ಇದು ಕಸಗುಡಿಸೋ `ಲಕ್ಷ್ಮಿ'ಯ ಕಥೆ..! ಬೆಂಗಳೂರಿನಲ್ಲಿ ಯಾರ್ಯಾರ ಕಷ್ಟ ಹೇಗಿರುತ್ತೆ ಗೊತ್ತಾ..?

1
64

ಗುಲ್ಬರ್ಗಾದಿಂದ ಬೆಂಗಳೂರಿಗೆ ಬಂದ “ಫ್ಯಾಮಿಲಿ ಸ್ಟೋರಿ” ಕಿತ್ತು ತಿನ್ನುವ ಬಡತನ..! ಜೀವನವೇ ಸಾಕು ಸಾಕೆನಿಸಿತ್ತು..! ಎಷ್ಟೇ ದುಡಿದರೂ ಆ ದುಡಿಮೆ ಯಾವುದಕ್ಕೂ ಸಾಕಾಗುತ್ತಿರಲಿಲ್ಲ..! ಒಂದು ಹೊತ್ತು ಗಂಜಿ ಕುಡಿದರೆ ಇನ್ನೆರಡು ಹೊತ್ತು ಉಪವಾಸ..! ಮನೆಮಂದಿಯೆಲ್ಲಾ ಕೂಲಿ ಕಾರ್ಮಿಕರೇ..! ಇಷ್ಟಾದರೂ ನಿತ್ಯವೂ ಕೂಲಿ ಕೆಲಸ ಸಿಗುತ್ತಿರಲಿಲ್ಲ..! ಕೆಲಸ ಇಲ್ಲದೇ ಸುಮ್ಮನೇ ಕಾಲಹರಣ ಮಾಡಿದ್ರೆ ಅವತ್ತು ಅರೆ ಹೊಟ್ಟೆಯೇ ಗತಿ..! ಹೀಗೆ ಬಡತನ ದಿಂದ ಬೇಸತ್ತು ಹೋಗಿತ್ತು ಆಕೆಯ ಕುಟುಂಬ..! ಈ ಕೆಟ್ಟ ಬಡತನವೇ ಇಡೀ ಕುಟುಂಬವನ್ನೇ ಗುಲ್ಬಾರ್ಗದಿಂದ ಬೆಂಗಳೂರಿಗೆ ಬರುವಂತೆ ಮಾಡಿತು..! ಕೆಲಸ ಮಾಡುವ ಮನಸ್ಸಿದ್ದವರಿಗೆ ಬೆಂಗಳೂರಿನಲ್ಲಿ ಕೆಲಸ ಸಿಕ್ಕೇ ಸಿಗುತ್ತೆ..! ಹುಡುಕ ಬೇಕು.., ಕಷ್ಟಪಟ್ಟು ದುಡಿಯಬೇಕು..! ಕೆಲಸಕ್ಕಾಗಿ ಊರಿನಿಂದ ಊರಿಗೆ ವಲಸೆ ಹೋಗುವುದು ಇಂದು ಅನಿವಾರ್ಯ! ಈ ಅನಿವಾರ್ಯತೆಯಿಂದಲೇ ಆಕೆ ಕುಟುಂಬದೊಂದಿಗೆ ಗುಲ್ಬಾರ್ಗದಿಂದ ಬೆಂಗಳೂರಿಗೆ ಬಂದಿದ್ದಾರೆ..! ಬಡತನ ಮಾತ್ರ ಅವರನ್ನು ಬೆಂಬಿಡದೆ ಕಾಡುತ್ತಲೇ ಇದೆ.
ಈ ಕುಟಂಬಕ್ಕೆ ಕಷ್ಟಪಟ್ಟು ದುಡಿಯುವುದು ಅನಿವಾರ್ಯವಾಗಿತ್ತು..! ತುಂಬಾ ಕಷ್ಟ ಜೀವಿಗಳು..! ಬಡತನ ಬೇರೆ ಎಂಥಹಾ ಕೆಲಸವನ್ನೂ ಮಾಡಲು ತಯಾರಿದ್ದರು..! ಬೆಂಗಳೂರಿಗೆ ಬಂದ ಆರಂಭದ ದಿನಗಳಲ್ಲಿ ಕೆಲಸಕ್ಕಾಗಿ ಅಲೆದಿದ್ದೂ ಇದೆ..! ಇಲ್ಲಿಯೂ ಉಪವಾಸದ ದಿನಗಳನ್ನು ಕಳೆದಿದ್ದೂ ಇದೆ…! ಆ “ಫ್ಯಾಮಿಲಿ ಸ್ಟೋರಿ” ಇಲ್ಲಿದೆ..!

