No menu items!
11.1 C
Munich
Wednesday, April 29, 2026

ವಿರಾಟ ದರ್ಶನಕ್ಕೆ `ಲವ್' ಫೇಲ್ಯೂರ್ ಕಾರಣ..!? `ಹೋದರೆ ಹೋಗೇ ನೀ ದೂರ..!?'

Must read

 

ವಿರಾಟ್ ಕೊಹ್ಲಿ. ಈ ಹೆಸರು ಕೇಳಿದ್ರೇ ಜಗತ್ತಿನ ರೋಮವೇ ಎದ್ದುನಿಲ್ಲುತ್ತದೆ. ಆ ಮಟ್ಟಿಗೆ ಕ್ರಿಕೆಟ್ ಲೋಕದಲ್ಲಿ ಮಿಂಚು ಹರಿಸುತ್ತಿರುವ ಅಪ್ರತಿಮ ಪ್ರತಿಭೆ. ವಿರಾಟ್ ಭಾರತ ತಂಡಕ್ಕೆ ಬಂದಾಗಿನಿಂದಲೂ ಉತ್ತಮವಾಗಿಯೇ ಆಡಿದ್ದಾರೆ. ಈಗ್ಗೆ ಎರಡ್ಮೂರು ತಿಂಗಳ ಆಚೆಗೆ ಇದ್ದಕ್ಕಿದ್ದ ಹಾಗೆ ವಿರಾಟ್ ಬ್ಯಾಟಿಂಗ್ ನಲ್ಲಿ ಎಂದಿನ ಲಯ ಕಾಣಿಸಲಿಲ್ಲ. ಮೈದಾನಕ್ಕೆ ಬಂದಷ್ಟೇ ವೇಗವಾಗಿ ಹೊರಟುಹೋಗುತ್ತಿದ್ದರು. ಅದಕ್ಕೆ ಕಾರಣ; ಅನುಷ್ಕಾ ಶರ್ಮ ಅಂದರೆ ನಂಬಲೇಬೇಕು. ಅನುಷ್ಕಾ ಆಗಾಗ್ಗೆ ಜಗಳ ತೆಗೆಯುತ್ತಾ ವಿರಾಟ್ ಏಕಾಗ್ರತೆಗೆ ಭಂಗ ತರುತ್ತಿದ್ದಳಂತೆ. ಹೀಗಾಗಿ ವಿರಾಟ್ ಬ್ಯಾಟಿಂಗ್ ಹಳಿ ತಪ್ಪಿತ್ತು. ಕಡೆಗೆ ಈ ಜಗಳ ಇಬ್ಬರ ಬ್ರೇಕ್ಅಪ್ ವರೆಗೂ ಹೋಯ್ತು. ಮೊದಲೇ ವಿರಾಟ್ಗೆ ಸಿಟ್ಟು ಜಾಸ್ತಿ. ಹಠಮಾರಿ ಬೇರೆ. ಅನುಷ್ಕಾ ಐ ಹೇಟ್ ಯೂ ಅಂದಕೂಡಲೇ, ಕ್ರಿಕೆಟ್ಗೆ ವಿದಾಯ ಹೇಳಿ, ದಾಡಿ ಬಿಟ್ಟು ಆಕೆಯ ಮನೆ ಮುಂದೆ ಪ್ರೀತ್ಸೆ.. ಪ್ರೀತ್ಸೆ ಅಂತ ಹಾಡುತ್ತಾ ಕೂರುತ್ತಾನಾ..? ನೆವರ್. ಹೋದರೇ ಹೋಗೇ ನೀ ದೂರ ಅಂದವ್ನೇ, ಅವಳನ್ನು ಮನಸ್ಸಿನಿಂದ ಸಂಪೂರ್ಣ ದೂರವಿಡಲು ಹಗಲು ರಾತ್ರಿ ಬ್ಯಾಟ್ ಹಿಡಿದು ತಾಲೀಮು ನಡೆಸಿದ. ಅನುಷ್ಕಾ ಮರೆಯಾಗುತ್ತಿದ್ದಂತೆ, ಅವನೊಳಗಿದ್ದ ಅದ್ಭುತ ಬ್ಯಾಟ್ಸ್ ಮನ್ ವಾಪಾಸಾಗಿದ್ದ. ಕ್ರೀಸ್ಗೆ ನಿಂತರೇ ಯಾವ ಬೌಲರ್ಗೂ ಮುಲಾಜಿಲ್ಲದೆ ಹೊಡೆಯತೊಡಗಿದ. ಅವನ ಪ್ರತಿ ಏಟು ಅನುಷ್ಕಾ ಮುಖಕ್ಕೆ ಹೊಡೆದ ಹಾಗಿತ್ತು.

