No menu items!
12.4 C
Munich
Wednesday, April 29, 2026

ಕತ್ರೀನಾ ಕೈಫ್ ರೇಟು ಹದಿನೈದು ಕೋಟಿ..!? ದೀಪಿಕಾ, ಕಂಗನಾ ಭಯಂಕರ್ ಕಾಸ್ಟ್ಲೀ..!?

Must read

 

ಕತ್ರೀನಾ ಕೈಫ್ ಗೆ ಹದಿನೈದು ಕೋಟಿ, ಕರೀನಾ ಕಪೂರ್ ಗೆ ಹದಿನಾಲ್ಕು ಕೋಟಿ, ದೀಪಿಕಾ, ಕಂಗನಾ ಭಯಂಕರ್ ಕಾಸ್ಟ್ಲೀ..!! ಮುಂದಿನ ಜನ್ಮ ಅಂತಿದ್ರೇ, ಬಾಲಿವುಡ್ ನಟಿಯರಾಗಿ ಹುಟ್ಟಬೇಕು ಕಣ್ರೀ.. ಏನ್ ಕಾಸ್ಟ್ಲೀರೀ ಅಬ್ಬಬ್ಬಾ…!

ಮೊದಲೆಲ್ಲಾ ಹೀಗಿರಲಿಲ್ಲ, ಅಪಾರ ಪ್ರತಿಭೆಯಿತ್ತು. ಸಂಬಳ ಕಡಿಮೆ. ಅವಕಾಶ ಸಿಕ್ಕರೇ ಪೂರ್ವಜನ್ಮದ ಪುಣ್ಯ ಎಂಬ ಲೆಕ್ಕಾಚಾರ. ಈಗ ಹಾಗೇನಿಲ್ಲ, ಚಿತ್ರ ತೋಪೆದ್ದರೂ ಟೆಲಿವಿಶನ್ ರೈಟ್ಸ್ ಪಕ್ಕಾ. ಸ್ಟಾರ್ ಕಾಸ್ಟ್ ಮೇಲೆ ಅನಾಮತ್ತು ಕೋಟಿ ಬೆಲೆ ನಿಗಧಿಯಾಗುತ್ತೆ. ಹಾಗಾಗಿ ಅದೆಷ್ಟೇ ಕೋಟಿಯನ್ನಾದರೂ ತೆತ್ತು ನಿರ್ಮಾಪಕರು ಸ್ಟಾರ್ ಗಳಿಗೆ ಮಣೆ ಹಾಕುತ್ತಾರೆ. ಹಾಲಿವುಡ್, ಬಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್ ಗಳಲ್ಲೂ ಇದೇ ಲೆಕ್ಕಾಚಾರವಿದೆ. ಕ್ವಾಂಟಿಟಿ, ಕ್ವಾಲಿಟಿಯ ಬಗ್ಗೆ ಯಾರೂ ತೀರಾ ತಲೆಕೆಡಿಸಿಕೊಳ್ಳುತ್ತಿಲ್ಲ. ರೇಟ್ ಫಿಕ್ಸ್ ಮಾಡ್ಕೊಂಡು ಯರ್ರಾಬಿರ್ರಿ ಸಿನಿಮಾಗಳನ್ನ ನಿರ್ಮಿಸುತ್ತಿದ್ದಾರೆ. ಕೆಲ ಸಿನಿಮಾಕ್ಕೆ ತಲೆಯೇ ಇರುವುದಿಲ್ಲ, ಇದ್ರೂ ಕೈ ಕಾಲುಗಳಲ್ಲಿ ನ್ಯೂನತೆ.

