಗಂಡು + 4 ಹೆಣ್ಣು = ಒಟ್ಟು ಐದು ಮಕ್ಕಳಿಗೆ ಒಮ್ಮೆಲೇ ಜನ್ಮ ನೀಡಿದ ಮಹಾತಾಯಿ..!

ಅಣ್ಣಂಗೇ ಲವ್ ಆಗಿದೆ ಅಲ್ಲಲ್ಲ, ಹೆಲ್ಮೆಟ್ ಗೆ ಡಿಮ್ಯಾಂಡ್ ಬಂದಿದೆ…! ಇದು ಹೊಸಪೇಟೆ ಹುಡುಗರ ಹೊಸ ಹಾಡು..!

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

ಕಟ್ಟಿಗೆಯಾಗಿ ಪರಿವರ್ತನೆ ಹೊಂದುತ್ತಿದ್ದಾನೆ ಈ ಮಾನವ..! ವೈದ್ಯಕೀಯ ಲೋಕಕ್ಕೇ ಸವಾಲಾದ ಬಾಂಗ್ಲಾ ನಾಗರಿಕ..!

1 COMMENT

LEAVE A REPLY

Please enter your comment!
Please enter your name here