No menu items!
18.6 C
Munich
Tuesday, April 28, 2026

ಟಿವಿ9ನಿಂದ ಹೊರಬಂದ ರವಿಕುಮಾರ್, ಮಾರುತಿ ಅವರ ಹೊಸ ಚಾನಲ್ ಯಾವುದು ಗೊತ್ತಾ..?

Must read

ಸೆಪ್ಟೆಂಬರ್ 23 ರಂದು ಒಂದು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿತ್ತು. ಇದು ಮಾಧ್ಯಮ ಕ್ಷೇತ್ರದಲ್ಲಿ ಭಾರಿ ಸಂಚಲವನ್ನುಂಟು ಮಾಡಿದ ಸುದ್ದಿ. ಟಿವಿ9ನಿಂದ ಚೀಫ್ ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ರವಿಕುಮಾರ್ ಮತ್ತು ಎಕ್ಸಿಕ್ಯೂಟಿವ್ ಪ್ರಡ್ಯೂಸರ್ ಮಾರುತಿ ಹೊರಬಂದಿದ್ದರು. ಈ ಸುದ್ದಿಯನ್ನು ದಿ ನ್ಯೂ ಇಂಡಿಯನ್ ಟೈಮ್ಸ್ ನಲ್ಲಿ ನೀವು ಓದಿದ್ರಿ.

ಟಿವಿ9 ಆರಂಭದಿಂದಲೂ ಜೊತೆಯಾಗಿದ್ದ ಇವರಿಬ್ಬರು ಒಟ್ಟಿಗೇ ರಾಜೀನಾಮೆ ನೀಡಿದ್ದು ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಇವರು ಟಿವಿ9 ಸಂಸ್ಥೆಯ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ ತೆರೆಮರೆಯ ಹೀರೋಗಳು. ಇವರ ಸಾಮರ್ಥ್ಯ ಎಂತಹದ್ದು ಎನ್ನೋದು ಮಾಧ್ಯಮ ಲೋಕಕ್ಕೆ ಚೆನ್ನಾಗಿ ಗೊತ್ತಿದೆ.
ಇವರಿಬ್ಬರು 2006ರ ಮಾರ್ಚ್ 1ರಂದು ಟಿವಿ9 ಗೆ ಸೇರಿದ್ದರು.  ಸುಧೀರ್ಘ 12 ವರ್ಷಗಳ ಕಾಲ ಟಿವಿ9ನಲ್ಲಿ ಸೇವೆಸಲ್ಲಿಸಿದ್ದರು. ರಾಜಕೀಯ ವಲಯದಲ್ಲಿ ಪ್ರಮುಖ ಪಕ್ಷಗಳ ನಾಯಕರುಗಳು ಹೇಗೋ? ಸಿನಿಮಾ ರಂಗದಲ್ಲಿ ಸೂಪರ್ ಸ್ಟಾರ್‍ಗಳು ಹೇಗೋ ಹಾಗೆ ಪತ್ರಿಕೋದ್ಯಮದಲ್ಲಿ ರವಿಕುಮಾರ್ ಮತ್ತು ಮಾರುತಿ!

ವಿಶೇಷವೆಂದರೆ ಇವರಿಬ್ಬರು ಬಹುಕಾಲದ ಆತ್ಮೀಯ ಸ್ನೇಹಿತರು. ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ ಇವರು, ಒಟ್ಟಿಗೆಯೇ ಈ-ಟಿವಿಯಲ್ಲಿ ವೃತ್ತಿ ಜೀವನ ಆರಂಭಿಸಿದವರು. ಬಳಿಕ ಟಿವಿ9 ಸಂಸ್ಥೆ ಆರಂಭವಾಗುವಾಗ ಮೊದಲ ದಿನದಿಂದಲೇ ಸಂಸ್ಥೆಯ ಜೊತೆ ಇದ್ದವರು. ಟಿವಿ9ನ ಆಧಾರಸ್ತಂಭಗಳಾಗಿದ್ದವರು.

ದೃಶ್ಯಮಾಧ್ಯಮ ಜಗತ್ತಿನಲ್ಲಿ ಉತ್ತುಂಗದ ಶಿಖರದಲ್ಲಿರುವ ಪ್ರಮುಖ ಹೆಸರೇ ರವಿಕುಮಾರ್ ಹಾಗೂ ಮಾರುತಿ. ಉತ್ತಮ ಸಮಾಜಕ್ಕಾಗಿ ಎಂಬ ಘೋಷವಾಕ್ಯದಿಂದ ಜನಮನ ಗೆದ್ದಿರುವ ಟಿವಿ9 ಸಂಸ್ಥೆಯ ಯಶಸ್ಸಿನ ಪಯಣದ ಹಿಂದೆ ಇವರ ಕೊಡುಗೆ ಅಪಾರ.
ಹೆಚ್ಚು ಕಡಿಮೆ ದಶಕಗಳ ಕಾಲ ಟಿವಿ9ನಲ್ಲಿ ತಮ್ಮ ಸೇವೆ ಸಲ್ಲಿಸಿರುವ ಇವರ ಗರಡಿಯಲ್ಲಿ ಪಳಗಿದ ಯುವಪತ್ರಕರ್ತರು ಬಹಳಷ್ಟು ಮಂದಿ. ಇವತ್ತು ದೃಶ್ಯ ಮಾಧ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅನೇಕ ಯುವಪತ್ರಕರ್ತ ಮಿತ್ರರಿಗೆ ರವಿಕುಮಾರ್ ಮತ್ತು ಮಾರುತಿಯವರು ಗುರುಗಳು, ಪತ್ರಿಕೋದ್ಯಮದ ಅ, ಆ, ಇ,ಈ.. ಹೇಳಿಕೊಟ್ಟವರು.