ಈ ಬಾಲಿವುಡ್ ಬೆಡಗಿಯರು ಪಡೆದುಕೊಳ್ಳುವ ಸಂಭಾವನೆಯಲ್ಲಿ ಕನ್ನಡದ ಕೆಲ ಚಿತ್ರಗಳೇ ನಿರ್ಮಾಣವಾಗುತ್ತೆ. ಇನ್ನು ನಿರ್ಮಾಪಕ ಕೋಟಿ-ಕೋಟಿ ಸಂಭಾವನೆ ಕೊಟ್ಟೇನು ಲುಕ್ಸಾನು ಅನುಭವಿಸೋದಿಲ್ಲ. ಅವರ ಸಂಪಾದನೆಯೂ ಕೋಟಿಗಳ ಲೆಕ್ಕದಲ್ಲಿರುತ್ತವೆ. ಕೇವಲ ದುಡ್ಡಿನ ಸಾಮ್ರಾಜ್ಯದಲ್ಲಿ ಅಭಿರುಚಿಗಳು ಸತ್ತರೂ ಡೋಂಟ್ ಕೇರ್. ಕೆಲವರೇ ಹಾಗೇ, ದುರಾಸೆಯೇ ತುಂಡುಗಳು. ಕೊಟ್ಟಷ್ಟು ಬೇಕು ಎಂಬ ಜಾಯಮಾನ. ಅವರ ಯೋಗ್ಯತೆಗೆ ಸಿಗುವ ಮನ್ನಣೆ ಹೆಚ್ಚಿದ್ದರೂ, ಸಹೋದ್ಯೋಗಿಗಳಿಗಿದ್ದಷ್ಟಿಲ್ಲವಲ್ಲ ಎಂಬ ಅಸಮಾಧಾನ ಬಾಲಿವುಡ್ ನ ಕೆಲ ನಟಿಯರಿಗಿದೆ. ಇರ್ಲೀ ಬಿಡಿ.. ಅವರವರ ರೇಟು, ಅವರವರ ಯೋಗ್ಯತೆ.
ಇವೆಲ್ಲಾ ತರ್ಕಗಳನ್ನು ಬದಿಗಿಟ್ಟರೇ ಬಾಲಿವುಡ್ ಚಿತ್ರರಂಗದಲ್ಲಿ ನಮಗೆ ಅತೀ ಭಯಂಕರ ಕಾಸ್ಟ್ಲೀ ಆಗಿ ಕಾಣಿಸುವುದು ಕತ್ರೀನಾ ಕೈಫ್.

ಕತ್ರೀನಾ ಕೈಫ್
ಕಣ್ಣು ಕಿರಿದು ಮಾಡಿ ನಕ್ಕಳೆಂದರೇ, ಅಷ್ಟೂ ಕೈಯಿಂದ ಬಾಚಿ ತಬ್ಬಿಕೊಳ್ಳೋಣ ಅನ್ನಿಸಿಬಿಡುತ್ತದೆ. ಆಂಗ್ಲೋ ಇಂಡಿಯನ್ ಚೆಲುವೆ. ಬಾಲಿವುಡ್ ಚಿತ್ರರಂಗಕ್ಕೆ ಬೂಮ್ ಚಿತ್ರದ ಮೂಲಕ ಎಂಟ್ರಿ ಕೊಟ್ಟಳು. ಈಗ ಅವಳ ಬತ್ತಳಿಕೆಯಲ್ಲಿ ಮೂವತ್ತಕ್ಕೂ ಹೆಚ್ಚು ಚಿತ್ರಗಳಿವೆ. ರೇಸ್, ಜಬ್ ತಕ್ ಹೈ ಜಾನ್ ಮುಗಿಸಿ, ಧೂಮ್ ತ್ರೀ ವರೆಗೆ ಅವಳ ಯಶೋಗಾಥೆಯಿದೆ. ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕ್ಯಾಟ್ ಕೈಯ್ಯಲ್ಲಿ ಇನ್ನೂ ನಾಲ್ಕೈದು ಚಿತ್ರಗಳಿವೆ. ಸಧ್ಯ ಬಾಲಿವುಡ್ನ ಭಯಂಕರ್ ಕಾಸ್ಟ್ಲೀ ನಟಿ ಎನಿಸಿಕೊಂಡಿರುವ ಕತ್ರೀನಾ ಕೈಫ್ ಚಿತ್ರವೊಂದಕ್ಕೆ ತೆಗೆದುಕೊಳ್ಳುವ ಸಂಭಾವನೆ ಹದಿನೈದು ಕೋಟಿ.

