No menu items!
10.2 C
Munich
Tuesday, September 15, 2026

ತಮಿಳುನಾಡಿಗೆ ನೀರು ಬಿಟ್ಟ ರಾಜ್ಯ ಸರ್ಕಾರದ ವಿರುದ್ಧ ಎಚ್‌ಡಿಕೆ ವಾಗ್ದಾಳಿ

Must read

ತಮಿಳುನಾಡಿಗೆ ನೀರು ಬಿಟ್ಟ ರಾಜ್ಯ ಸರ್ಕಾರದ ವಿರುದ್ಧ ಎಚ್‌ಡಿಕೆ ವಾಗ್ದಾಳಿ
ಮಂಡ್ಯ: ತಮಿಳುನಾಡಿಗೆ ರಾಜ್ಯ ಸರ್ಕಾರ ನೀರು ಬಿಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮದ್ದೂರು ತಾಲೂಕಿನ ಕುರುಬರದೊಡ್ಡಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, “ಈ ಸರ್ಕಾರ ಇರುವುದು ತಮಿಳುನಾಡಿಗೆ ನೀರುಗಂಟಿಯಾಗಿ ಕೆಲಸ ಮಾಡಲು” ಎಂದು ಕಿಡಿಕಾರಿದರು.
ನಮ್ಮ ರಾಜ್ಯದ ರೈತರಿಗೆ ಹೊಸ ಬೆಳೆ ಹಾಕಬೇಡಿ, ನೀರು ನೀಡಲು ಸಾಧ್ಯವಿಲ್ಲ ಎಂದು ಹೇಳುವ ಸರ್ಕಾರ, ತಮಿಳುನಾಡಿಗೆ ಮಾತ್ರ ರಾತ್ರಿ ವೇಳೆ ಕದ್ದು ನೀರು ಬಿಡುತ್ತಿದೆ ಎಂದು ಆರೋಪಿಸಿದರು.
“ಈ ಸರ್ಕಾರ ತಮಿಳುನಾಡಿನ ನೀರುಗಂಟಿ ಸರ್ಕಾರವಾಗಿ ಕೆಲಸ ಮಾಡುತ್ತಿದೆ. ರೈತರ ಹಿತವನ್ನು ಕಡೆಗಣಿಸಿ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ” ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರ ಸುಳ್ಳುಗಳನ್ನು ಹೇಳಿಕೊಂಡು ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದ ಅವರು, ಸರ್ಕಾರದ ನೀರು ನಿರ್ವಹಣೆ ಹಾಗೂ ರೈತರ ವಿಚಾರದಲ್ಲಿ ಕಿಡಿಕಾರಿದರು.

- Advertisement -spot_img

More articles

- Advertisement -spot_img

Latest article