No menu items!
18.6 C
Munich
Wednesday, April 29, 2026

ತಪ್ಪು ಮುಚ್ಚಿಕೊಳ್ಳಲು ಪತ್ರಕರ್ತರಿಗೇ ಗಿಫ್ಟ್ ಕೊಟ್ರು

Must read

BJPಯವರು ತಪ್ಪು ಮುಚ್ಚಿಕೊಳ್ಳಲು ಪತ್ರಕರ್ತರಿಗೇ ಗಿಫ್ಟ್ ಕೊಟ್ಟಿದ್ದು, ಪತ್ರಕರ್ತರಿಗೆ ಹಂಚಿರುವ ಹಣದ ಮೂಲ ಪತ್ತೆ ಹಚ್ಚಲು ನ್ಯಾಯಾಂಗ ತನಿಖೆಯಾಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ರು. ಈ ಬಗ್ಗೆ ಮೈಸೂರು ಏರ್ಪೋರ್ಟ್ನಲ್ಲಿ ಮಾತ್ನಾಡಿದ ಅವರು, ಬಿಜೆಪಿ ನಾಯಕರು ಮಹಾನ್ ಭ್ರಷ್ಟರು ಹಾಗೂ ಭಂಡರು. ಅವರ ತಪ್ಪನ್ನ ಸಮರ್ಥಿಸಿಕೊಳ್ಳುವ ಕೀಳುಮಟ್ಟಕ್ಕೆ ಇಳಿದಿದ್ದಾರೆ.
ಬಿಜೆಪಿ ಸರ್ಕಾರ 40% ಸರ್ಕಾರ ಎಂಬುದು ಎಂದೋ ಸಾಬೀತಾಗಿದ್ದು, ಈ ಕುರಿತು ಗುತ್ತಿಗೆದಾರರು ಪ್ರಧಾನಿಗೇ ಪತ್ರ ಬರೆದಿದ್ದಾರೆ. ಬಿಜೆಪಿ ಸುಳ್ಳಿನ ಫ್ಯಾಕ್ಟರಿ ಇಟ್ಟಿದ್ದು, RSS ಸುಳ್ಳಿನ ಫ್ಯಾಕ್ಟರಿಯ ರುವಾರಿ ಆಗಿದೆ. RSS ನಾಯಕರು ಹೇಳಿದಂತೆ ಬಿಜೆಪಿ ನಾಯಕರು ಕೇಳುತ್ತಿದ್ದು, ನನ್ನನ್ನ ಟಾರ್ಗೆಟ್ ಮಾಡಲು ಬಿಜೆಪಿಗೆ RSS ಹೇಳಿ ಕೊಡುತ್ತಿದೆ. ಶ್ರೀರಾಮುಲು ಕೂಡ RSSನವರು ಹೇಳಿಕೊಟ್ಟಿದ್ದನ್ನೇ ಹೇಳುತ್ತಿದ್ದು, ನಳಿನ್ ಕುಮಾರ್ ಕಟೀಲ್ ಯಾವುದೇ ಹೋರಾಟ ಮಾಡಿದವನಲ್ಲ. ಅವನೊಬ್ಬ ಜೋಕರ್ ಇದ್ದಂತೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article