ಅವರಿಬ್ರೂ ಪ್ರೀತಿಸಿ ಊರು ಬಿಟ್ಟು ಬಂದ್ರು..! ಮುಂದೇನಾಯ್ತು…..?

0
136

ಶ್ವೇತಾ..ಶ್ವೇತಾ.. ಅವನು ಅವಳ ಹೆಸರು ಕೂಗ್ತಾ ಅವಳನ್ನು ಹುಡುಕ್ತಾ ಇದ್ದ..! ಅವನು ಹುಡುಕೋಕೆ ಶುರುಮಾಡಿ ತುಂಬ ಹೊತ್ತಾಯ್ತು, ಆದ್ರೆ ಅವಳೆಲ್ಲೂ ಕಾಣಿಸ್ತಿಲ್ಲ..! ಅವನಿಗೆ ಯಾಕೋ ಭಯವಾಯ್ತು..! ಅವಳ ಮೊಬೈಲ್ ನಂಬರ್ರಿಗೆ ಫೋನ್ ಮಾಡ್ದ, ರಿಸೀವ್ ಮಾಡ್ತಿಲ್ಲ.. ಮನೆಯಲ್ಲೆಲ್ಲೂ ಫೋನ್ ರಿಂಗಾದ ಸೌಂಡ್ ಕೇಳಿಸ್ತಿಲ್ಲ..! ಚಪ್ಪಲಿ ಸ್ಟ್ಯಾಂಡಿಗೆ ಹೋಗಿ ಅವಳ ಚಪ್ಪಲಿ ಹುಡುಕ್ದ, ಅವಳ ಎಲ್ಲ ಚಪ್ಪಲಿಗಳೂ ಅಲ್ಲೇ ಇವೆ. ಹಾಗಾದ್ರೆ ಅವಳು ಮನೆಯ ಒಳಗೇ ಇದ್ದಾಳ..? ಅಥವಾ ಅಲ್ಲೇ ಅಕ್ಕಪಕ್ಕದ ಮನೆಗೆ ಹೋಗಿದ್ದಾಳಾ..? ಪಕ್ಕದ ಮನೆಯ ಆಮಟಿಯನ್ನು ಕೇಳ್ದ, `ಆಂಟಿ, ಶ್ವೇತಾ ನಿಮ್ ಮನೆಗೆ ಬಂದಿದ್ಲಾ..?’ ಇಲ್ಲ..! ಆ ಕಡೆ ಮನೆಯ ಹೊರಗೆ ಕೂತಿದ್ದ ಅಂಕಲ್ ಹತ್ರ ಕೇಳ್ದ, `ಶ್ವೇತಾನ ನೋಡಿದ್ರಾ..?’… ಇಲ್ಲ ಕಣಪ್ಪ..! ಅಯ್ಯೋ ಹಾಗಾದ್ರೆ ಶ್ವೇತಾ ಇಲ್ಲಿ ಹೋದ್ಲು.? ಬೆಳಗ್ಗೆ ಸಣ್ಣಗೆ ರೇಗಿದ್ದಕ್ಕೆ ಕೋಪ ಮಾಡ್ಕೊಂಡು ಎಲ್ಲಾದ್ರೂ ಹೋಗಿಬಿಟ್ಲಾ..? ಅವನಿಗೆ ಭಯ ಜಾಸ್ತಿ ಆಯ್ತು.. ಅರ್ಧ ಗಂಟೆಯೊಳಗೆ ಕನಿಷ್ಟ 500 ಸಲ ಶ್ವೇತಾ..ಶ್ವೇತಾ ಅಂತ ಕೂಗಿದ್ದ.. ಆದ್ರೆ ಅವಳ ಸುಳಿವಿಲ್ಲ.. ನೋ… ಶ್ವೇತಾ ಇಲ್ಲೂ ಇಲ್ಲ..!
