No menu items!
10.8 C
Munich
Wednesday, April 29, 2026

ಬಾರಿ ಚಂದ ಮರ್ರೇ… ಹಾಡಿಗೆ ಎಸ್.ಡಿ.ಎಂ ವಿದ್ಯಾರ್ಥಿಗಳ ಸಖತ್ ಸ್ಟೆಪ್….!

Must read

ಬಾರಿ ಖುಷಿ ಮರ್ರೆ ನಂಗೆ ನನ್ನ ಹೆಂಡ್ತಿ ಕಂಡ್ರೆ… ಸದ್ಯಕ್ಕೆ ಸ್ಯಾಂಡಲ್‍ವುಡ್‍ನಲ್ಲಿ ಸಖತ್ ಸೆನ್ಸೇಶನ್ ಮೂಡಿಸಿರುವ ‘ಅಂಜನೀಪುತ್ರ’ ಚಲನಚಿತ್ರದ ಹಾಡು. ಎ. ಹರ್ಷ ನಿರ್ದೇಶನದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಪ್ರಮೋದ್ ಮರವಂತೆ ಸಾಹಿತ್ಯ ಹಾಗೂ ರವಿ ಬಸ್ರೂರು ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಸೂಪರ್ ಹಿಟ್ ಸಿನಿಮಾದ ‘ಚಂದ ಚಂದ’ ಹಾಡಿಗೆ ಇಲ್ಲೊಂದು ಕಾಲೇಜು ತಂಡ ಅದ್ಭುತವಾಗಿ ಕುಣಿದ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ.


ಉಜಿರೆಯ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿಗಳು ಇಂತಹದೊಂದು ಪ್ರಯತ್ನ ಮಾಡಿ ಯಶ ಕಂಡಿದ್ದಾರೆ. ಉಜಿರೆ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ‘ಎಸ್.ಡಿ.ಎಂ ಮಲ್ಟಿಮೀಡಿಯಾ ಸ್ಟುಡಿಯೋ’ ಸದಾ ಹೊಸತನಕ್ಕೆ ತುಡಿಯುತ್ತಾ ಏನಾದರೊಂದು ಕ್ರಿಯಾತ್ಮಕ ಕೆಲಸಗಳನ್ನು ಮಾಡುವುದರ ಮೂಲಕ ಸುದ್ದಿ ಮಾಡುತ್ತಿದೆ. ಸದ್ಯಕ್ಕೆ ಈ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಬಂದಿರುವ ‘ಚಂದ ಚಂದ’ ಹಾಡಿನ ಡ್ಯಾನ್ಸ್‍ನಲ್ಲಿ ವಿದ್ಯಾರ್ಥಿಗಳ ಜೊತೆಗೂಡಿ ಶಿಕ್ಷಕಿಯೊಬ್ಬರು ಸ್ಟೆಪ್ ಹಾಕಿರೋದು ವಿಶೇಷ.


ಒಂದು ದಿನದಲ್ಲಿ ಕಾಲೇಜ್ ಕ್ಯಾಂಪಸ್ನಲ್ಲೇ ಶೂಟ್ ಮಾಡಲಾದ ಈ ಡ್ಯಾನ್ಸ್‍ನಲ್ಲಿ ವಿದ್ಯಾರ್ಥಿಗಳಾದ ಪ್ರತೀಕ್, ಪ್ರಣೀತ್, ಪ್ರಜ್ವಲ್, ಕಿಶೋರ್, ಶುಭಲತಾ, ಅನ್ವಿತಾ, ಚೈತ್ರಾ ಹಾಗೂ ಶಿಕ್ಷಕಿ ಶ್ರುತಿ ಜೈನ್ ನರ್ತಿಸಿದ್ದಾರೆ. ಶೂಟಿಂಗ್‍ಗೋಸ್ಕರ ಶಿವಶಂಕರ್ ನಿನಾಸಂ ಅವರ ಮುಂದಾಳತ್ವದಲ್ಲಿ ಡ್ರಾಮಾ ವಿದ್ಯಾರ್ಥಿಗಳು ವಿಶೇಷವಾದ ಸೆಟ್‍ಹಾಕಿದ್ದು, ಕ್ಯಾಮಾರ ಕಣ್ಣಲ್ಲಿ ಚಂದವಾಗಿ ಮೂಡಿಬಂದಿದೆ.