ಕರೀನಾ ಕಪೂರ್
ಕರೀನಾ ಕಪೂರ್, ಬಾಲಿವುಡ್ನ ಖ್ಯಾತ ನಟಿ. ಸೈಫ್ ಆಲಿ ಖಾನ್ನನ್ನು ವರಿಸಿದ ನಂತರ ಬೇಡಿಕೆ ಕಳೆದುಕೊಂಡಿದ್ದಾಳೆ ಎನ್ನಲಾಗಿತ್ತು. ಆದರೆ ಬಾಲಿವುಡ್ನ ಮೋಸ್ಟ್ ಪಾಪುಲರ್ ನಟಿಯರಲ್ಲಿ ಈಕೆಗೆ ಎರಡನೇ ಸ್ಥಾನ. ಇವಳ ಸಂಭಾವನೆ ಇವತ್ತಿಗೆ ಹದಿನಾಲ್ಕು ಕೋಟಿ.

ವಿದ್ಯಾ ಬಾಲನ್
ಯಾರು ಮರೆಯುತ್ತಾರೆ ಹೇಳಿ ಈ ಬೆಡಗಿಯನ್ನು. ಕೇವಲ ಸೀರೆಗೆ ಸೀಮಿತವಾಗಿದ್ದ ಈ ನಟಿ, ಈಗ ಯಾವ ಬಿಚ್ಚೋ ನಟಿಗೂ ಕಮ್ಮಿಯಿಲ್ಲ ಎಂದು ಸಾಬೀತು ಮಾಡಿದ್ದಾಳೆ. ಗೌರಮ್ಮ, ಡಟರ್ಿ ಹುಡ್ಗಿ ಅಂತ ಕರೆಸಿಕೊಳ್ಳುವುದಕ್ಕೂ ಬಿಚ್ಚುವ ಗುಂಡಿಗೆ ಬೇಕಲ್ವಾ..?. ಅಂದಹಾಗೆ ವಿದ್ಯಾಬಾಲನ್ ಒಂದು ಸಿನಿಮಾಕ್ಕೆ ಒಂಬತ್ತು ಕೋಟಿ ಸಂಭಾವನೆ ಪಡೆಯುತ್ತಾಳೆ.