ಶ್ವೇತಾ ಮತ್ತು ಅನಿಲ್ ಜಾಲೇಜಿಂದ ಪ್ರೇಮಿಗಳು, ಇಬ್ಬರ ಮನೆಯಲ್ಲೂ ಅವರಿಬ್ಬರ ಪ್ರೀತಿಗೆ ಒಪ್ಪಿರಲಿಲ್ಲ..! ಒಪ್ಪಿಸೋಕೆ ಮಾಡಿದ ಎಲ್ಲಾ ಪ್ರಯತ್ನಗಳೂ ಫೇಲ್ ಆಗಿತ್ತು.. ಅವಳನ್ನು ಎದುರು ಕೂರಿಸಿಕೊಂಡು ಕೇಳಿದ್ದ `ಶ್ವೇ… ನಮ್ಮಿಬ್ಬರ ಮನೆಯವರಿಗೆ ನಮ್ಮ ಪ್ರೀತಿ ಬಗ್ಗೆ ಅರ್ಥಾನೇ ಆಗ್ತಿಲ್ಲ, ಎಷ್ಟು ಬೇಡಿಕೊಂಡ್ರು ಅವರ ಸ್ವಾಭಿಮಾನದ ಹೆಸರಲ್ಲಿ ನಮ್ಮ ಪ್ರೀತಿ ಸಾಯಿಸೋ ಪ್ಲ್ಯಾನ್ ಮಡ್ತಿದ್ದಾರೆ.. ನಂಗೆ ನೀನು, ನಿಂಗೆ ನಾನು..! ಇವರ ಸಹವಾಸಾನೇ ಬೇಡ, ನಿನ್ನ ರಾಣಿ ತರ ನೋಡ್ಕೋತಿನಿ. ಬರ್ತಿಯ ನನ್ ಜೊತೆ..?’ ಅವಳು ಮರು ಮಾತಾಡದೇ `ನಂಗೂ ನಿನ್ನ ಬಿಟ್ಟಿರೋಕಾಗಲ್ಲ ಕಣೋ, ನಂಗೊತ್ತು, ಅಪ್ಪ ಅಮ್ಮ ಬೇಜಾರ್ ಮಾಡ್ಕೋತಾರೆ.. ಆದ್ರೆ ನೀನು ನನ್ನನ್ನು ಪ್ರೀತಿಸೋದು ನೋಡಿ ಅವರೇ ಒಂದು ದಿನ ನಮ್ಮ ಹತ್ತಿರ ವಾಪಸ್ ಬರ್ತಾರೆ..!’ ಅಂದಿದ್ಲು.. ಅವತ್ತು ಶೃಂಗೇರಿಯಿಂದ ಬಸ್ ಹತ್ತಿದ ಅವರಿಬ್ಬರೂ ತಲುಪಿದ್ದ ರಾಜಧಾನಿ ಬೆಂಗಳೂರು..!

