ಪ್ರವಾಸಿಗರನ್ನು ಮುದ್ದಾಡಿದ ಸಿಂಹ…!

Must read

ಪ್ರವಾಸಿಗರನ್ನು ಮುದ್ದಾಡಿದ ಸಿಂಹ…! ಏನಪ್ಪ ಇದು? ಸಿಂಹ ಅಂದ್ರೆ ಭಯ ಬೀಳ್ತೀವಿ..ಸಿಂಹದ ಬಾಯಿಗೆ ಸಿಕ್ಕರೆ ನಮ್ಮ ಜೀವ ಹೋದಂತೆ…! ಹೀಗಿರುವಾಗ ಸಿಂಹ ಪ್ರವಾಸಿಗರನ್ನು ಮುದ್ದಾಡಿತೇ?
ಕ್ರಿಮಿಯಾದ ವಿಲ್ನೋಹಿರ್ಸ್ಕ್ ಸಫಾರಿ ಪಾರ್ಕ್ ಗೆ ಪ್ರವಾಸಿಗರು ವನ್ಯ ಪ್ರಾಣಿಗಳ ವೀಕ್ಷಣೆಗೆ ಅಂತ ಪ್ರವಾಸಿಗರು ಹೋಗಿದ್ದರು.
ಐದಾರು ಮಂದಿ ಇದ್ದ ಸಫಾರಿ ವಾಹನದೊಳಕ್ಕೆ ಸಿಂಹವೊಂದು ಎಗರಿದೆ…! ಆ ಸಿಂಹ ಇನ್ನೇನು ಎಲ್ಲರನ್ನು ತಿಂದೇ ಬಿಡುತ್ತೆ…ಅವರೆಲ್ಲರೂ ಸತ್ತಂತೆ ಎಂಬಂತಾಗಿತ್ತು.

ಆದರೆ, ಅಚ್ಚರಿ ಎಂಬಂತೆ ಫಿಲಿಯಾ ಎಂಬ ಹೆಸರಿನ ಆ ಸಿಂಹ ಪ್ರವಾಸಿಗರನ್ನು ಮುದ್ದಾಡಿದೆ..!
ಸಾಕು ಪ್ರಾಣಿಯಂತೆ ಮೈಗೊರಗಿ ಆಡಿದೆ…!
ಸಫಾರಿ ವಾಹನವನ್ನು ಚಾಲನೆ ಮಾಡುತ್ತಿದ್ದುದು ಪಾರ್ಕ್ ಮಾಲೀಕನಾಗಿದ್ದು ಸಿಂಹ ಅವನೊಂದಿಗೆ ಸಲುಗೆಯಿಂದ ನಡೆದುಕೊಂಡಿದೆ. ಅವನೊಡನೆ ಇದ್ದ ಪ್ರವಾಸಿಗರನ್ನೂ ಮುದ್ದಾಡಿ ರೋಮಾಂಚನಗೊಳಿಸಿದೆ.

- Advertisement -spot_img

More articles

- Advertisement -spot_img

Latest article