ದೃಶ್ಯಮಾಧ್ಯಮ ಲೋಕದ ಈ ಇಬ್ಬರು ಚಕ್ರವರ್ತಿಗಳು ಒಟ್ಟಿಗೆ ಆ ಸಂಸ್ಥೆಯನ್ನು ಬಿಟ್ಟು ಹೊರಬಂದಾಗ ಅನೇಕ ರೀತಿಯ ಅಭಿಪ್ರಾಯಗಳು ಕೇಳಿಬಂದಿದ್ದವು.
ಈಟಿವಿ ನ್ಯೂಸ್‍ಗೆ ಹೋಗ್ತಾರೆ, ಸುವರ್ಣ ಚಾನಲ್‍ಗೆ ಹೋಗ್ತಾರೆ ಎಂಬ ಸುದ್ದಿ ಕೇಳಿಬಂದಿತ್ತು. ನಂತರ ಎಬಿಪಿ ನ್ಯೂಸ್ ಆರಂಭವಾಗುತ್ತಿದ್ದು, ಇದರ ಸಾರಥಿಗಳು ಇವರೇ ಎಂಬ ಗಾಸಿಪ್ ಹಬ್ಬಿತ್ತು. ಸ್ಟಾರ್ ಸ್ಪೋಟ್ಸ್ ಕನ್ನಡದಲ್ಲಿ ಬರುತ್ತೆ ಅದರ ಉಸ್ತುವಾರಿ ರವಿಕುಮಾರ್ ಮತ್ತು ಮಾರುತಿ ಎಂಬ ಮಾತು ಸಹ ಕೇಳಿಬಂದಿತ್ತು. ಅಷ್ಟೇ ಅಲ್ಲದೇ ಝೀ ನ್ಯೂಸ್‍ಗೆ ಹೋಗ್ತಾರೆ ಎಂಬ ಗಾಳಿಸುದ್ದಿಯೂ ಇತ್ತು.
ಇವೆಲ್ಲದರ ನಡುವೆ ಹೊಸ ಚಾನಲ್ ಮಾಡ್ತಾರೆ ಎಂದು ಒಂದಿಷ್ಟು ಜನ ಹೇಳ್ತಿದ್ರು. ಅವರ ಅಭಿಪ್ರಾಯ ಸರಿಯಾಗಿದೆ.. ರವಿಕುಮಾರ್ ಮತ್ತು ಮಾರುತಿ ಅವರ ಸಾರಥ್ಯದಲ್ಲಿ ಕನ್ನಡ ಮಾಧ್ಯಮ ಲೋಕಕ್ಕೆ ಹೊಸದೊಂದು ಚಾನಲ್ ಬರಲಿದೆ.. ಅದುವೇ..’ಫಸ್ಟ್ ನ್ಯೂಸ್’ .ನಥಿಂಗ್ ಈಸ್ ಇಂಪಾಸಿಬಲ್’ ಅನ್ನೋದು ಚಾನಲ್‍ನ ಟ್ಯಾಗ್ ಲೈನ್

ಇಷ್ಟುದಿನ ಚಾನಲ್ ಹೆಸರನ್ನು ಗೌಪ್ಯವಾಗಿಟ್ಟು ತೆರೆಮರೆಯಲ್ಲಿ ಮಾಡಬೇಕಾದ ಕೆಲಸವನ್ನೆಲ್ಲಾ ಅಚ್ಟುಕಟ್ಟಾಗಿ ಮುಗಿಸಿ ಲೋಗೋದೊಂದಿಗೆ ಚಾನಲ್ ಹೆಸರನ್ನು ಬಹಿರಂಗಗೊಳಿಸಿದ್ದಾರೆ ರವಿಕುಮಾರ್, ಮಾರುತಿ.
— ಚಾನಲ್ ಜನವರಿ ಕೊನೆಯಲ್ಲಿ ಅಥವಾ ಫೆಬ್ರವರಿಯಲ್ಲಿ ನಿಮ್ಮ ಮುಂದೆ ಬರಲಿದೆ. ಹೊಸತಂಡದಲ್ಲಿ ಜನಪ್ರಿಯ ನಿರೂಪಕ ಸೋಮಣ್ಣ ಮಾಚಿಮಾಡ, ನೀವು ಹೇಳಿದ್ದು, ನಾವು ಕೇಳಿದ್ದು ಖ್ಯಾತಿಯ ಮಂಜುನಾಥ್ ಸಂಜೀವ್ ಸೇರಿದಂತೆ ಅನೇಕ ಪ್ರಮುಖರಿದ್ದಾರೆ. ಇಡೀ ತಂಡಕ್ಕೆ ಶುಭವಾಗಲಿ ಎಂದು ಹಾರೈಸೋಣ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article