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಅವನಿಗೆ ಗ್ಯಾರಂಟಿ ಇತ್ತು, ಉಪವಾಸ ಅಂತೂ ಮಲಗಲ್ಲ ಅಂತ..! ಮೊದಲ ದಿನವೇ ಕೈಲಿದ್ದ ಹತ್ತು ಸಾವಿರ ರೂಪಾಯಿಯಲ್ಲಿ ಮೂರು ಸಾವಿರದ ಹಾಗೆ ಅವಳೊಂದು ಅವನೊಂದು ಪಿಜಿ ಸೇರಿಕೊಂಡ್ರು..! ಒಂದು ತಿಂಗಳು ಆಶ್ರಯಕ್ಕೆ, ಊಟಕ್ಕೆ ಸಮಸ್ಯೆ ಇಲ್ಲ..! ಇಬ್ಬರೂ ಕೆಲಸ ಹುಡುಕೋಕೆ ಶುರು ಮಾಡಿದ್ರು. ಒಂದೆರೆಡು ದಿನದಲ್ಲಿ ಅವರಿಬ್ಬರಿಗೂ ಒಂದೇ ಆಫೀಸಿನಲ್ಲಿ ಕೆಲಸ ಸಿಗ್ತು. ಅವಳು ರಿಸೆಪ್ಷನಿಸ್ಟ್, ಅವನು ಕಾಪಿ ರೈಟರ್..! ಅವನಿಗೆ 15 ಸಾವಿರ ಸಂಬಳ, ಇವಳಿಗೆ 10 ಸಾವಿರ..! ಹೀಗೇ ಇಬ್ಬರೂ ಅದೇ ಆಫೀಸಿನಲ್ಲಿ 8 ತಿಂಗಳು ದುಡಿದ್ರು. ಅಲ್ಲಿಯವರೆಗೂ ಅವರಿಬ್ಬರೂ ಬೇರೆಬೇರೆ ಪಿ.ಜಿಯಲ್ಲೇ ಇದ್ದರು..! ನಮ್ಮ ಕಾಲಿನ ಮೇಲೆ ನಾವು ನಿಲ್ಲೋ ತನಕ ನಾವಿಬ್ರೂ ಮದುವೆಯಾಗೋದು ಬೇಡ, ಒಟ್ಟಿಗೇ ಇರೋದು ಬೇಡ ಅಂತ ಡಿಸೈಡ್ ಮಾಡಿದ್ರು..! ಅವರದ್ದು ತುಂಬಾ ನಿಷ್ಕಲ್ಮಶ ಪ್ರೀತಿ..! ಇವರಿಬ್ಬರ ಈ ಪ್ರೀತಿಯ ಬಗ್ಗೆ ಅವರಿಬ್ಬರ ಮನೆಗೂ ಲೆಟರ್ ಬರೆದು ತಿಳಿಸಿದ್ರು, ಯಾವತ್ತೂ ಎರಡೂ ಕುಟುಂಬಕ್ಕೆ ಕೆಟ್ಟ ಹೆಸರು ತರಲ್ಲ ಅಂತ ಭರವಸೆ ನೀಡಿದ್ರು..! ಊರಿನವರು ಕೇಳಿದ್ರೆ ಡಿಗ್ರಿ ಮುಗಿಸಿ ಕೆಲಸಕ್ಕೆ ಬೆಂಗಳೂರಿಗೆ ಹೋಗಿದ್ದಾರೆ ಅಂತ ಹೇಳಿ ಅಂತಲೂ ಪತ್ರದಲ್ಲಿ ಬರೆದಿದ್ರು..! ಅಲ್ಲಿಂದ ಯಾವುದೇ ಪತ್ರ ಬರಲೇ ಇಲ್ಲ..! ಆದರೂ ಇವರಿಬ್ಬರೂ ಬೇಜಾರು ಮಾಡ್ಕೋಳ್ಳಿಲ್ಲ.. ಮತ್ತೆ ಅಷ್ಟೇ ಶ್ರದ್ಧೆಯಿಂದ ಕೆಲಸ ಮುಂದುವರೆಸಿದ್ರು. 