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಆಕೆ ಹೆಸರು ಲಕ್ಷ್ಮೀ..! ಅವರು ಮತ್ತು ಅವರ ಕುಟುಂಬ ಕೂಲಿ ಹುಡುಕಿಕೊಂಡು ಗುಲ್ಬಾರ್ಗದಿಂದ ರಾಜ್ಯ ರಾಜಧಾನಿಗೆ ಬಂದಿದೆ..! ಕೂಲಿ ಕೆಲಸವನ್ನೇ ಆಧರಿಸಿ ಬದುಕಿರುವ ಕುಟಂಬದ ಸ್ಟೋರಿಯಿದು..! ಈ ಕುಟುಂಬದ ಸದಸ್ಯೆ ಲಕ್ಷ್ಮೀಯಂತೂ ಈ ಬಡತನದಿಂದ ತುಂಬಾ ಬೇಸತ್ತು ಹೋಗಿದ್ದಾರೆ..! ಅವರು ನಮ್ಮೊಡನೆ ಕುಟುಂಬವನ್ನು ಕಿತ್ತು ತಿನ್ನುತ್ತಿರುವ ಬಡತನದ ಬಗ್ಗೆ ಅಳಲನ್ನು ತೋಡಿಕೊಂಡಿದ್ದಾರೆ..!
ಲಕ್ಷ್ಮೀ ಬೀದಿ ಶುಚಿ ಮಾಡುತ್ತಾ…15ವರ್ಷ ಕಳೆದರೂ ಜೀವನ ಮಾತ್ರ ಬದಲಾಗಿಲ್ಲ. ಮನೆಯಲ್ಲಿ ಸೀಮೆಎಣ್ಣೆ ಬುಡ್ಡಿಯದ್ದೇ ಬೆಳಕು! ಮನೆ ಮಂದಿ ಎಲ್ಲಾ ದುಡಿದರು ಮಕ್ಕಳ ವಿದ್ಯಾಭ್ಯಾಸ ಮಾತ್ರ ಅರ್ಧಕ್ಕೆ ಪೂರ್ಣವಿರಾಮ..! ಇಲ್ಲಿಗೆ ಬಂದು ಗುತ್ತಿಗೆ ದಿನಗೂಲಿ ನೌಕರಳಾಗಿ ಸೇರಿಕೊಂಡ ಲಕ್ಷ್ಮಿ ಇಂದಿಗೂ ಅದೇ ಕೆಲಸದಲ್ಲಿ ಮುಂದುವರೆದಿದ್ದಾರೆ. ಅವರ ಕುಟುಬದ ನಾಲ್ವರು ಕೂಲಿ ಮಾಡುತ್ತಾರೆ. ಇನ್ನೂ ನಾಲ್ಕು ಚಿಕ್ಕ ಮಕ್ಕಳು ಮನೆಯಲ್ಲಿದ್ದಾರೆ. ಅವರ ವಿದ್ಯಾಭ್ಯಾಸವೂ ಆಗಬೇಕಿದೆ.
ಕೇವಲ 300ರೂಪಾಯಿ ಮಾಸಿಕ ಸಂಬಳಕ್ಕೆ ಗುತ್ತಿಗೆ ದಿನಗೂಲಿ ಕಾರ್ಮಿಕರಾಗಿ ಬೀದಿ ಗುಡಿಸುವ ಕೆಲಸಕ್ಕೆ ಸೇರಿಕೊಂಡ ಲಕ್ಷ್ಮೀಗೆ ಇಂದು ದಿನಕ್ಕೆ 200ರೂ ಅಂದರೆ ಮಾಸಿಕ 6000 ವೇತನ ಸಿಗುತ್ತಿದೆ. ಶ್ರೀನಿವಾಸಪುರ, ಜನತಾಬಜಾರ್ ಆಂಜೆನೇಯ ನಗರದ ಬೀದಿ ಬೀದಿಗಳನ್ನು ನಿತ್ಯ ಗುಡಿಸುತ್ತಾರೆ. ಇಲ್ಲಿರುವ ಮನೆಗಳ ಕಸವನ್ನು ತನ್ನ ಕೈಗಾಡಿಯಲ್ಲಿ ಹಾಕಿಕೊಂಡು ವಿಲೇವಾರಿ ಮಾಡುತ್ತಾರೆ. ಯಾರಾದರೂ ಮಿಕ್ಕಿದ ಆಹಾರ ಪದಾರ್ಥಗಳನ್ನು ಕೊಟ್ಟರೂ ಖುಷಿಯಿಂದ ತೆಗೆದುಕೊಂಡು ಹೋಗುತ್ತಾರೆ..!