ಆದರೆ ಏನಾಯ್ತು ನೋಡಿ, ಈ ಅನುಷ್ಕಾ ವಿರಾಟ ದರ್ಶನ ನೋಡಿ ಮತ್ತೆ ವಾಪಾಸಾಗಿದ್ದಳು. ನಿಧಾನವಾಗಿ ಮೆಸೇಜ್ ಮಾಡತೊಡಗಿದಳು. ಮೊನ್ನೆ ಪಾಕಿಸ್ತಾನದ ವಿರುದ್ಧ ಅಭೂತಪೂರ್ವ ಪ್ರದರ್ಶನ ನೀಡಿದ ಮೇಲಂತೂ ತೀರಾ ಹತ್ತಿರಕ್ಕೆ ಬಂದು ನಿಂತಿದ್ದಾಳೆ. ಎಷ್ಟಾದರೂ ಹಳೇ ಪ್ರೇಯಸಿ ನೋಡಿ, ಅದೇನೇ ಹಠ ಇದ್ದರೂ ವಿರಾಟ್ ಮನಸ್ಸು ಕರಗಿದೆ. ಇವ್ನೂ ಹತ್ತಿರಕ್ಕೆ ಬಿಟ್ಟುಕೊಂಡಿದ್ದಾನೆ. ಅಕಸ್ಮಾತ್ ಮತ್ತೆ ಅನುಷ್ಕಾ ವಿರಾಟ್ ಏಕಾಗ್ರತೆಗೆ ಭಂಗ ತಂದರೇ ಏನ್ ಮಾಡೋದು ಎಂಬ ಆತಂಕ ಕ್ರಿಕೆಟ್ ಪ್ರೇಮಿಗಳದ್ದಾಗಿದೆ. ಪ್ರತಿಯೊಬ್ಬ ಗಂಡಸಿನ ಯಶಸ್ಸಿನ ಹಿಂದೆ ಹೆಣ್ಣಿರುತ್ತಾಳೆ ನಿಜ, ಅವನತಿಗೂ ಅವಳೇ ಕಾರಣವಾಗುತ್ತಾಳೆ ಎಂದರೆ ಸ್ವಲ್ಪ ಆಲೋಚಿಸಲೇಬೇಕು. ದೇವರು ಅನುಷ್ಕಾಗೆ ಬುದ್ಧಿಕೊಡಲಿ ಅಂತ ವಿರಾಟ್ ಅಭಿಮಾನಿಗಳು ಹಾರೈಸುತ್ತಿರುವ ಸುದ್ದಿಯಿದೆ.

  • ರಾ ಚಿಂತನ್

POPULAR  STORIES :

ಪತ್ರಿಕೋದ್ಯಮದ ಭೀಷ್ಮ..! ಬರವಣಿಗೆ ನಿಲ್ಲಿಸುತ್ತಾರಾ ರವಿ ಬೆಳಗೆರೆ..?

ಶಿವಣ್ಣನ ಜೊತೆಗೆ ಬಿಬಿಸಿ ರೇಡಿಯೋ ನಡೆಸಿದ ಸಂದರ್ಶನ ಇಲ್ಲಿದೆ.. ಕೇಳಿ..!

ಇಲ್ಲಿ ಮುಚ್ಚಿಕೊಂಡರು.. ಅಲ್ಲಿ ಬಿಚ್ಚಿಕೊಂಡರು..!! ಏನಿದೆಲ್ಲಾ ದೀಪಿಕಾ..?

ಭಾರತದಲ್ಲಿದ್ದಾರೆ ಮೂವತ್ತು ಲಕ್ಷಕ್ಕಿಂತ ಹೆಚ್ಚು ವೇಶ್ಯೆಯರು..!? ಮೈ ಮಾರಾಟ ದಂಧೆ ಲೀಗಲೈಜ್ ಆಗುತ್ತಾ..?

ಹೆಂಗಿದ್ದ ಹೆಂಗಾದ ಗೊತ್ತಾ ಅಂಬಾನಿ ಪುತ್ರ..! ಐಪಿಎಲ್ ವೇಳೆ ಅಚ್ಚರಿಗೊಳ್ಳಲು ಸಿದ್ಧರಾಗಿ..!

ದ್ವಾರಕೆಯ ದೋಸೆ ಮತ್ತವಳ ನೆನಪು..!

ಪಾಕಿಸ್ತಾನಕ್ಕಾಗಿ ಖಂಡೀಲ್ ಬಲೋಚ್ ಬೆತ್ತಳಾಗುತ್ತಾಳಂತೆ..!? #Video

`ಆ್ಯಮ್ ಸಾರೀ ಗೇಲ್’ ಅಂದ ಬಿಗ್ಬಿ ಅಮಿತಾಬ್..!? ಅಮಿತಾಬ್ ಮಾಡಿದ ತಪ್ಪೇನು..?

ಇಸ್ಲಾಂ ಮಹಾನ್ ಧರ್ಮ ಎಂದ ನಮೋ..!? ಪಾಕಿಸ್ತಾನ ಮನಃಸ್ಥಿತಿ, ಭಾರತ ಯಥಾಸ್ಥಿತಿ..!?

ಪ್ರೀತಿಗೆ ಬೆಂಕಿಯಿಟ್ಟ ಪಾಗಲ್ ಪ್ರೇಮಿ..! ಪ್ರೀತಿ `ಬೆಂಕಿ’ ಹುಷಾರು..!?

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article