No menu items!
11.7 C
Munich
Friday, May 1, 2026

Breaking News : News First ಲಾಂಚ್ ಗೆ ಡೇಟ್ ಫಿಕ್ಸ್..!

Must read

ಸ್ಟಾರ್ ನಟ – ನಟಿಯ ಸಿನಿಮಾ  ಅನೌನ್ಸ್ ಆಗಿ , ಸೆಟ್ಟೇರಿದ್ದಲ್ಲಿಂದಲೂ ಸಖತ್ ಸದ್ದು ಮಾಡುತ್ತಲೇ ಇರುತ್ತೆ.. ಯಾವಾಗಪ್ಪ ಸಿನಿಮಾ ರಿಲೀಸ್ ಆಗುತ್ತೆ ಅಂತ ಅಭಿಮಾನಿಗಳು ಕಾಯ್ತಿರ್ತಾರೆ . ಇಂಥಾ ಕ್ಯೂರಿಯಾಸಿಟಿ ಯಾವ್ದಾದ್ರು ಕಂಪನಿ, ಚಾನಲ್ ವಿಚಾರದಲ್ಲಿ ಇರುತ್ತಾ…!? ಸಾಧ್ಯನೇ ಇಲ್ಲ..! ಆದ್ರೆ ಕನ್ನಡ ಸುದ್ದಿ ವಾಹಿನಿಗಳ ಪಟ್ಟಿಗೆ ಹೊಸದಾಗಿ ಸೇರ್ಪಡೆ ಆಗ್ತಿರೋ ನ್ಯೂಸ್ ಫಸ್ಟ್ ಅಂತಹದ್ದೊಂದು ಕುತೂಹಲ ನಿರೀಕ್ಷೆಯನ್ನು ಹುಟ್ಟು ಹಾಕಿದೆ…! ಈಗಾಗಲೇ ಡಿಜಿಟಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿರೋ ನ್ಯೂಸ್ ಫಸ್ಟ್ ನ್ಯೂಸ್ ಚಾನಲ್ ಆಗಿ ಮನೆ ಮನೆ ತಲುಪುವ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಕೊನೆಗೂ ಅದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಸೆಪ್ಟೆಂಬರ್ 20 ರಂದು ನ್ಯೂಸ್ ಫಸ್ಟ್ ಕನ್ನಡಿಗರ ಮನೆ ತಲುಪಲಿದೆ..!

ಹೌದು, ಮೂರು ವರ್ಷದ ಹಿಂದೆ , ಅಂದ್ರೆ 2017ರ ಸೆಪ್ಟೆಂಬರ್ 23 ರಂದು ಒಂದು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿತ್ತು. ಇದು ಮಾಧ್ಯಮ ಕ್ಷೇತ್ರದಲ್ಲಿ ಭಾರಿ ಸಂಚಲವನ್ನುಂಟು ಮಾಡಿದ್ದ ಸುದ್ದಿ. ಟಿವಿ9ನಿಂದ ಚೀಫ್ ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ರವಿಕುಮಾರ್ ಮತ್ತು ಎಕ್ಸಿಕ್ಯೂಟಿವ್ ಪ್ರಡ್ಯೂಸರ್ ಮಾರುತಿ ಹೊರಬಂದಿದ್ದರು. ಈ ಸುದ್ದಿಯನ್ನು ದಿ ನ್ಯೂ ಇಂಡಿಯನ್ ಟೈಮ್ಸ್ ನಲ್ಲಿ ನೀವು ಓದಿದ್ರಿ.