8 ತಿಂಗಳ ದುಡಿಮೆಯಲ್ಲಿ ಅವರಿಬ್ಬರೂ ಸೇರಿ ಒಂದು ಲಕ್ಷ ಉಳಿಸಿದ್ರು..! ಅವಳು ಟೈಮ್ ಸಿಕ್ಕಾಗಲೆಲ್ಲ ಅವನ ಜೊತೆ ಕೂತು ಕಾಪಿ ರೈಟಿಂಗ್ ಹೇಳಿಸಿಕೊಂಡ್ಲು..! ಅವಳೂ 8 ತಿಂಗಳಲ್ಲಿ ಕಾಪಿ ರೈಟರ್ ಆಗಿ ಪ್ರಮೋಟ್ ಆದ್ಲು.. ಅವಳ ಸಂಬಳವೂ ಹದಿನೈದು ಸಾವಿರಕ್ಕೇರಿತ್ತು..! ಅವನಿಗೂ ಟೀಂ ಲೀಡರ್ ಆಗಿ ಪ್ರಮೋಶನ್ ಸಿಕ್ಕು ಅವನ ಸಂಬಳ 20 ಸಾವಿರ ತಲುಪಿತ್ತು..! ಇಬ್ಬರೂ ಸೇರಿ 35 ಸಾವಿರ ದುಡೀತಿದ್ರೂ ಪಿ.ಜಿ ಬಿಟ್ಟು ಬೇರೆ ಯೋಚನೆ ಮಾಡಲಿಲ್ಲ..! ಒಂದು ದಿನವೂ ಮದುವೆ ಯೋಚನೆ ಮಾಡಲಿಲ್ಲ..! ಅವರಿಬ್ಬರೂ ಒಳ್ಳೆಯ ಗೆಳೆಯರ ಹಾಗೆ ಓಡಾಡಿಕೊಂಡಿದ್ರು..!
ಹೀಗೇ 2 ವರ್ಷ ಕಳೀತು, ಅಪ್ಪ ಅಮ್ಮ ಇವರಿಬ್ಬರನ್ನು ಮರೆತೇ ಬಿಟ್ಟಿದ್ರು..! ಅಂತಹ ಮಕ್ಕಳು ಇದ್ದರೇನು, ಸತ್ತರೇನು ಅಂತ ಮನಸಲ್ಲೇ ಡಿಸೈಡ್ ಮಾಡಿದ್ರು..! ಆದ್ರೆ ಅವತ್ತು ದೀಪಾವಳಿ ಹಬ್ಬದ ಬೆಳಗ್ಗೆ ಅವನು ಅವಳ ಮನೆಗೆ, ಅವಳು ಅವನ ಮನೆಗೆ ಹೋದ್ರು..! ಮನೆಯವರಿಗೆ ಶಾಕ್..! ಅವರು ಮತಡೋಕೆ ಮುಂಚೆ ಹೋಗಿ ದೊಡ್ಡವರ ಕಾಲು ಹಿಡಿದ್ರು..! ಕ್ಷಮೆ ಕೇಳಿದ್ರು, ದೇವರ ಮನೆಯಲ್ಲಿದ್ದ ದೀಪ ಹಚ್ಚಿ ಇಲ್ಲೀವರೆಗೂ ಏನು ನಡೀತು ಅಂತ ಸತ್ಯ ಹೇಳಿದ್ರು..! ದೊಡ್ಡವರಿಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ಅವನ ಅಪ್ಪ ಅಮ್ಮ ಅವಳನ್ನು ಕರ್ಕೊಂಡು ಅವಳ ಮನೆಗೆ ಹೊರಟ್ರು.. ಮನೆಯೊಳಗೆ ಹೋಗಿ ಮಗನನ್ನು ಅಪ್ಪಿಹಿಡಿದು ಕಣ್ಣೀರು ಹಾಕಿದ್ರು..! ಇತ್ತ ಅವಳ ಅಪ್ಪಅಮ್ಮ ಅವಳನ್ನು ಅಪ್ಪಿ ಮುದ್ದಾಡಿದ್ರು..! ಎರಡೂ ಕುಟುಂಬಗಳೂ ಕೂತು ಮಾತಾಡಿ ದೀಪಾವಳಿಯ ಶುಭ ಸಂಧರ್ಭದಲ್ಲೇ ಮದುವೆಯ ಬಗ್ಗೆ ನಿರ್ಧಾರ ತಗೊಂಡ್ರು..! ಇನ್ನು 15 ದಿನಕ್ಕೆ ಅವರಿಬ್ಬರಿಗೂ ಮದುವೆ..! ಕೊನೆಗೂ ಅವರ ಪ್ರೀತಿಯಲ್ಲಿ ಅವರು ಗೆದ್ದಿದ್ರು..! ಇಡೀ ಊರಿನ ಪ್ರತೀ ಮನೆಗೂ ಎರಡೂ ಕುಟುಂಬಗಳು ಹೋಗಿ ಮದುವೆಗೆ ಕರೆದ್ರು. ಎರಡೂ ಕುಟುಂಬಗಳೂ ಖುಷಿಯಲ್ಲಿ ಮುಳುಗಿಹೋಗಿದ್ದವು..! ಇಂತಹಾ ಮಕ್ಕಳನ್ನು ಹತ್ತಿದ್ದಕ್ಕೆ ಹೆಮ್ಮೆ ಇತ್ತು ಅವರಿಗೆ..! ಅಂತೂಇಂತೂ ಮದುವೆ ಮುಗಿದೇ ಹೋಯ್ತು..! ಅಲ್ಲಿಯ ತನಕ ಪಿಜಿಯಲ್ಲಿದ್ದವರು ಮತ್ತೆ ಪಿಜಿಯಲ್ಲಿದ್ದುಕೊಂಡೇ ಬಾಡಿಗೆಗೆ ಮನೆ ಹುಡುಕಿದ್ರು, ಒಳ್ಳೆಯ ಮನೆ ಹುಡುಕಿ ಗಂಡಹೆಂಡತಿ ಇಬ್ಬರೂ ಸೆಟಲ್ ಆದ್ರು..! ಅಲ್ಲಿಂದ ಅವರ ಜೀವನ ಹ್ಯಾಪಿಹ್ಯಾಪಿ..! ಯಾವತ್ತೂ ಕಿತ್ತಾಡಲಿಲ್ಲ, ಯಾವತ್ತೂ ಪ್ರೀತಿಸೋದು ಕಮ್ಮಿ ಮಾಡಲಿಲ್ಲ…! ದೇ ಆರ್ ವೆರಿ ಲವ್ಲಿ ಕಪಲ್ಸ್..! ಸುತ್ತಮುತ್ತಲ ಮನೆಯವರಿಗೂ ಅವರು ಅಂದ್ರೆ ಸಖತ್ ಪ್ರೀತಿ, ಅವರಿಬ್ಬರೂ ಒಟ್ಟಿಗೇ ಅಡಿಗೆ ಮಾಡೋದು, ಒಟ್ಟಿಗೇ ಆಫೀಸಿಗೆ ಹೋಗಿಬರೋದು, ಒಟ್ಟಿಗೇ ಬಟ್ಟೆ ಒಗೆಯೋದು, ಹೀಗೆ ಅವರ ಪ್ರೀತಿ ನೋಡಿ ಸುತ್ತಮುತ್ತಲ ಮನೆಯವರೆಲ್ಲಾ `ಹೀಗೇ ನೂರು ವರ್ಷ ಖುಷಿಯಾಗಿರಿ’ ಅಂತ ಹಾರೈಸೋರು..ಹೀಗೆ ಅವರ ಜೀವನ ಮತ್ತರೆಡು ವರ್ಷ ಸಾಗಿತ್ತು..! ಅವತ್ತು ಅವನಿಗೆ ದೊಡ್ಡ ಕಂಪನಿಯೊಂದರಿಂದ ದೊಡ್ಡ ಸಂಬಳದ ಕೆಲಸಕ್ಕೆ ಆಫರ್ ಬಂದಿತ್ತು. ಎಲ್ಲವೂ ಓಕೆ ಆಗಿ ಅವತ್ತು ಅವನು ಹೊಸ ಕೆಲಸಕ್ಕೆ ಸೇರುವ ದಿನ. ಆದ್ರೆ ಶ್ವೇತಾ ಮನೆಯಲ್ಲಿಲ್ಲ..! ಅವನು ಸ್ನಾನಕ್ಕೆ ಹೋಗಿ ಬರೋದ್ರೊಳಗೆ ಅವಳಿಲ್ಲ..! ಸ್ನಾನಕ್ಕೆ ಹೋಗೋ ಮುಂಚೆ `ನನ್ನ ಮೊದಲ ಸಂಬಳದಲ್ಲಿ ನಿಂಗೆ ಚೈನ್ ಮಾಡ್ಸಲ್ಲ, ನಾನು ಹೊಸ ಬೈಕ್ ತಗೋತೀ. ನಂಗೆ ನಿನಗಿಂತ ಹೊಸ ಬೈಕೇ ಇಂಪಾರ್ಟೆಂಟ್’ ಅಂತ ತಮಾಷೆಗೆ ಹೇಳಿದ್ದಕ್ಕೆ ಕೋಪ ಮಾಡಿಕೊಂಡುಬಿಟ್ಲಾ..? ಯಾವತ್ತೂ ಅವನು ಹಾಗೆಲ್ಲಾ ಅವಳಿಗೆ ಹೇಳಿದವನಲ್ಲ, ಸೊ ಅದನ್ನೇ ಸೀರಿಯಸ್ ಆಗಿ ತಗೊಂಡುಬಿಟ್ಲಾ..? ಅದರಲ್ಲೂ ಗೀಸರ್ ಆನ್ ಮಾಡಿರ್ಲಿಲ್ಲ ಅಂತ ಸ್ವಲ್ಪವೇ ಸ್ವಲ್ಪ ಜೋರುದನಿಯಲ್ಲಿ ಗದರಿದ್ದು ಬೇಜಾರ್ ಮಾಡಿಬಿಡ್ತಾ..?