ಪ್ರಿಯಾಂಕ ಚೋಪ್ರಾ
ಮಾಜಿ ವಿಶ್ವಸುಂದರಿ. ಬಾಲಿವುಡ್ನ ಫ್ಯಾಶನ್ ಬೆಡಗಿ. ನಟನೆಯಲ್ಲಿ ಅಂಥ ಅದ್ಬುತವಲ್ಲದಿದ್ದರೂ ಚಿತ್ರ ರಸಿಕರಿಗೆ ಮೆಚ್ಚುಗೆಯಾಗಿದ್ದಾಳೆ. ಇವಳನ್ನು ಹಾಕಿಕೊಂಡು ಸಿನಿಮಾ ಮಾಡಿದ್ರೇ ಮಿನಿಮಮ್ ಆದಾಯ ಗ್ಯಾರಂಟಿ. ಅಂದಾಜ್ ಚಿತ್ರದ ಮೂಲಕ ಚಿತ್ರರಂಗದ ಆರ್ರಂಗ್ರೇಟ್ರಂ ಆರಂಭಿಸಿದ ಪ್ರಿಯಾಂಕ ಏತ್ರಾಜ್, ಫ್ಯಾಶನ್, ಬರ್ಫಿ ಸೇರಿದಂತೆ ಕೆಲವೇ ಕೆಲವು ಚಿತ್ರಗಳಲ್ಲಿ ನಟಿಸಿದ್ದಾಳೆ. ಪ್ರಿಯಾಂಕ ಚೋಪ್ರಾ ಬಾಲಿವುಡ್ನ ಪ್ರಖ್ಯಾತ ನಟಿಯರಲ್ಲಿ ನಾಲ್ಕನೇ ಸಾಲಿನಲ್ಲಿ ಓಡುತ್ತಿರುವ ಕುದುರೆ. ಅವಳ ಸಂಭಾವನೆ ಬರೋಬ್ಬರಿ ಹತ್ತು ಕೋಟಿ.
ದೀಪಿಕಾ ಪಡುಕೋಣೆ
ಕನ್ನಡದ ಹುಡುಗಿ, ಐಶ್ವರ್ಯ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಬೆಡಗಿ. ಇವತ್ತಿಗೆ ಬಾಲಿವುಡ್ನ ಬಹು ಬೇಡಿಕೆಯ ನಟಿ. ದೀಪಿಕಾ ಪಡುಕೋಣೆ ಬಾಲಿವುಡ್ನಲ್ಲಿ ನಿಚ್ಚಳವಾಗಿ ಬೇರೂರುವುದಕ್ಕೆ ಕಾರಣವಾದ ಸಿನಿಮಾ `ಓಂ ಶಾಂತಿ ಓಂ’. ಅದನ್ನು ಹೊರತುಪಡಿಸಿ `ಲವ್ ಆಜ್ಕಲ್’, `ರೇಸ್ 2′, `ಚೆನ್ನೈ ಎಕ್ಸ್ಪ್ ಪ್ರೆಸ್..’ ಸೇರಿದಂತೆ ಹತ್ತಿರತ್ತಿರ ಐವತ್ತು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾಳೆ. ಅನೇಕ ಸಿನಿಮಾಗಳು ಹಿಟ್ ಆಗಿವೆ. ಸಧ್ಯ ಬಾಲಿವುಡ್ನ ಬಹುಬೇಡಿಕೆ ಇರುವ ತಾರೆಯರಲ್ಲಿ ಐದನೇ ಸ್ಥಾನದಲ್ಲಿರುವ ದೀಪಿಕಾ ಅನಾಮತ್ತು ಎಂಟು ಕೋಟಿ ಸಂಭಾವನೆ ಪಡೆಯುತ್ತಾಳೆ.
ಅನುಷ್ಕಾ ಶರ್ಮ
ಅಯೋಧ್ಯೆಯ ಹುಡುಗಿ. ಇವಳ ಬಾಲಿವುಡ್ ನ ಮಜಬೂತಾದ ಎಂಟ್ರಿ, `ರಬ್ ನೇ ಬನಾದಿ ಜೋಡಿ’ ಚಿತ್ರದ ಮೂಲಕ ಆಗಿತ್ತು. ಅಲ್ಲಿಂದ ಶುರುವಾದ ಅವಳ ಸಿನಿಮಾ ಯಾತ್ರೆ, `ಜಬ್ ತಕ್ ಹೈ ಜಾನ್’ ದಾಟಿಕೊಂಡು `ದಿಲ್ ಧಡಕ್ನೇ ದೋ’ವರೆಗೆ ಬಂದು ನಿಂತಿದೆ. ಬೆರಳೆಣಿಕೆಯ ಚಿತ್ರದಲ್ಲಿ ನಟಿಸಿದರೂ ಬೇಡಿಕೆ ಕಳೆದುಕೊಳ್ಳದ ಈ ನಟಿಯ ಸಂಭಾವನೆ ಏಳು ಕೋಟಿ.

