No menu items!
15.2 C
Munich
Wednesday, April 29, 2026

ಕ್ಷಮೆ ಕೇಳಿದ್ದಕ್ಕೆ ಈ ಸ್ಟಾರ್ ಆಟಗಾರನಿಗೆ ಸಿಕ್ಕಿದ್ದು 1.8 ಕೋಟಿ ರೂ…!

Must read

ಕ್ಷಮೆ ಬೆಲೆ ಕಟ್ಟಲಾಗದ್ದು ಅಂತೀವಿ. ಹಾಗೆಂದ ಮಾತ್ರಕ್ಕೆ ಕ್ಷಮೆ ಕೇಳಿದರೆ ದುಡ್ಡು ಸಿಗಲ್ಲ…! ಆದರೆ, ಈ ಸ್ಟಾರ್ ಆಟಗಾರ ಕ್ಷಮೆ ಕೇಳಿ ಬರೋಬ್ಬರಿ 1.8ಕೋಟಿ ರೂ ಪಡೆದಿದ್ದಾರೆ.

ಇತ್ತೀಚೆಗೆ ಮುಕ್ತಾಯವಾದ ಫುಟ್ಬಾಲ್ ವಿಶ್ವಕಪ್ ನಲ್ಲಿ ಬ್ರೆಜಿಲ್ ಹೀನಾಯ ಪ್ರದರ್ಶನ ನೀಡಿದ್ದು ಗೊತ್ತೇ ಇದೆ. ಸ್ಟಾರ್ ಆಟಗಾರ ನೇಮರ್ ಪ್ರದರ್ಶನ ಸಹ ನಿರಾಸೆ ಮೂಡಿಸಿತ್ತು.
ಇದೀಗ ನೇಮರ್ ಮತ್ತೆ ಕಣಕ್ಕಿಳಿಯುತ್ತಿದ್ದಾರೆ. ಚೀನಾದಲ್ಲಿ ನಡೆಯುತ್ತಿರುವ ಫ್ರೆಂಚ್ ಸೂಪರ್ ಕಪ್ ನಲ್ಲಿ ಪ್ಯಾರಿಸ್ ಸೇಂಟ್ ಜರ್ಮೇನ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ ನೇಮರ್.


ಫಿಫಾ ವಿಶ್ವಕಪ್ ನಲ್ಲಿನ ಕಳಪೆ ಪ್ರದರ್ಶನಕ್ಕೆ ಎಲ್ಲೆಡೆ ಟೀಕೆಗಳು ವ್ಯಕ್ತವಾಗುತ್ತಿದ್ದರೂ ನೇಮರ್ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ವಿಶ್ವಕಪ್ ಸೋಲಿಗೆ ಈಗ ಕ್ಷಮೆಯಾಚಿಸಿದ್ದಾರೆ. ಇದಕ್ಕೆ ಅವರಿಗೆ ಸಿಕ್ಕಿದ್ದು ಬರೋಬ್ಬರಿ 2,66,000 ಡಾಲರ್…ಅಂದರೆ ಸುಮಾರು 1.8 ಕೋಟಿ ರೂ.
ಹೌದು ಇದು ಕಮರ್ಷಿಯಲ್ ವೀಡಿಯೋ. ಜಿಲೆಟ್ ಸಂಸ್ಥೆಯ ಜಾಹಿರಾತು ಒಂದರಲ್ಲಿ ಕಾಣಿಸಿಕೊಂಡಿರುವ ಅವರು ವಿಶ್ವಕಪ್ ಸೋಲಿನ ಬಗ್ಗೆ, ಯಡವಟ್ಟಿನ ಕುರಿತು ಮನ ಬಿಚ್ಚಿ ಮಾತಾಡಿದ್ದಾರೆ.
ತಪ್ಪಿಗೆ ಕ್ಷಮೆ ಕೇಳಿದ್ದಾರೆ. ನಾನು ಹೊಸ ಮನಷ್ಯನಾಗ್ತೀನಿ ಎಂತಲೂ ಹೇಳಿದ್ದಾರೆ. ಈ ಜಾಹಿರಾತಿಗೆ ಅವರಿಗೆ ಕೋಟಿಗಟ್ಟಲೆ ಸಂಭಾವನೆ ನೀಡಲಾಗಿದೆ.
ಇದಕ್ಕೂ ಟೀಕೆ ವ್ಯಕ್ತವಾಗಿದ್ದು, ನೇಮರ್ ದುಡ್ಡಿಗಾಗಿ ಕ್ಷಮೆ ಕೇಳಿದ್ದಾರೆ ಎಂದು ವಿರೋಧಿಸಲಾಗುತ್ತಿದೆ. ಅವರು ಯಾರೋ ಬರೆದುಕೊಟ್ಟ ಸ್ಕ್ರಿಪ್ಟ್ ಅನ್ನು ದುಡ್ಡಿಗಾಗಿ ಓದಿದ್ದಾರೆ .‌ ಮನಸ್ಸಿಂದ ಹೇಳಿದ್ದಲ್ಲ ಎಂದು ಟೀಕಿಸಲಾಗಿದೆ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article