No menu items!
15.2 C
Munich
Wednesday, April 29, 2026

ಮೂರು ಮದ್ವೆಯಾದವನ ವಿರುದ್ಧ ದೂರು ನೀಡಿದ್ರೂ ಕ್ರಮಕೈಗೊಳ್ಳದ ಪೊಲೀಸರು

Must read

ಮೂರು ಮದುವೆಯಾದ ವ್ಯಕ್ತಿಯ ವಿರುದ್ಧ ದೂರು ನೀಡಿದರೂ ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಳ್ಳದ ಕಾರಣ ಮಹಿಳಾ ಸ್ವರಾಜ್ ಮಹಿಳಾ ಸಂಘಟನೆ ಕಾರ್ಯಕರ್ತೆಯರು ಡಿವೈಎಸ್ ಪಿ ಕಚೇರಿ ಮುಂದೆ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ.
ಚನ್ನಪಟ್ಟಣ ತಾಲೂಕಿನ ಅಂಬಾಡಹಳ್ಳಿ ಗ್ರಾಮದ ವ್ಯಕ್ತಿಯೊಬ್ಬ ಮೂರು ಮದ್ವೆಯಾಗಿದ್ದು, ಈ ಬಗ್ಗೆ ಕಳೆದ ಏಪ್ರಿಲ್ ನಲ್ಲಿ ಮಹಿಳಾ ಸಂಘಟನೆ ಕಾರ್ಯಕರ್ತೆಯರು ಪೊಲೀಸರಿಗೆ ದೂರು ನೀಡಿದ್ದರು. ಆಗ ಚುನಾವಣಾ ಕರ್ತವ್ಯದಲ್ಲಿದ್ದ ಪೊಲೀಸರು ದೂರು ದಾಖಲಿಸಿಕೊಂಡಿರ್ಲಿಲ್ಲ. ಚುನಾವಣೆ ಮುಗಿದು ಇಷ್ಟು ದಿನವಾದರೂ ಕ್ರಮಕ್ಕೆ ಮುಂದಾಗದ ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರ ನಿಲುವನ್ನು ಕಾರ್ಯಕರ್ತೆಯರು ಖ‌ಂಡಿಸಿದ್ದಾರೆ.


ದೂರು ಪಡೆದರೂ ಎಫ್ ಐ ಆರ್ ದಾಖಲಿಸಿಲ್ಲ. ಮೂರು ಮದ್ವೆಯಾದವ ಆರಾಮಾಗಿ , ಭಯವಿಲ್ಲದೆ ಓಡಾಡಿಕೊಂಡಿದ್ದಾನೆ‌‌. ಚನ್ನಪಟ್ಟಣದಲ್ಲಿ ಕಾನೂನು ವ್ಯವಸ್ಥೆಯ ಹದಗೆಟ್ಟಿದೆ ಎಂದು ಪ್ರತಿಭಟನಕಾರರು ಆಕ್ರೋಶವ್ಯಕ್ತಪಡಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article