No menu items!
20.2 C
Munich
Monday, October 5, 2026

Form-7 ಕೊಟ್ಟ ತಕ್ಷಣ ಮತದಾರರ ಹೆಸರು ಡಿಲೀಟ್ ಆಗಲ್ಲ; ನೋಟಿಸ್, ವಿಚಾರಣೆ ಬಳಿಕವೇ ನಿರ್ಧಾರ ಎಂದ ಚುನಾವಣಾಧಿಕಾರಿ

Must read

Form-7 ಕೊಟ್ಟ ತಕ್ಷಣ ಮತದಾರರ ಹೆಸರು ಡಿಲೀಟ್ ಆಗಲ್ಲ; ನೋಟಿಸ್, ವಿಚಾರಣೆ ಬಳಿಕವೇ ನಿರ್ಧಾರ ಎಂದ ಚುನಾವಣಾಧಿಕಾರಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿರುವ ಫಾರ್ಮ್-7 ದುರ್ಬಳಕೆ ಹಾಗೂ ಮತದಾರರ ಹೆಸರು ಡಿಲೀಟ್ ಆರೋಪಗಳಿಗೆ ಸಂಬಂಧಿಸಿದಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ (CEO) ವಿ. ಅನ್ಬುಕುಮಾರ್ ಸುದ್ದಿಗೋಷ್ಠಿ ನಡೆಸಿ ಮಹತ್ವದ ಸ್ಪಷ್ಟನೆ ನೀಡಿದ್ದಾರೆ.
ಬಲ್ಕ್ ಆಗಿ ಫಾರ್ಮ್-7 ಹಂಚುವ ಮೂಲಕ ಬಿಜೆಪಿ ಹಾಗೂ ಜೆಡಿಎಸ್ನವರು ಲಕ್ಷಾಂತರ ವೋಟ್ ಡಿಲೀಟ್ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಗಂಭೀರ ಆರೋಪ ಮಾಡಿದ್ದರು. ಇತ್ತೀಚೆಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಚುನಾವಣಾ ಆಯೋಗದ ಕಚೇರಿ ಎದುರು ಪ್ರತಿಭಟನೆ ಕೂಡ ನಡೆಸಿದ್ದರು. ಈ ಎಲ್ಲ ಆರೋಪಗಳಿಗೆ ಆಯೋಗ ಇದೀಗ ಪ್ರತಿಕ್ರಿಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್, “ಒಬ್ಬರು ದಿನಕ್ಕೆ 10 ಫಾರ್ಮ್ ಹಾಗೂ ಬಿಎಲ್ಎಗಳು (BLAs) ಒಟ್ಟು 50 ಫಾರ್ಮ್ ನೀಡಲು ಅವಕಾಶವಿದೆ. ಇದಕ್ಕೂ ಮೀರಿ ಫಾರ್ಮ್ಗಳು ಬಂದರೆ ಇಆರ್ಒ (ERO) ನಿರ್ಧಾರ ಕೈಗೊಳ್ಳುತ್ತಾರೆ. ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಬಹುದು. ಆದರೆ ಫಾರ್ಮ್-7 ದುರ್ಬಳಕೆಗೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಕೇಸ್ ದಾಖಲಾಗಿಲ್ಲ. ಯಾರನ್ನಾದರೂ ಮತದಾರರ ಪಟ್ಟಿಯಿಂದ ಕೈಬಿಡಬೇಕೆಂದರೆ ಮೊದಲಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ. ಬಳಿಕ ಸಮಗ್ರ ವಿಚಾರಣೆ ನಡೆಸಿದ ನಂತರವೇ ಪಟ್ಟಿಯಿಂದ ತೆರವುಗೊಳಿಸಲಾಗುತ್ತದೆ” ಎಂದು ತಿಳಿಸಿದರು.
ರಾಜ್ಯಾದ್ಯಂತ ಒಟ್ಟು 43,82,313 ನೋಟಿಸ್ ಜಾರಿಯಾಗಿದ್ದು, ಈ ಪೈಕಿ 43,55,818 ನೋಟಿಸ್ಗಳನ್ನು ವಿತರಿಸಲಾಗಿದೆ. ಇನ್ನು 26,495 ನೋಟಿಸ್ಗಳ ವಿತರಣೆ ಬಾಕಿ ಇದೆ. ವಿತರಿಸಿದ ನೋಟಿಸ್ಗಳ ಪೈಕಿ ಈಗಾಗಲೇ 36,89,063 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದೆ. ಆಕ್ಷೇಪಣೆ ಸಲ್ಲಿಸಿ ವಿಲೇವಾರಿ ಮಾಡಿಕೊಳ್ಳಲು ಅಕ್ಟೋಬರ್ 22 ಕೊನೆಯ ದಿನಾಂಕವಾಗಿದೆ ಎಂದು ಮಾಹಿತಿ ನೀಡಿದರು.
ಯಾವುದೇ ಕಾರಣಕ್ಕೂ ಅರ್ಹ ಮತದಾರರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಪಟ್ಟಿಯಿಂದ ಬಿಟ್ಟುಹೋದ ಅರ್ಹರನ್ನು ಮತ್ತೊಮ್ಮೆ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಫಾರ್ಮ್ ನಂಬರ್ 6 (Form 6) ರಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಇದಕ್ಕಾಗಿ ವಿಶೇಷ ಜಾಗೃತಿ ಅಭಿಯಾನವನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ವಿ. ಅನ್ಬುಕುಮಾರ್ ಸ್ಪಷ್ಟಪಡಿಸಿದರು.

- Advertisement -spot_img

More articles

- Advertisement -spot_img

Latest article