ಸೋನಾಕ್ಷಿ ಸಿನ್ಹಾ
ಖ್ಯಾತ ನಟ ಶತೃಘ್ನ ಸಿನ್ಹಾ ಅವರ ಸುಪುತ್ರಿ, ನೋಡುವುದಕ್ಕೆ ಆಪಲ್ ಥರಾ ಇರುವ ಈ ಸುಂದರಿ ದಬಾಂಗ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟಳು. ಮುಂದೆ `ದಬಾಂಗ್ 2, `ಲೂಟೇರಾ, `ಆರ್ ರಾಜ್ಕುಮಾರ್, `ಹಾಲಿಡೇಯಂಥ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾಳೆ. 2016ರವರೆಗೆ ಒಟ್ಟು ಮೂರು ಚಿತ್ರಗಳಿಗೆ ಸಹಿ ಹಾಕಿದ್ದಾಳೆ. ಸಧ್ಯ ಬಾಲಿವುಡ್ ಮಾರುಕಟ್ಟೆಯಲ್ಲಿ ಈಕೆಯ ಬೆಲೆ ಅರ್ಥಾತ್ ಸಂಭಾವನೆ ಆರು ಕೋಟಿ.

ಬಿಪಾಶ ಬಸು
ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗಕ್ಕೆ ತನ್ನ ಮೈ ಮನಸ್ಸನ್ನೆಲ್ಲಾ ಬೇಕಾಬಿಟ್ಟಿ ತೆರೆದು ಕಿಚ್ಚು ಹತ್ತಿಸಿದ್ದು ಬಿಪಾಶ ಬಸು. ಈಗಿನ ನಟಿಯರ ಬಿಚ್ಚುವ ವೇಗವನ್ನು ಪಡ್ಡೆಗಳು ಇವಳ ಕಾಲದಲ್ಲೇ ಕಂಡು ದಂಗಾಗಿದ್ದಾರೆ.
ಮೈ ಬಿಚ್ಚಿ ನಟಿಸಿದ್ದಲ್ಲದೇ ಅನೇಕರ ಜೊತೆ ಗಾಸಿಪ್ಪಿಗೆ ತಳುಕು ಹಾಕಿಕೊಂಡ ಬಿಪಾಶ ಬಸುಗೂ ಬಾಲಿವುಡ್ ಮಾರುಕಟ್ಟೆಯಲ್ಲಿ ಬೆಲೆ ನಿಗಧಿ ಮಾಡಲಾಗಿದೆ. ಅವಳು ಇವತ್ತಿಗೂ ಐದು ಕೋಟಿಯವರೆಗೆ ಸಂಭಾವನೆ ಪಡೆಯುತ್ತಿದ್ದಾಳೆ. ಇನ್ನೂ ಕೆಲ ನಿಜವಾದ, ಅಪ್ಪಟ ಪ್ರತಿಭೆಗಳಿಗೆ ಇವರಷ್ಟು ಸಂಭಾವನೆಯಿಲ್ಲ. ಅವರು ಮೈ ತೆರೆಯುವುದು ಕಡಿಮೆ, ನಟನೆಯಲ್ಲಿ ಎತ್ತಿದ ಕೈ, ಆದರೆ ಸ್ಯಾಲರಿ ಕಡಿಮೆ..! ಕಾರಣ ಹಲವು..!