ಟಿವಿ9 ಆರಂಭದಿಂದಲೂ ಜೊತೆಯಾಗಿದ್ದ ಇವರಿಬ್ಬರು ಒಟ್ಟಿಗೇ ರಾಜೀನಾಮೆ ನೀಡಿದ್ದು ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಇವರು ಟಿವಿ9 ಸಂಸ್ಥೆಯ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ ತೆರೆಮರೆಯ ಹೀರೋಗಳು. ಇವರ ಸಾಮರ್ಥ್ಯ ಎಂತಹದ್ದು ಎನ್ನೋದು ಮಾಧ್ಯಮ ಲೋಕಕ್ಕೆ ಚೆನ್ನಾಗಿ ಗೊತ್ತಿದೆ.
ಇವರಿಬ್ಬರು 2006ರ ಮಾರ್ಚ್ 1ರಂದು ಟಿವಿ9 ಗೆ ಸೇರಿದ್ದರು.  ಸುಧೀರ್ಘ 12 ವರ್ಷಗಳ ಕಾಲ ಟಿವಿ9ನಲ್ಲಿ ಸೇವೆಸಲ್ಲಿಸಿದ್ದರು. ರಾಜಕೀಯ ವಲಯದಲ್ಲಿ ಪ್ರಮುಖ ಪಕ್ಷಗಳ ನಾಯಕರುಗಳು ಹೇಗೋ? ಸಿನಿಮಾ ರಂಗದಲ್ಲಿ ಸೂಪರ್ ಸ್ಟಾರ್‍ಗಳು ಹೇಗೋ ಹಾಗೆ ಪತ್ರಿಕೋದ್ಯಮದಲ್ಲಿ ರವಿಕುಮಾರ್ ಮತ್ತು ಮಾರುತಿ!

ವಿಶೇಷವೆಂದರೆ ಇವರಿಬ್ಬರು ಬಹುಕಾಲದ ಆತ್ಮೀಯ ಸ್ನೇಹಿತರು. ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ ಇವರು, ಒಟ್ಟಿಗೆಯೇ ಈ-ಟಿವಿಯಲ್ಲಿ ವೃತ್ತಿ ಜೀವನ ಆರಂಭಿಸಿದವರು. ಬಳಿಕ ಟಿವಿ9 ಸಂಸ್ಥೆ ಆರಂಭವಾಗುವಾಗ ಮೊದಲ ದಿನದಿಂದಲೇ ಸಂಸ್ಥೆಯ ಜೊತೆ ಇದ್ದವರು. ಟಿವಿ9ನ ಆಧಾರಸ್ತಂಭಗಳಾಗಿದ್ದವರು.

ದೃಶ್ಯಮಾಧ್ಯಮ ಜಗತ್ತಿನಲ್ಲಿ ಉತ್ತುಂಗದ ಶಿಖರದಲ್ಲಿರುವ ಪ್ರಮುಖ ಹೆಸರೇ ರವಿಕುಮಾರ್ ಹಾಗೂ ಮಾರುತಿ. ಉತ್ತಮ ಸಮಾಜಕ್ಕಾಗಿ ಎಂಬ ಘೋಷವಾಕ್ಯದಿಂದ ಜನಮನ ಗೆದ್ದಿರುವ ಟಿವಿ9 ಸಂಸ್ಥೆಯ ಯಶಸ್ಸಿನ ಪಯಣದ ಹಿಂದೆ ಇವರ ಕೊಡುಗೆ ಅಪಾರ.
ಹೆಚ್ಚು ಕಡಿಮೆ ದಶಕಗಳ ಕಾಲ ಟಿವಿ9ನಲ್ಲಿ ತಮ್ಮ ಸೇವೆ ಸಲ್ಲಿಸಿರುವ ಇವರ ಗರಡಿಯಲ್ಲಿ ಪಳಗಿದ ಯುವಪತ್ರಕರ್ತರು ಬಹಳಷ್ಟು ಮಂದಿ. ಇವತ್ತು ದೃಶ್ಯ ಮಾಧ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅನೇಕ ಯುವಪತ್ರಕರ್ತ ಮಿತ್ರರಿಗೆ ರವಿಕುಮಾರ್ ಮತ್ತು ಮಾರುತಿಯವರು ಗುರುಗಳು, ಪತ್ರಿಕೋದ್ಯಮದ ಅ, ಆ, ಇ,ಈ.. ಹೇಳಿಕೊಟ್ಟವರು.

