ಕರ್ನಾಟಕ ಕ್ರಶ್ ರಶ್ಮಿಕಾ ತೆಕ್ಕೆಗೆ ಬಿತ್ತು ಬೊಂಪರ್ ಆಫರ್..!!

Must read

ಕರ್ನಾಟಕ ಕ್ರಶ್ ರಶ್ಮಿಕಾ ತೆಕ್ಕೆಗೆ ಬಿತ್ತು ಬೊಂಪರ್ ಆಫರ್..!!

ರಶ್ಮಿಕಾ ಸ್ಯಾಂಡಲ್ವುಡ್ ಮಾತ್ರವಲ್ಲ ಈಗ ತೆಲುಗು ಸಿನಿಮಾದಲ್ಲೂ ತುಂಬಾ ಬ್ಯೂಸಿ.. ಸದ್ಯ ಕನ್ನಡದಲ್ಲಿ ಯಜಮಾನ, ಪೊಗರು ಚಿತ್ರವನ್ನ ಒಪ್ಪಿಕೊಂಡಿರುವ ಈ ಅಂಜನಿಪುತ್ರನ ರಾಣಿ, ಇಲ್ಲಿಗಿಂತ ತೆಲುಗು ಸಿನಿಮಾಗಳಲ್ಲೇ ಹೆಚ್ಚಿವೆ.. ಈ ನಡುವೆ ಈಕೆಯನ್ನ ಮತ್ತೊಬ್ಬ ಸ್ಟಾರ್ ನ ಚಿತ್ರದ ಆಫರ್ ಹುಡುಕಿಕೊಂಡು ಬಂದಿದ್ಯಂತೆ…

ಈ ನಾಯಕ‌ನ ಸಿನಿಮಾ ಮೂಲಕ ತಮಿಳು ಇಂಡಸ್ಟ್ರಿಗೂ ರಶ್ಮಿಕಾ ಎಂಟ್ರಿ ನೀಡಲ್ಲಿದ್ದಾರೆ.. ಈಗಾಗಲೇ ತೆಲುಗು ಸಿನಿಮಾಗಳಲ್ಲಿ ಅಭಿನಯಿರುವ ರಶ್ಮಿಕಾಗೆ ತಮಿಳಿನಲ್ಲೂ ಬೇಡಿಕೆ ಹೆಚ್ಚಾಗಿದೆ.. ಹೀಗಾಗೆ ಈಕೆಯನ್ನ ಕಾಲಿವುಡ್ ಸಿನಿ ದುನಿಯಾಗೆ ಗ್ರ್ಯಾಂಡ್ ಆಗಿಯೇ ಎಂಟ್ರಿ ನೀಡಿಸಲು ಪ್ಲಾನ್ ಮಾಡಲಾಗಿದೆ… ಅಂದಹಾಗೆ ರಶ್ಮಿಕಾ ಸ್ಕ್ರೀನ್ ಷೇರ್ ಮಾಡಿಕೊಳ್ಳಲ್ಲಿರುವುದು ತಮಿಳಿನ‌ ಸ್ಟಾರ್ ನಟ ವಿಜಯ್ ಅವರೊಂದಿಗೆ…

ಹೌದು, ಸದ್ಯ ಸರ್ಕಾರ್ ಸಿನಿಮಾದ ಮೂಲಕ ಕೋಟಿ ಕೋಟಿ ಕೊಳ್ಳೆ ಹೊಡೆಯುತ್ತಿರುವ ವಿಜಯ್ ಅಭಿನಯದ ಮುಂದಿನ ಚಿತ್ರಕ್ಕೆ‌ ರಶ್ಮಿಕಾ ಅವರನ್ನ ಆಯ್ಕೆ‌ ಮಾಡಿದ್ದಾರೆ ಅನ್ನೋ ಬಗ್ಗೆ ಸುದ್ದಿಗಳು ಕೇಳಿಬಂದಿದೆ.. ಥೇರಿ ಹಾಗೆ ಮಾರ್ಸಲ್ ಸಿನಿಮಾವನ್ನ ನಿರ್ದೇಶನದ ಮಾಡಿದ್ದ ಅತ್ಲಿ ಮತ್ತೆ ಇದೇ ನಟನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.. ಹೀಗಾಗೆ ಸಮಂತಾ, ಕೀರ್ತಿ ಸುರೇಶ್ ಗಿಂತ ರಶ್ಮಿಕಾ ವಿಜಯ್ ಪೇರ್ ಕ್ಯೂಟ್ ಆಗಿ ಇರಲಿದೆ ಅನ್ನೋದು ಅಲ್ಲಿನ ಅಭಿಮಾನಿಗಳ‌ ಮಾತಾಗಿದ್ಯಂತೆ.. ಹೀಗಾಗೆ ಡೈರೆಕ್ಟರ್ ರಶ್ಮಿಕಾಗೆ ಬರಮ್ಮ ನಮ್ಮ ಸಿನಿಮಾಗೆ ಅಂತ ಹೇಳಿದ್ದಾರಂತೆ..

- Advertisement -spot_img

More articles

- Advertisement -spot_img

Latest article