ಕಂಗನಾ ರಾನೌತ್
ಫ್ಯಾಶನ್ ಬೆಡಗಿ, ಗ್ಯಾಂಗ್ಸ್ಟರ್ ಹುಡುಗಿ, ರಿವಾಲ್ವರ್ ರಾಣಿ. ಬಹುಶಃ ಇತ್ತೀಚಿನ ಎಲ್ಲಾ ಬಾಲಿವುಡ್ ನಟಿಯರಿಗೆ ಹೋಲಿಸಿದರೇ ಕಂಗನಾ ಅಪ್ಪಟ ಪ್ರತಿಭೆ. ಇವಳ ನಟನೆ ಎಂಥವರನ್ನೂ ಮೈ ಮರೆಸುತ್ತದೆ. ಅದೇಕೋ ಗೊತ್ತಿಲ್ಲ ಎಣ್ಣೇ ಹಾಕಿಕೊಂಡು ಈಕೆ ನಟಿಸುವ ಪಾತ್ರಗಳು ಇವಳನ್ನೇ ಹುಡುಕಿಕೊಂಡು ಬರುತ್ತದೆ. ಗ್ಯಾಂಗ್ ಸ್ಟರ್, ಫ್ಯಾಶನ್, ಕ್ವೀನ್.. ಚಿತ್ರಗಳಲ್ಲಿ ಇವಳ ಯರ್ರಾಬಿರ್ರಿ ಕುಡಿದಿದ್ದಾಳೆ. ಆದರೂ ಬೇರೆ ನಟಿಯರಿಗೆ ಹೋಲಿಸಿದರೇ ಈಕೆಯ ಸಂಭಾವನೆ ಕಡಿಮೆ. ಅಂದಹಾಗೆ ಕಂಗನಾಗೆ ಮಾರುಕಟ್ಟೆಯಲ್ಲಿ ನಿಗಧಿಯಾಗಿರುವ ಬೆಲೆ ನಾಲ್ಕೂವರೆ ಕೋಟಿ.

ಜಾಕ್ವಲೀನ್ ಫರ್ನಾಂಡೀಸ್
ಹೌಸ್ ಫುಲ್, ಮರ್ಡರ್ 2, ರೇಸ್ 2, ರಾಮಯ್ಯ ವಸ್ತಾವಯ್ಯ ಸೇರಿದಂತೆ ಏಳೆಂಟು ಚಿತ್ರಗಳಲ್ಲಿ ನಟಿಸಿರುವ ಜಾಕ್ವೆಲಿನ್, ಅದೆಷ್ಟು ಹಾಟೋ, ಅಷ್ಟೇ ಮುದ್ದು ಕಣ್ರೀ..! ಅಂದಹಾಗೇ ಇವಳ ಸಂಭಾವನೆ, ಸ್ವಲ್ಪ ಹೆಚ್ಚೆ ಎನ್ನಬಹುದಾದ ನಾಲ್ಕು ಕೋಟಿ.

ಸೋನಮ್ ಕಪೂರ್
ಬಾಲಿವುಡ್ನ ಖ್ಯಾತ ನಟ ಅನಿಲ್ ಕಪೂರ್ ಮಗಳು, ಅಪ್ಪನಂತೆ ಮುದ್ದು ಮುದ್ದು. ರಣ್ಬೀರ್ ಕಪೂರ್ ಜೊತೆ `ಸಾವರಿಯಾ’ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದಳು. `ಐ ಹೇಟ್ ಲವ್ ಸ್ಟೋರಿ, `ಆಯಿಶಾ, `ಬಾಗ್ ಮಿಲ್ಕಾ ಬಾಗ್, `ಕುಬ್ಸೂರತ್ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಈಕೆಯ ಸಂಭಾವನೆ 3 ಕೋಟಿ.

ಅಸೀನ್
ಸೌತ್ ಸ್ಟಾರ್ ಇವಳು. ಮಲಯಾಳಂ ಚಿತ್ರದ ಮೂಲಕ ದಶಕಗಳ ಹಿಂದೆಯೇ ಚಿತ್ರಂಗವನ್ನು ಪ್ರವೇಶಿಸಿದ ಅಸೀನ್, ತೆಲುಗು, ತಮಿಳಿನಲ್ಲಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾಳೆ. ಅವಳು ಬಾಲಿವುಡ್ನಲ್ಲಿ ಪ್ರಪ್ರಥಮವಾಗಿ ಬಣ್ಣ ಹಚ್ಚಿದ ಚಿತ್ರ `ಘಜ್ನಿ. ಹಾಗೆಯೇ `ಲಂಡನ್ ಡ್ರೀಮ್ಸ್, `ರೆಡಿ, `ಹೌಸ್ಫುಲ್ ಸೇರಿದಂತೆ ಐದಾರು ಹಿಂದಿ ಚಿತ್ರಗಳಲ್ಲಿ ನಟಿಸಿರುವ ಅಸೀನ್ಗೆ, `ಕೈದಿ 786′ ಒಳ್ಳೇ ಹೆಸರು ತಂದುಕೊಟ್ಟಿತ್ತು. ಇವಳ ಸಂಭಾವನೆ ಮೂರು ಕೋಟಿ.