ಅದಕ್ಕೇ ಅವಳು ಮನೆಬಿಟ್ಟು ಹೋಗಿಬಿಟ್ಲಾ ಅಂತೆಲ್ಲಾ ಯೋಚನೆಗಳು ಶುರುವಾಗಿತ್ತು ಅವನಿಗೆ..! ಅವನ ಕಣ್ಣಂಚಲ್ಲಿ ನೀರು ತುಂಬಿಕೊಂಡಿತ್ತು..! ಶ್ವೇತಾ… ಅಂತ ಅಳೋಕೆ ಶುರು ಮಾಡಿದ್ದ..! ಅಷ್ಟರಲ್ಲಿ ಅವಳು ಮನೆಯೊಳಗೆ ಬಂದ್ಲು..! ಅವಳನ್ನು ನೋಡಿದವನೇ ಓಡಿಹೋಗಿ ಅವಳನ್ನು ತಬ್ಬಕೊಂಡು, `ಎಲ್ಲಿ ಹೋಗಿದ್ದೆ ಶ್ವೇತಾ.. ನಾನೆಷ್ಟು ಹೆದರಿಬಿಟ್ಟಿದ್ದೆ ಗೊತ್ತಾ..?’ ಅಂದ..! ಅಯ್ಯೋ ಗೂಬೆ, ಇವತ್ತು ನಿನ್ನ ಹೊಸ ಕೆಲಸ ಶುರು ಅಲ್ವಾ, ಅದಕ್ಕೇ ದೇವಸ್ಥಾನಕ್ಕೆ ಪೂಜೆ ಮಾಡಿಸೋಕೆ ಹೋಗಿದ್ದೆ’ ಅಂದ್ಲು..!` ಮತ್ತೆ ನಿನ್ನ ಚಪ್ಪಲಿ ಇಲ್ಲೇ ಇತ್ತು’ ಅಂದ. `ಅಯ್ಯೋ ದೇವಸ್ಥಾನಕ್ಕೆ ನಾನ್ಯಾವತ್ತಾದ್ರೂ ಚಪ್ಪಲಿ ಹಾಕ್ಕೊಂಡು ಹೋಗಿದೀನಾ’ ಅಂದ್ಲು..! `ಮೊಬೈಲ್ ಎತ್ತೋಕ್ ಏನಾಗಿತ್ತು ನಿಂಗೆ..?’ ಅಂದ. `ಅದು ಅಲ್ಲೇ ಹಾಸಿಗೆ ಮೇಲೇ ಇದೆ’ ಅಂದ್ಲು..! `ಮತ್ತೆ ರಿಂಗ್ ಆಗಿದ್ದು ಕೇಳಿಸ್ಲಿಲ್ಲ’ ಅಂದ. `ನಾನು ಬೇಗ ಎದ್ದಿದ್ನಲ್ಲಾ, ನಿಂಗೆ ಡಿಸ್ಟರ್ಬ್ ಆಗಬಾರದು ಅಂತ ಸೈಲೆಂಟಿಗೆ ಹಾಕಿದ್ದೆ’ ಅಂದ್ಲು..! ಅಷ್ಟೆ, ಮತ್ತೆ ಅವಳನ್ನು ಅಪ್ಪಿ ಐ ಲವ್ ಯೂ ಅಂದ..! `ಗೂಬೆ, ನಿನ್ನ ಬಿಟ್ಟು ಹೋಗೋಕಲ್ಲ ನಿನ್ನ ಅಷ್ಟು ಇಷ್ಟಪಟ್ಟು, ಕಷ್ಟಪಟ್ಟು ಮದ್ವೆ ಆಗಿದ್ದು ಅಂತ ಅವಳೂ `ಐ ಲವ್ ಯೂ’ ಅಂತ ಹೇಳಿ ಅವನ ಬಾಯಿಗೆ ಪ್ರಸಾದ ಇಟ್ಟು, ಹಣೆಗೆ ಕುಂಕುಮ ಇಟ್ಟು, `ಆಲ್ ದಿ ಬೆಸ್ಟ್’ ಹೇಳಿದ್ಲು..! ಅವರು ಇವತ್ತಿಗೂ ಹ್ಯಾಪಿ ಕಪಲ್..!
ಲವ್ ಮಡೋದು ದೊಡ್ಡದಲ್ಲ, ಅದನ್ನು ಕೊನೆಯವರೆಗೂ ಉಳಿಸಿಕೊಳ್ಳೋದು ದೊಡ್ಡದು..! ಇಂತಹ ಪ್ರೀತಿಗೆ ಕೋಟಿ ಸಲಾಂ..!