ದಿನ ಬೆಳಗ್ಗೆ 10ಗಂಟೆ ತನಕ ತಮಗೆ ನಿಯೋಜಿಸಿರುವ ಬೀದಿಯನ್ನು ಶುಚಿ ಮಾಡುತ್ತಾರೆ. ನಂತರ ತಮ್ಮ ಮೇಸ್ತ್ರೀ ಹೇಳಿದ ಸ್ಥಳಕ್ಕೆ ಹೋಗಿ ಅಲ್ಲಿಯೂ ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಾರೆ. ಮಗಳನ್ನು ಓದಿಸಬೇಕೆಂಬ ಆಸೆ ಇದ್ದರೂ ಬಡತನದಿಂದ ಸಾಧ್ಯವಾಗಿಲ್ಲ. ಐದನೇ ತರಗತಿ ಮುಗಿದ ಮೇಲೆ ಮಗಳು ಕೂಡ ಕುಟುಂಬ ನಿರ್ವಹಣೆಗಾಗಿ ಕೂಲಿಗೆ ಹೋಗಬೇಕಾಗಿ ಬಂತು. ಅವರು ಈಗ ಗಾರೆ ಕೆಲಸಕ್ಕೆ ಹೋಗುತ್ತಿದ್ದಾರೆ.
ಅಲ್ಪ-ಸ್ವಲ್ಪ ಸಂಬಳದಲ್ಲಿ ಬಾಡಿಗೆ ಕಟ್ಟಬೇಕು, ನಿತ್ಯ ಯಾರಾದರೂ ಊಟಕ್ಕೆ ಕೊಟ್ಟರೆ ಪರವಾಗಿಲ್ಲ, ಇಲ್ಲವಾದರೆ ಹೋಟೆಲ್ ಊಟ ಮಾಡಬೇಕು, ಹಣ ಉಳಿಸುವುದಾದರೂ ಹೇಗೆ? ರಜಾದಿನದಲ್ಲಿ ಸಂಬಳವಿಲ್ಲ. ಹೊಸಕೇರಿ ಹಳ್ಳಿಯಲ್ಲಿ ಕುಟುಂಬದೊಡನೆ ವಾಸವಾಗಿದ್ದಾರೆ. ಇಂದಿಗೂ ವಿದ್ಯುತ್ ವ್ಯವಸ್ಥೆ ಇಲ್ಲ..! ಸೀಮೆಎಣ್ಣೆ ಬುಡ್ಡಿಯಲ್ಲೇ ಕಾಲ ಕಳೆಯುತ್ತಿದ್ದಾರೆ…! ಹೀಗೆ ಬೆಂಗಳೂರಿನಂತಹ ನಗರದಲ್ಲಿದ್ದರೂ ಸೀಮೆಎಣ್ಣೆ ಬುಡ್ಡಿಯಲ್ಲೇ ಮುಂದುವರೆಯುತ್ತಿದ್ದಾರೆಂದರೆ ಅವರ ಬದುಕಲ್ಲಿ ಎಷ್ಟರಮಟ್ಟಿಗೆ ಬಡತನದ ಕರಾಳತೆಯಿದೆ.. ಎಂಬುದು ಅರ್ಥವಾಗುತ್ತೆ..! ಇವರ ಬದುಕಿಗೆ ಬೆಳಕೆಂದು ಬರುತ್ತದೆಯೋ..? ಇದು ಲಕ್ಷ್ಮೀ ಮತ್ತು ಆಕೆಯ ಕುಟುಂಬದ ಕತೆ ಮಾತ್ರವಲ್ಲ..! ಇಂತಹ ಎಷ್ಟೋ ಕುಟುಂಬಗಳೂ ಇವೆ..! ಈ ಎಲ್ಲಾ ಕುಟುಂಬಗಳ ಪ್ರತಿನಿಧಿಯಾಗಿ “ಲಕ್ಷ್ಮೀ” ಫ್ಯಾಮಿಲಿ ಇದೆ..! ಹೆಸರಲ್ಲೇ ಲಕ್ಷ್ಮೀಯನ್ನು ಹೊಂದಿರುವ ಇವರಿಗೆ ಚಂಚಲೆ ಲಕ್ಷ್ಮೀದೇವಿಯೆಂದೂ ಒಲಿದು ಬರುತ್ತಾಳೋ..! ಇನ್ನಾದರೂ ಸಂಬಂಧಪಟ್ಟವರು ಇಂತಹ ಬಡ “ಕರ್ಮಯೋಗಿಗಳಿಗೆ” ಬೇಕಾದ ಮೂಲಭೂತ ಅಗತ್ಯಗಳನ್ನಾದರೂ ಪೂರೈಸಲಿ.