ಕ್ಯಾಮರಾದಲ್ಲಿ ಸಂದೀಪ್ ದೇವ್, ಮಾಧವ್ ಹೊಳ್ಳ, ಲೋಯ್ಡ್ ಡಯಾಸ್, ಅಭಿನಂದನ್ ಜೈನ್ ಸಹಕರಿಸಿದ್ದು. ಶ್ರುತಿ ಜೈನ್ ಹಾಗೂ ಸುನಿಲ್ ಹೆಗ್ಡೆ ಕಾರ್ಯಕಾರಿ ನಿರ್ಮಾಪಕರಾಗಿ ವಿಡಿಯೋ ಹೊರತಂದಿದ್ದಾರೆ. ಮಾಧವಹೊಳ್ಳ ಕೈ ಚಳಕದಲ್ಲಿ ಡ್ಯಾನ್ಸ್ ವೀಡೀಯೋ ಅದ್ಭುತವಾಗಿ ಮೂಡಿಬಂದಿದೆ. ಡ್ಯಾನ್ಸ್ ನೋಡಿದ ತಕ್ಷಣ ಹಾಡಿನ ಸಾಹಿತ್ಯ ಬರೆದಿರುವ ಪ್ರಮೋದ್ ಮರವಂತೆ ಕಾಲ್ ಮಾಡಿ ‘ಭಾರೀ ಚಂದ ಮಾಡಿದ್ದೀರಿ ಮಾರೆ’ ಎಂದಿದ್ದು ಮರೆಯಲಾಗದ ಕ್ಷಣ ಎನ್ನುತ್ತಾರೆ ಶ್ರುತಿ ಜೈನ್, ಅಷ್ಟೇ ಅಲ್ಲದೇ ಸಿನಿಮಾದ ಸಂಗೀತ ನಿರ್ದೇಶಕ ರವಿ ಬಸ್ರೂರ್ ಸಹ ಈ ಡ್ಯಾನ್ಸ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಮೊದಲಿಗೆ ಈ ಡ್ಯಾನ್ಸ್ ಅನ್ನು ಪೇಸ್ಬುಕ್ ನಲ್ಲಿ ಹಾಕಲಾಗಿದ್ದು, ಹಾಕಿದ ಮೂರೇ ದಿನಕ್ಕೆ 8 ಲಕ್ಷ ವ್ಯೂವ್ಸ್, 8 ಸಾವಿರ ಶೇರ್ಸ್, ಸುಮಾರ್ 750 ಕ್ಕೂ ಮೀರಿ ಕಮೆಂಟ್, 17 ಸಾವಿರ ಲೈಕ್ ಪಡೆದಿದ್ದು ಮತ್ತಷ್ಟು ಜನರನ್ನು ಸೆಳೆಯುತ್ತಿದೆ.


ಕಾಲೇಜಿನ ಆಡಳಿತ ಮಂಡಳಿಯಿಂದ ಪ್ರೋತ್ಸಾಹ ಇಲ್ಲದಿದ್ದರೆ ಇಂತಹ ಕಾರ್ಯ ಅಸಾಧ್ಯ ಎನ್ನುತ್ತಾರೆ. ಜೊತೆಗೆ ಸ್ಯಾಂಡಲ್‍ವುಡ್‍ನಲ್ಲಿ ಇಂತಹ ಹಾಡುಗಳು ಮತ್ತಷ್ಟು ಬರಲಿ, ನಾವು ಕನ್ನಡ ಸಿನಿಮಾವನ್ನು ಪ್ರಮೋಷನ್ ಮಾಡಲು ಸದಾ ಸಿದ್ಧರಿದ್ದೇವೆ ಎನ್ನುತ್ತದೆ ಎಸ್.ಡಿ.ಎಂ ಕಾಲೇಜಿನ ತಂಡ.
ಡ್ಯಾನ್ಸ್ ನೋಡಲು ಕೆಳಗೆ ಕೊಟ್ಟಿರೋ ಲಿಂಕ್ ಒತ್ತಿ.
–ಧನ್ಯ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article