No menu items!
23.9 C
Munich
Wednesday, September 30, 2026

ಕರ್ನಾಟಕ ಸೋಪ್ ಫ್ಯಾಕ್ಟರಿ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಶಾಂತ್ ಎತ್ತಂಗಡಿ!

Must read

ಕರ್ನಾಟಕ ಸೋಪ್ ಫ್ಯಾಕ್ಟರಿ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಶಾಂತ್ ಎತ್ತಂಗಡಿ!

ಬೆಂಗಳೂರು: ಕರ್ನಾಟಕ ಸೋಪ್ ಫ್ಯಾಕ್ಟರಿಯ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಶಾಂತ್ ರನ್ನು ಎತ್ತಂಗಡಿ ಮಾಡಲಾಗಿದೆ. ಭ್ರಷ್ಟಾಚಾರದ ಆರೋಪ ಕೇಳಿಬಂದ ಬೆನ್ನಲ್ಲೇ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಅವರನ್ನು ಮರಳಿ ಅರಣ್ಯ ಇಲಾಖೆಯ ಸೇವೆಗೆ ಕಳುಹಿಸಿ ಆದೇಶ ಹೊರಡಿಸಲಾಗಿದೆ.


ಕರ್ನಾಟಕ ಸೋಪ್ ಫ್ಯಾಕ್ಟರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಶಾಂತ್ ವಿರುದ್ಧ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಆರೋಪಗಳು ಕೇಳಿಬಂದಿದ್ದವು. ಇದರ ಬೆನ್ನಲ್ಲೇ ಅವರನ್ನು ಹುದ್ದೆಯಿಂದ ಎತ್ತಂಗಡಿ ಮಾಡಿ ಮಾತೃ ಇಲಾಖೆಯಾದ ಅರಣ್ಯ ಇಲಾಖೆಗೆ ಮರಳಿ ಕಳುಹಿಸಲಾಗಿದೆ.
ಪ್ರಶಾಂತ್ ವಿರುದ್ಧ ಕೇಳಿಬಂದಿರುವ ಆರೋಪಗಳ ಸತ್ಯಾಸತ್ಯತೆ ಹಾಗೂ ಮುಂದಿನ ಇಲಾಖಾ ಕ್ರಮಗಳ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಇನ್ನೂ ಅರಣ್ಯ ಇಲಾಖೆಯನ್ನ ಆ ದೇವರೇ ಕಾಪಾಡಬೇಕು.

- Advertisement -spot_img

More articles

- Advertisement -spot_img

Latest article