ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳ್ತಾರಾ ಶ್ರದ್ದಾ ಶ್ರೀನಾಥ್..?

Must read

ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳ್ತಾರಾ ಶ್ರದ್ದಾ ಶ್ರೀನಾಥ್..?

ಯೂ ಟರ್ನ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ಚೆಲುವೆ ಶ್ರದ್ಧಾ ಶ್ರೀನಾಥ್. ಮೊದಲ ಚಿತ್ರದಿಂದಲೇ ಕನ್ನಡ ಮಾತ್ರವಲ್ಲದೆ ದಕ್ಷಿಣ ಭಾರತವೇ ತಿರುಗಿ ನೋಡುವಂತೆ ಅಭಿನಯಿಸಿದರು. ನಂತರ ಟಾಲಿವುಡ್ ಹಾಗೂ ಕಾಲಿವುಡ್ ನಿಂದ ಅವಕಾಶಗಳು ಹುಡುಕಿಕೊಂಡು ಬಂದವು. 2019ರಲ್ಲಿ ಶ್ರದ್ಧಾ ಶ್ರೀನಾಥ್ ಅವರ ಸಾಲು ಸಾಲು ಸಿನಿಮಾಗಳು ರಿಲೀಸ್​​ಗೆ ರೆಡಿಯಾಗಿವೆ. ಅದು ಒಂದಲ್ಲಾ 5 ಸಿನಿಮಾಗಳು ರಿಲೀಸ್ ಆಗ್ಬೇಕಿದೆ. ಈ ನಡುವೆ ಮೊದಲ ಬಾರಿಗೆ ಬಾಲಿವುಡ್​ ನ ಮಿಲನ್ ಟಾಕೀಸ್ ಅನ್ನೋ ಹಿಂದಿ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಈಗಾಗಲೇ ಶೂಟಿಂಗ್ ಕೂಡ ಕಂಪ್ಲೀಟ್​ ಆಗಿದೆ. ಇನ್ನು ತೆಲುಗು, ತಮಿಳು, ಬಾಲಿವುಡ್ ನಲ್ಲಿ ಬ್ಯೂಸಿಯಾಗಿರುವ ಮೂಗುತಿ ಸುಂದರಿ ಕನ್ನಡ ಚಿತ್ರಗಳಲ್ಲಿ ನಟಿಸೋದು ಡೌಟ್ ಎನ್ನುತ್ತಿದ್ದಾರೆ ಗಾಂಧಿನಗರದ ಮಂದಿ.. ಹೀಗಾಗಿ ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳ್ತಾರೆ ಅನ್ನೋ‌ ಮಾತುಗಳು ಕೇಳಿ ಬರ್ತಿದೆ.

- Advertisement -spot_img

More articles

- Advertisement -spot_img

Latest article