ದೃಶ್ಯಮಾಧ್ಯಮ ಲೋಕದ ಈ ಇಬ್ಬರು ಚಕ್ರವರ್ತಿಗಳು ಒಟ್ಟಿಗೆ ಆ ಸಂಸ್ಥೆಯನ್ನು ಬಿಟ್ಟು ಹೊರಬಂದಾಗ ಅನೇಕ ರೀತಿಯ ಅಭಿಪ್ರಾಯಗಳು ಕೇಳಿಬಂದಿದ್ದವು.
ಈಟಿವಿ ನ್ಯೂಸ್‍ಗೆ ಹೋಗ್ತಾರೆ, ಸುವರ್ಣ ಚಾನಲ್‍ಗೆ ಹೋಗ್ತಾರೆ ಎಂಬ ಸುದ್ದಿ ಕೇಳಿಬಂದಿತ್ತು. ನಂತರ ಎಬಿಪಿ ನ್ಯೂಸ್ ಆರಂಭವಾಗುತ್ತಿದ್ದು, ಇದರ ಸಾರಥಿಗಳು ಇವರೇ ಎಂಬ ಗಾಸಿಪ್ ಹಬ್ಬಿತ್ತು. ಸ್ಟಾರ್ ಸ್ಪೋಟ್ಸ್ ಕನ್ನಡದಲ್ಲಿ ಬರುತ್ತೆ ಅದರ ಉಸ್ತುವಾರಿ ರವಿಕುಮಾರ್ ಮತ್ತು ಮಾರುತಿ ಎಂಬ ಮಾತು ಸಹ ಕೇಳಿಬಂದಿತ್ತು. ಅಷ್ಟೇ ಅಲ್ಲದೇ ಝೀ ನ್ಯೂಸ್‍ಗೆ ಹೋಗ್ತಾರೆ ಎಂಬ ಗಾಳಿಸುದ್ದಿಯೂ ಇತ್ತು.
ಇವೆಲ್ಲದರ ನಡುವೆ ಹೊಸ ಚಾನಲ್ ಮಾಡ್ತಾರೆ ಎಂದು ಒಂದಿಷ್ಟು ಜನ ಹೇಳ್ತಿದ್ರು. ಅವರ ಅಭಿಪ್ರಾಯ ಸರಿಯಾಗಿಯೇ ಇತ್ತು. 

ರವಿಕುಮಾರ್ ಮತ್ತು ಮಾರುತಿ ಅವರ ಸಾರಥ್ಯದಲ್ಲಿ ಕನ್ನಡ ಮಾಧ್ಯಮ ಲೋಕಕ್ಕೆ ಹೊಸದೊಂದು ಚಾನಲ್ ಬರುತ್ತಿದೆ .. ಅದುವೇ ನ್ಯೂಸ್ ಫಸ್ಟ್ ..

ಕಳೆದ 2-3 ವರ್ಷಗಳಿಂದ ಡಿಜಿಟಲ್ ವೇದಿಕೆಯಲ್ಲಿ ನ್ಯೂಸ್ ಫಸ್ಟ್ ಸಿಕ್ಕಾಪಟ್ಟೆ ಸೌಂಡು ಮಾಡ್ತಿದೆ. ಇನ್ಮುಂದೆ ದೃಶ್ಯಮಾಧ್ಯಮ ಕ್ಷೇತ್ರದಲ್ಲಿ ಮಿಂಚಲಿದೆ. ಸೆಪ್ಟೆಂಬರ್ 20 ರಿಂದ ನಿಮ್ಮ ಮನೆ ಮನೆಯಲ್ಲಿ ನ್ಯೂಸ್ ಫಸ್ಟ್ …!

ಇನ್ನು ಬ್ಯುಸ್ ನೆಸ್ ಹೆಡ್ ಆಗಿ ದಿವಾಕರ್ ಅವರು ನ್ಯೂಸ್ ಫಸ್ಟ್  ಬಲವಾಗಿದ್ದಾರೆ.

ಜನಪ್ರಿಯ ನಿರೂಪಕರಾದ ಸೋಮಣ್ಣ ಮಾಚಿಮಾಡ, ಜಾಹ್ನವಿ ಮಹಡಿ, ಸ್ಮಿತಾ ರಂಗನಾಥ್ ಸೇರಿದಂತೆ ಅನೇಕ ಪ್ರಮುಖರು ನ್ಯೂಸ್ ಫಸ್ಟ್ ಟೀಮ್ ನಲ್ಲಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article