No menu items!
17.9 C
Munich
Tuesday, August 25, 2026

ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿ ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಕುರಿತು ಇಂದು ಆದೇಶ

Must read

ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿ ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಕುರಿತು ಇಂದು ಆದೇಶ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 59ನೇ ಸೆಷನ್ಸ್ ಕೋರ್ಟ್ ಇಂದು ಆರೋಪಿ ಪ್ರದೋಷ್ ಸಲ್ಲಿಸಿರುವ ಮಾಫಿ ಸಾಕ್ಷಿ ಅರ್ಜಿ ಕುರಿತು ಆದೇಶ ಪ್ರಕಟಿಸಲಿದೆ.
ಆಗಸ್ಟ್ 20ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, ಜೈಲಿನಲ್ಲಿರುವ ಪ್ರದೋಷ್ ಅವರ ನಡವಳಿಕೆ ಕುರಿತು ಜೈಲಧಿಕಾರಿಗಳಿಂದ ವರದಿ ಕೇಳಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿಯ ಆದೇಶವನ್ನು ಆಗಸ್ಟ್ 24ಕ್ಕೆ ಮುಂದೂಡಲಾಗಿತ್ತು. ಅದರಂತೆ ಇಂದು ಜೈಲಧಿಕಾರಿಗಳು ಕೋರ್ಟ್ಗೆ ವರದಿ ಸಲ್ಲಿಸಿದ್ದಾರೆ.
ಜೈಲಧಿಕಾರಿಗಳ ವರದಿಯನ್ನು ಪರಿಶೀಲಿಸಿದ ಬಳಿಕ ನ್ಯಾಯಾಧೀಶರಾದ ಸುಜಾತಾ ಮಡಿವಾಳಪ್ಪ ಸಂಬ್ರಾಣಿ ಅವರು ಪ್ರದೋಷ್ ಅವರ ಮಾಫಿ ಸಾಕ್ಷಿ ಅರ್ಜಿ ಕುರಿತು ಆದೇಶ ಪ್ರಕಟಿಸಲಿದ್ದಾರೆ.
ಕೋರ್ಟ್ ಆದೇಶದ ಬಳಿಕ ಪ್ರದೋಷ್ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ. ಈ ನಡುವೆ ಪ್ರಕರಣದ ಮತ್ತಿಬ್ಬರು ಆರೋಪಿಗಳು ಕೂಡ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
17 ಆರೋಪಿಗಳ ಪೈಕಿ ಒಬ್ಬರಿಗೆ ಮಾತ್ರ ಮಾಫಿ ಸಾಕ್ಷಿ ಸ್ಥಾನ ನೀಡಲು ಅವಕಾಶವಿದ್ದು, ಕ್ಷಮಾದಾನ ನೀಡುವ ಸಂದರ್ಭದಲ್ಲಿ ಬಿಎನ್ಎಸ್ನ ಸಂಬಂಧಿತ ಕಾನೂನು ನಿಯಮಗಳನ್ನು ಕೋರ್ಟ್ ಪರಿಗಣನೆಗೆ ತೆಗೆದುಕೊಳ್ಳಲಿದೆ.
ಪ್ರದೋಷ್ಗೆ ಮಾಫಿ ಸಾಕ್ಷಿ ಸ್ಥಾನ ದೊರೆತರೆ, ಪ್ರಕರಣದ ವಿಚಾರಣೆಯಲ್ಲಿ ಅವರ ಹೇಳಿಕೆ ಪ್ರಾಸಿಕ್ಯೂಷನ್ಗೆ ಪ್ರಮುಖ ಅಸ್ತ್ರವಾಗುವ ಸಾಧ್ಯತೆಯಿದೆ.

- Advertisement -spot_img

More articles

- Advertisement -spot_img

Latest article