ಉದ್ಯಾನವನಗಳ ತಿದ್ದುಪಡಿ ಮಸೂದೆಗೆ ವಿರೋಧಿಸಿ ಕರವೇ ಪ್ರತಿಭಟನೆ
ಬೆಂಗಳೂರು: ಉದ್ಯಾನವನಗಳ ಜಾಗವನ್ನು ಮೂಲಸೌಕರ್ಯ ಹಾಗೂ ಇತರ ಅಭಿವೃದ್ಧಿ ಯೋಜನೆಗಳಿಗೆ ಬಳಸಲು ಅವಕಾಶ ನೀಡುವ ತಿದ್ದುಪಡಿ ಮಸೂದೆ ಜಾರಿಗೆ ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದಿಂದ ಬೃಹತ್ ಪ್ರತಿಭಟನೆ ನಡೆಯಿತು.
ಲಾಲ್‌ಬಾಗ್‌ಗಾಗಿ ಕಾಲ್ನಡಿಗೆ ಹೆಸರಿನಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಿದ ಪ್ರತಿಭಟನಾಕಾರರು, ಉದ್ಯಾನವನಗಳು ಕೇವಲ ಹಸಿರು ಪ್ರದೇಶವಲ್ಲ, ಬೆಂಗಳೂರಿನ ಪರಂಪರೆ, ಹೆಮ್ಮೆ ಹಾಗೂ ಭವಿಷ್ಯ ಎಂದು ಹೇಳಿದರು.
ಅಭಿವೃದ್ಧಿ ಹೆಸರಿನಲ್ಲಿ ಶೇ.5ರಷ್ಟು ಉದ್ಯಾನವನದ ಜಾಗ ಬಳಸಲು ಅವಕಾಶ ನೀಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ತಿದ್ದುಪಡಿ ಜಾರಿಯಾದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹಸಿರು ಪ್ರದೇಶ ನಾಶವಾಗುವ ಆತಂಕವಿದೆ ಎಂದು ಹೇಳಿದರು.
ಐತಿಹಾಸಿಕ ಲಾಲ್‌ಬಾಗ್‌ನ ಪ್ರತಿಯೊಂದು ಇಂಚು ಹಸಿರಿಗೂ ಮಹತ್ವವಿದ್ದು, ಉದ್ಯಾನವನಗಳ ಸಂರಕ್ಷಣೆಗೆ ಸರ್ಕಾರ ಆದ್ಯತೆ ನೀಡಬೇಕು. ಜನವಿರೋಧಿ ಹಾಗೂ ಪರಿಸರವಿರೋಧಿ ತಿದ್ದುಪಡಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಉದ್ಯಾನವನಗಳ ತಿದ್ದುಪಡಿ ಮಸೂದೆಗೆ ವಿರೋಧಿಸಿ ಕರವೇ ಪ್ರತಿಭಟನೆ



