No menu items!
9.3 C
Munich
Wednesday, April 29, 2026

ಯುವಕ ನ ಮೇಲೆ‌ ಜಿ.ಪಂ‌ ಮಾಜಿ ಸದಸ್ಯರ ಮಗನಿಂದ ಹಲ್ಲೆ…

Must read

ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರ ಮಗ ಮತ್ತು ಆತನ ಪುಡಿ ಗ್ಯಾಂಗ್ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.


ಗಿಣಿಗೇರಿ ಗ್ರಾಮದ ಮಾಜಿ ಸದಸ್ಯ ಮಾರುತೆಪ್ಪ ಹಲಗೇರಿ ಅವರ ಮಗ ವಿಜಯ್ ಮತ್ತು ಆತನ ಸ್ನೇಹಿತರು ಆರೋಪಿಗಳು. ಕೊಪ್ಪಳ ತಾಲೂಕಿನ ಕನಕಾಪುರ ಗ್ರಾಮದ ಗಣೇಶ್ ಹಲ್ಲೆಗೊಳಗಾದ ಯುವಕ.
ವಿಜಯ್ ಮತ್ತು ಆತನ ಸ್ನೇಹಿತರಾದ ಶಿವು, ಪರಶುರಾಮ್ ಅವರನ್ನೊಳಗೊಂಡ‌ 15 ಜನರ ತಂಡ ಗಣೇಶ್ ಅವರನ್ನು ಸುಮಾರು 3ಗಂಟೆಗಳ‌ ಕಾಲ ಕಟ್ಟಿ ಹಾಕಿ ಥಳಿಸಿದ್ದಾರೆ ಎನ್ನಲಾಗಿದೆ.


ಗಣೇಶ್ ಮೊಬೈಲ್ ಅಂಗಡಿಗೆ ಹೋದಾಗ ವಿಜಯ್ ಮತ್ತು ತಂಡದವರು ಬೈಕ್ ನಲ್ಲಿ ಹೊತ್ತೊಯ್ದು ಜಮೀನು ಒಂದರಲ್ಲಿ ಹಲ್ಲೆ ನಡೆಸಿದ್ದಾರೆ.‌ಹಳೆ ದ್ವೇಷವೇ ಇದಕ್ಕೆ ಕಾರಣ ಎನ್ನಲಾಗಿದ್ದು,ಗಣೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article