ರಾಜ್ಯದ ಎತ್ತರದ ವ್ಯಕ್ತಿಗೆ ಬೇಕಿದೆ ನೆರವು…!

Must read

ರಾಜ್ಯದ ಅತಿ ಎತ್ತರದ ವ್ಯಕ್ತಿ ಬಾಳಲ್ಲಿ ಬಿರುಗಾಳಿ ಬೀಸಿದೆ. ಅವರಿಗೆ ಬೇಕಿದೆ ದಾನಿಗಳ ನೆರವು‌.
ಬೆಂಗಳೂರು ಹೊರವಲಯದ ನೆಲಮಂಗಲ ಬಳಿ ಶಿರಗನಹಳ್ಳಿ ಗ್ರಾಮದ ನಿವಾಸಿ ಆಗಿರೋ ಕುಮಾರ್ (35) ಅವರು ರಾಜ್ಯದ ಅತ್ಯಂತ ಎತ್ತರದ ವ್ಯಕ್ತಿ. 7ಅಡಿ2 ಇಂಚು ಎತ್ತರ ಇರೋ ಇವರೀಗ ತುಂಬಾ ಕಷ್ಟದಲ್ಲಿದ್ದಾರೆ.


11ವರ್ಷದ ಬಾಲಕನಿರುವಾಗಲೇ ಪಿಟ್ಯೂಟರಿ ಮೈಕ್ರೋ ಡೆನೋಮಾ ರೋಗದಿಂದ ಬಳಲಿ ಅತಿ ಎತ್ತರಕ್ಕೆ ಬೆಳೆದಿದ್ದಾರೆ. ಇದೀಗ ಈ ರೋಗದಿಂದ ತುಂಬಾನೇ ಬಳಲುತ್ತಿದ್ದಾರೆ. ಇವರು ವೈದ್ಯಲೋಕಕ್ಕೆ ಸವಾಲಾಗಿ ಬೆಳೆದಿದ್ದಾರೆ. ಇವರ ಕುಟುಂಬಕ್ಕೆ ಕೂಲಿಯೇ ಆಧಾರ.


ಇವರು ಅತಿ ಎತ್ತರದ ಸಮಸ್ಯೆಯ ಜೊತೆಗೆ ಇತ್ತೀಚೆಗೆ ಅಪಘಾತದಿಂದ ಕಾಲು ಮುರಿದು ನಡೆಯಲಾಗದ ಸ್ಥಿತಿಯಲ್ಲಿದ್ದಾರೆ‌. ತಂದೆ ರಾಮಕೃಷ್ಣಯ್ಯ ಹತ್ತಾರು ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. ತಾಯಿ ನಾಗರತ್ನ ವ್ಯವಸಾಯ ಮಾಡುತ್ತಾರೆ. ಇವರುಗಳ ಸ್ಥಿತಿ ನೋಡಿ ಮನೆಬಿಟ್ಟು ಹೋಗಿದ್ದಾರೆ‌. ಕುಮಾರ ಅವರ ಆಸ್ಪತ್ರೆ ವೆಚ್ಚ , ಜೀವನ ನಿರ್ವಹಣೆಗೆ ದಾನಿಗಳ ಸಹಾಯ ಬೇಕಿದೆ.

- Advertisement -spot_img

More articles

- Advertisement -spot_img

Latest article