ಅಂದ, ಚಂದ, ಕೊಂಚ ಪ್ರತಿಭೆ, ಇನ್ಫ್ಲೂಯನ್ಸು, ಅವಕಾಶ ಇಷ್ಟಿದ್ದು ಬಿಟ್ಟರೇ ಬಣ್ಣದಲೋಕದಲ್ಲಿ ಚಿಟ್ಟೆಗಳಾಗಲು ಹೊತ್ತುಬೇಕಿಲ್ಲ. ಜನಪ್ರಿಯತೆಯ ಜೊತೆಗೆ ಕೋಟಿ-ಕೋಟಿ ಹಣ ಸಂಪಾದಿಸಿದಂತಾಗುತ್ತದೆ. ಆಸೆ ಆಗುವುದು ದಿಟ, ಆ ಪ್ರಪಂಚಕ್ಕೆ ತಲುಪಲು ಚಕ್ರವ್ಯೂಹ ಭೇದಿಸಬೇಕೆನ್ನುವುದು ಅಷ್ಟೇ ವಾಸ್ತವ.

  •  ರಾ ಚಿಂತನ್.

POPULAR  STORIES :

ಎಲ್ಲಾದ್ರೂ ಹುಡುಗಿ ವಿದ್ಯುತ್ ಕಂಬ ಹತ್ತೋದು ನೋಡಿದಿರಾ…? #Video

ಆಶಿತಾ-ಶಕೀಲ್ ಲವ್ ಸ್ಟೋರಿ..! ಪ್ರೇಮಕ್ಕಿಲ್ಲ ಜಾತಿ-ಧರ್ಮ..!?

15 ಕೆ.ಜಿ.ತೂಕ ಇಳಿಸಿಕೊಂಡ ತುಪ್ಪದ ಬೆಡಗಿ..! Exclusive Photos Ragini Dwivedi

ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!

ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!

ಅಂಗವೈಕಲ್ಯ ಗೆದ್ದ ಮಹಾನ್ ಸಾಧಕ..! ಅವ್ನು ಆತ್ಮಹತ್ಯೆಗೂ ಯತ್ನಿಸಿದ್ದ..!!

ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’

`ಚಾನೆಲ್ ಸಂಪಾದಕ ಜೈಲುಪಾಲು..!?’ ಯಾರು ಆ ಸಂಪಾದಕ..?

ಈ ವೀಡಿಯೋ ನೋಡಿದ್ರೆ ನಿಮ್ಮ ತಲೆ ಕೆಟ್ಟು ಹೋಗುತ್ತೆ..! ಇದು ರುಂಡ ಮುಂಡ ಬೇರೆಯಾದ ಜೀವಂತ ಮೀನಿನ ಕಥೆ…

ಉಗ್ರರಿಗೆ ಇಸ್ರೇಲ್, ಅಮೆರಿಕಾದಿಂದ ವೆಪನ್ಸ್ ಪೂರೈಕೆ..!? ಪುಟಿನ್ ಹೇಳಿದ ಬೆಚ್ಚಿಬೀಳಿಸುವ ಸತ್ಯ..!?

ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’

ಸಿಯಾಚಿನ್ ಎಂಬ ಸಾವಿನ ಕಣಿವೆ..! ರಣಚಳಿಗೆ ದೇಹ ಮರಗಟ್ಟಿ ಪುಡಿಯಾಗುತ್ತದೆ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article