ಸಿದ್ದರಾಮಯ್ಯಗೆ ಸಚಿವ ಕೆ.ಸಿ.ನಾರಾಯಣಗೌಡ ತಿರುಗೇಟು

Must read

BJP ಸಚಿವರು ಸುಳ್ಳರು ಎಂಬ ಸಿದ್ದರಾಮಯ್ಯ ಹೇಳಿಕೆ ಸಚಿವ ಕೆ.ಸಿ.ನಾರಾಯಣಗೌಡ ತಿರುಗೇಟು ನೀಡಿದ್ದಾರೆ. ಕೆ.ಆರ್‌‌.ಪೇಟೆಯಲ್ಲಿ ಮಾತ್ನಾಡಿದ ಸಚಿವರು, ನಮಗೂ ಮಾತಾಡಲು ಬರುತ್ತೆ, ಆದ್ರೆ, ದೊಡ್ಡವರಿಗೆ ಟೀಕೆ, ಟಿಪ್ಪಣಿ ಮಾಡಲ್ಲ. ಅವರು ಒಂದು ಪಕ್ಷದಲ್ಲಿದ್ದಾರೆ, ವಿರೋಧ ಪಕ್ಷದ ನಾಯಕರಾಗಿದ್ದಾರೆ‌. ಮಾಜಿ ಸಿಎಂ ಸಿದ್ದರಾಮಯ್ಯ ಗೌರವದಿಂದ ನಡೆದುಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದ್ರು. ಅವರು ಲೆಟರ್ ಮೂಲಕ ಕೊಡಲಿ, ಸರ್ಕಾರ ಸಮಸ್ಯೆ ಬಗೆಹರಿಸುತ್ತೆ‌. ಮಂಡ್ಯದಲ್ಲಿ ಎರಡೂ ಶುಗರ್ ಫ್ಯಾಕ್ಟರಿ ಶುರು ಮಾಡಿದ್ದು ಬಿಜೆಪಿ. ಇವರ ಸರ್ಕಾರ ಇದ್ದಾಗ ಏಕೆ ಶುಗರ್ ಫ್ಯಾಕ್ಟರಿ ಶುರು ಮಾಡಿಲ್ಲ..? ಕಾಂಗ್ರೆಸ್-JDS ಕಾರ್ಖಾನೆಗಳನ್ನ ಮೂಲೆಗೆ ಹಾಕಿ ತುಕ್ಕು ಹಿಡಿಸಿದ್ರು. ಬಿಜೆಪಿ ಸರ್ಕಾರಕ್ಕೆ ಸಿದ್ದರಾಮಯ್ಯ ಶಹಬ್ಬಾಸ್ ಗಿರಿ ಕೊಡಬೇಕು. ಅದನ್ನು ಬಿಟ್ಟು ಅವರು ಸುಮ್ಮನೆ ಏನೇನೋ ಮಾತನಾಡಬಾರದು. ಕಾಂಗ್ರೆಸ್ ಅನ್ನದಾತರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ನಮಗೆ ಕೆಲಸ ಮಾಡಬೇಕು ಎನ್ನುವ ಜವಾಬ್ದಾರಿ ಇದೆ. ಅವರಿಗೆ ಮಾತ್ನಾಡಲು ಜವಾಬ್ದಾರಿ ಇದೆ, ಅವರು ಮಾತನಾಡಲಿ ಎಂದು ಕಿಡಿಕಾರಿದ್ರು .

- Advertisement -spot_img

More articles

- Advertisement -spot_img

Latest article