  • ಶಶಿಧರ ಡಿ ಎಸ್ ದೋಣಿಹಕ್ಲು

POPULAR  STORIES :

ಇವನು ಮಾರೋದು ನಿಂಬೆಹಣ್ಣು, ಮೆಣಸಿನಕಾಯಿ. ಆದರೆ…?!

ಜಗದಲ್ಲಿ ಎಂತೆಂಥಾ ಕೆಲಸಗಳು ಇವೆ ಗೊತ್ತಾ..?

ಮೂವತ್ತು ವರ್ಷದಿಂದ ಸಂಬಳ ಇಲ್ದೆ ಪಾಠ ಮಾಡ್ತ ಇರೋ ಶಿಕ್ಷಕರು ..!

ಇನ್ಮುಂದೆ ಫೇಸ್ ಬುಕ್ ನಲ್ಲಿ ಡಿಸ್ ಲೈಕ್ ಮಾಡಬಹುದು..!

ಜೀವನಾಧಾರವಾಗಿದ್ದ ಆಡುಗಳನ್ನು ಮಾರಿ ಶೌಚಾಲಯ ಕಟ್ಟಿಸಿ, ಜಾಗೃತಿ ಮೂಡಿಸಿದ ಶತಾಯುಷಿ

ಇದು ಭಾರತದ `ಶ್ರೀಮಂತ’ ಭಿಕ್ಷುಕರ ಕಥೆ..!

ವಿಶ್ವೇಶ್ವರಯ್ಯನವರ ಬಗ್ಗೆ ನಿಮಗೆಷ್ಟು ಗೊತ್ತು..? ಇವತ್ತಿನ ದಿನವಾದ್ರೂ ಅವರ ಬಗ್ಗೆ ತಿಳಿದುಕೊಳ್ಳಿ..

ಟಿವಿ ಸ್ಟೂಡಿಯೋದಲ್ಲೇ ಸಖತ್ ಫೈಟಿಂಗ್..! ಬಾಬಾಗೂ, ಲೇಡಿ ಜ್ಯೋತಿಷಿಗೂ ಲೈವ್ ಜಟಾಪಟಿ..!

ಅವನ ಕಣ್ಣು ಕಿವಿಯಲ್ಲಿತ್ತು..!? ಮಾನವ ಜಗತ್ತಿನಲ್ಲಿ ಇವನೊಂದು ಅದ್ಭುತ..!

ಗೂಗಲ್ ನಲ್ಲಿ ಯಾವ ದೇಶದ ಜನರು ಏನ್ ಏನ್ ಹುಡಕ್ತಾರೆ ಗೊತ್ತಾ..?

ಮದುವೆ ಆಯ್ತಾ..? ಡೈವೋರ್ಸ್ ಯಾವಾಗ..?!

ಸಿಹಿ ಚಹಾದ ಹಿಂದಿನ ಕಹಿ ಸತ್ಯ…!

ಲೋಡ್ ಶೆಡ್ಡಿಂಗ್ ಹೊಡೆತಕ್ಕೆ ಜನಸಾಮಾನ್ಯನ ಲೈಫ್ ಚಿಂದಿ ಚಿತ್ರಾನ್ನ..! 

ಅವತ್ತು ಎಮ್ಮೆ ಕಾಯುತ್ತಿದ್ದವ ಇಂದು ಬಿಪಿಒ ಕಂಪನಿಯ ಮಾಲಿಕ..! ರಿಯಲ್ ಹೀರೋ..

ಇಟ್ ಹ್ಯಾಪನ್ಸ್ ಓನ್ಲಿ ಇನ್ ದುಬೈ..!

ಸಿಸಿಟಿವಿ ಬಯಲು ಮಾಡ್ತು ಹೆಂಡತಿಯ “ಅತ್ತೆಪ್ರೀತಿ”

ಇಡೀ ಊರನ್ನೇ ಶ್ರೀಮಂತ ಮಾಡಿದ ವ್ಯಕ್ತಿಯ ಕಥೆ..!

ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!

 ಅವನು ಐಎಎಸ್ ಆಫೀಸರ್…ಇವನು ಗ್ರೇಟ್ ಕ್ರಿಕೆಟರ್…!

ನಿಮ್ ಮನೇಲೂ ಕರೆಂಟಿಲ್ವಾ..? ಏನೂ ಮಾಡಕ್ಕಾಗಲ್ಲ… ಈ ವೀಡಿಯೋ ನೋಡಿ ನಕ್ಕುಬಿಡಿ..!

ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!

ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

1 COMMENT

LEAVE A REPLY

Please enter your comment!
Please enter your name here