  • ಕೀರ್ತಿ ಶಂಕರಘಟ್ಟ

POPULAR  STORIES :

ಬಾಂಗ್ಲಾ ವಿರುದ್ಧ ಭಾರತಕ್ಕೆ ರೋಚಕ ಗೆಲವು..! ನೀವೂ ಮ್ಯಾಚ್ ಮಿಸ್ ಮಾಡಿಕೊಂಡಿದ್ದರೆ ಇಲ್ಲಿದೆ ನೋಡಿ ವಿಡಿಯೋ..

ಅನೈತಿಕ ಸಂಬಂಧಗಳಿಂದ ಹಾರ್ಟ್ ಅಟ್ಯಾಕ್ ಗ್ಯಾರಂಟಿ…!! ಬೆಚ್ಚಿಬೀಳಿಸಿದ ವರದಿ..!!?

ಟೀಂ ಇಂಡಿಯಾ ಹಾಗೂ ಬಾಂಗ್ಲಾ ಅಭಿಮಾನಿಗಳ ವಿಡಿಯೋ ಫೈಟ್..!

ಉಗ್ರರಿಗೆ ಇಸ್ರೇಲ್, ಅಮೆರಿಕಾದಿಂದ ವೆಪನ್ಸ್ ಪೂರೈಕೆ..!? ಪುಟಿನ್ ಹೇಳಿದ ಬೆಚ್ಚಿಬೀಳಿಸುವ ಸತ್ಯ..!?

ಜೈಲಿನಿಂದ ಕೈದಿಗಳು ಪರಾರಿ..! ಜೈಲಲ್ಲಿ ಏನೆಲ್ಲಾ ನಡೆಯುತ್ತೆ ಗೊತ್ತಾ..? ಡ್ರಗ್ಸು.. ಸೆಕ್ಸು.. ಫಿಕ್ಸು…

ಧೋನಿ ಪತ್ರಕರ್ತನ ಮೇಲೆ ಸಿಟ್ಠಾಗಿದ್ದೇಕೆ..? ನಾವು ಸ್ಕ್ರಿಪ್ಟ್ ಇಟ್ಟುಕೊಂಡು ಪಂದ್ಯವಾಡುವುದಿಲ್ಲ..!

ಖಂಡೀಲ್ ಬೆತ್ತಲಾಗದಿದ್ರೇ ಏನಂತೆ..? ಆರ್ಷಿ ಖಾನ್ ಬೆತ್ತಲಾದಳಲ್ಲ..!!

ಅಮ್ಮನಿಗೆ ಸೇಟು ದುಡ್ಡು ಕೊಟ್ಟಿದ್ದು ಯಾಕೆ..? ಫ್ರಾಕ್ ಹುಡ್ಗೀಯ ಚಾಕೊಲೇಟ್ ಸ್ಟೋರಿ..!

ಶಿವಣ್ಣನ ಜೊತೆಗೆ ಬಿಬಿಸಿ ರೇಡಿಯೋ ನಡೆಸಿದ ಸಂದರ್ಶನ ಇಲ್ಲಿದೆ.. ಕೇಳಿ..!

ನಿಯ್ಯತ್ತಿನ ಪ್ರಾಣಿ ನಾಯಿ ಮರಿಗಳನ್ನು ಕೊಂದಳು..! ನಿಯ್ಯತ್ತಿಲ್ಲದ ಹೆಂಗಸು..!?

ಭಾರತದಲ್ಲಿದ್ದಾರೆ ಮೂವತ್ತು ಲಕ್ಷಕ್ಕಿಂತ ಹೆಚ್ಚು ವೇಶ್ಯೆಯರು..!? ಮೈ ಮಾರಾಟ ದಂಧೆ ಲೀಗಲೈಜ್ ಆಗುತ್ತಾ..?

LEAVE A REPLY

Please enter your comment!
Please enter your name here