ಅಂದು ಆಟೋ ಚಾಲಕ, ಇಂದು ಪಾಲಿಕೆ ಮೇಯರ್

0
115

ಹುಟ್ಟಿದ್ದು ರೈತ ಕುಟುಂಬದಲ್ಲಿ, ಓದಿದ್ದು 10ನೇ ತರಗತಿವರೆಗೆ ಮಾತ್ರ. ಬದುಕು ಕಟ್ಟಿಕೊಂಡಿದ್ದು ಆಟೋ ಚಾಲಕನಾಗಿ. ಈಗ ಪಾಲಿಕೆ ಮೇಯರ್…!
36ವರ್ಷದ ರಾಹುಲ್ ಜಾಧವ್ ಅವರ ಸ್ಟೋರಿ ಇದು. ರೈತ ಕುಟುಂಬದಲ್ಲಿ ಹುಟ್ಟಿದ ರಾಹುಲ್ ಜಾಧವ್ ಅವರು 1996ರಿಂದ 2003 ರವರೆಗೆ ರಿಕ್ಷಾ ಓಡಿಸಿ ಜೀವನ ನಡೆಸಿದವರು. ಇವತ್ತು ಮಹಾರಾಷ್ಟ್ರ ಪ್ರತಿಷ್ಠಿತ ಪಿಂಪ್ರಿ-ಚಿಂಚವಾಡ ಪಾಲಿಕೆಯ ಮೇಯರ್ ಆಗಿದ್ದಾರೆ…!
2003ರವರೆಗೆ 6 ಸೀಟುಗಳ ಆಟೋ ಓಡಿಸುತ್ತಿದ್ದ ಇವರು 6ಸೀಟಿನ ಆಟೋ ರಿಕ್ಷಾ ನಿಷೇಧಿಸ್ಪಟ್ಟಾಗ ಕೃಷಿ ಭೂಮಿಯಲ್ಲಿ ದುಡಿದರು.‌ಖಾಸಗಿ ಕಂಪನಿಯೊಂದರಲ್ಲಿ ಡ್ರೈವರ್ ಆಗಿ ಕೆಲಸಕ್ಕೆ ಸೇರಿದರು.

2006ರ ಹೊತ್ತಿಗೆ ರಾಜಕೀಯ ಇವರನ್ನು ಸೆಳೆಯಿತು. 2007ರಲ್ಲಿ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಸೇರಿದರು. 2012ರಲ್ಲಿ ಮೊದಲ ಬಾರಿಗೆ ಎಂಎನ್ ಎಸ್ ಟಿಕೆಟ್ ನಡಿ ಕಾರ್ಪೋರೇಟರ್ ಆಗಿ ಆಯ್ಕೆಯಾದರು. 2017ರಲ್ಲಿ ಬಿಜೆಪಿ ಸೇರಿ ಎರಡನೇ ಬಾರಿ ನಗರ ಪಾಲಿಕೆ ಸದಸ್ಯರಾದರು.
ಮೇಯರ್ ಆಗಿದ್ದ ನಿತಿನ್ ಕಾಲ್ಜೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಈ ರಾಹುಲ್ ಜಾದವ್ ಅವರ ಹೆಸರನ್ನು ಪ್ರಸ್ತಾಪಿಸಿತು. ಎನ್ ಸಿಪಿ ಸಹ ತನ್ನ ಅಭ್ಯರ್ಥಿಯನ್ನು ಘೋಷಿಸಿತು. ಶನಿವಾರ ಮೇಯರ್ ಗದ್ದುಗೆಗಾಗಿ ಮತದಾನ ನಡೆಯಿತು. ಚಲಾಯಿತ 120ಮತಗಳಲ್ಲಿ 81 ಮತಗಳನ್ನು ಪಡೆಯುವುದರೊಂದಿಗೆ ಜಾದವ್ ಮೇಯರ್ ಆಗಿ ಆಯ್ಕೆಯಾದರು.

LEAVE A REPLY

Please enter your comment!
Please enter your name here