No menu items!
15.2 C
Munich
Sunday, May 24, 2026

ಕಿಕಿ ಡ್ಯಾನ್ಸ್ ಪರಿಚಯಿಸಿದ್ದು ನಮ್ಮ ಶಂಕರ್ ನಾಗ್…! 80 ರ ದಶಕದಲ್ಲೇ ಕನ್ನಡ ಸಿನಿಮಾದಲ್ಲಿದ್ದ ಈ ಡ್ಯಾನ್ಸ್ ಈಗ ವಿದೇಶಿಯರಿಗೆ ಟ್ರೆಂಡ್..!

Must read

ಅಪಾಯಕಾರಿ ಕಿಕಿ ಡ್ಯಾನ್ಸ್ ಈಗ ವಿಶ್ವಾದಾದ್ಯಂತ ಟ್ರೆಂಡ್ ಆಗಿದೆ. ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರು ಈ ಡ್ಯಾನ್ಸ್ ಮಾಡಿ ವೀಡಿಯೋ ಅಪ್ ಲೋಡ್ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಇವೆಲ್ಲಾ ಈಗ ಹಳೇ ಸುದ್ದಿ.
ಆದರೆ, ಈಗ ವಿದೇಶಿಗರು ಟ್ರೆಂಡ್ ಅಂತ ಕರಿತಿರೋ ಈ ಕಿಕಿ ಡ್ಯಾನ್ಸ್ ನಮ್ಮ ಕನ್ನಡ ಸಿನಿಮಾಗಳಲ್ಲಿ 80 ರ ದಶಕದಲ್ಲೇ ಬಂದಿತ್ತು. ಇದನ್ನು ಪರಿಚಯಿಸಿದ್ದು ನಮ್ಮ ಶಂಕರ್ ನಾಗ್…!


ಗೀತಾ ಚಿತ್ರದ ಏನೇ ಕೇಳು ಕೊಡುವೆ ನಿನಗೆ ನಾನೀಗ ಎಂಬ ಹಾಡಿ‌ನಲ್ಲಿ ಶಂಕರ್ ನಾಗ್ ಚಲಿಸುತ್ತಿದ್ದ ರೈಲಿನಿಂದ ಇಳಿದು ಕಿಕಿ ಡ್ಯಾನ್ಸ್ ಮಾಡಿದ್ದರು.
ಬಳಿಕ ಅಪೂರ್ವ ಸಂಗಮ ಚಿತ್ರದಲ್ಲಿ ಡಾ. ರಾಜ್ ಕುಮಾರ್ ಮತ್ತು ಶಂಕರ್ ನಾಗ್ ಭಾಗ್ಯ ಎನ್ನಲೇ ಪುಣ್ಯ ಎನ್ನಲೇ ಎಂಬ ಹಾಡಿನಲ್ಲಿ ಕಾರಿನಿಂದ ಇಳಿದು ಡ್ಯಾನ್ಸ್ ಮಾಡಿದ್ದರು.


ಈ ವೀಡಿಯೋವನ್ನು ಕೆಲವರು ಸೋಶಿಯಲ್ ಮೀಡಿಯಾ ದಲ್ಲಿ ಹಾಕಿ, ಕಿಕಿಡ್ಯಾನ್ಸ್ ಅನ್ನು ಕನ್ನಡದವರೇ ಪರಿಚಯಿಸಿದ್ದು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದು ವೈರಲ್ ಆಗಿದೆ‌.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article