ಮೂವತ್ತು ವರ್ಷದಿಂದ ಸಂಬಳ ಇಲ್ದೆ ಪಾಠ ಮಾಡ್ತ ಇರೋ ಶಿಕ್ಷಕರು ..!

0
78

ತಿಂಗಳ ಕೊನೆ ಬಂದ್ ಬಿಡ್ತೆಂದ್ರೆ ಸಾಕು.., ಸಂಬಳ ಆಗುವುದನ್ನೇ ಕಾಯ್ತಾ ಇರ್ತೀವಿ..! ಸ್ವಲ್ಪ ತಡವಾಯ್ತು ಆಂದ್ರೆ ಯಾಕ್ರೀ ಸಂಬಳ ಆಗ್ಲಿಲ್ಲ ಅಂತ ಕೇಳವವರೂ ಇದ್ದಾರೆ..! ಆದ್ರೆ ಸಂಬಳನೇ ತೆಗೆದು ಕೊಳ್ಳದೇ “ಕಾಯಕವೇ ಕೈಲಾಸ” ಅಂತ ಕೆಲಸ ಮಾಡೋರು ಎಲ್ಲಾದ್ರೂ ಇದ್ದಾರೆಯೇ..? ಅಂತವರೂ ಇದ್ದಾರೆ..! ಹಂಗಂತ ಅವರೇನೂ ಅಗರ್ಭ ಶ್ರೀಮಂತರಾಗಿದ್ದು, ಸಂಬಳದ ಅವಶ್ಯಕತೆನೇ ಇಲ್ಲದೇ ಇರುವವರಂತೂ ಅಲ್ವೇ ಅಲ್ಲ..! ಅವರಿಗೂ ದುಡ್ಡಿನ ಜರೂರತ್ತಿದೆ..! ಆದರೂ ಸರ್ಕಾರದ ನಿರ್ಲಕ್ಷದಿಂದ ಇವರಿಗೆ ಸಂಬಳ ಸಿಗ್ತಾ ಇಲ್ಲ..! ಅದೂ ಬರೋಬ್ಬರಿ ಮೂವತ್ತು ವರ್ಷದಿಂದಲೂ..!
ಅದು ಜಾರ್ಖಂಡಿನ ಸಿಂದಗಿ ಜಿಲ್ಲೆಯ ಬಾಲಕಿಯರ ಸರ್ಕಾರಿ ಶಾಲೆ..! ಬಾಲಿಕಾ ಯೋಜನೆಯಡಿ ಆರಂಭವಾದ ಈ ಶಾಲೆ ಮತ್ತು ಇಲ್ಲಿ ಕಲಿಯುವ ಎಲ್ಲಾ ವಿದ್ಯಾರ್ಥಿಗಳಿಗೂ ಸರ್ಕಾರವೇ ಸೌಕರ್ಯಗಳನ್ನು ಒದಗಿಸುವುದಾಗಿ ಹೇಳಿತ್ತು..! ಸರ್ಕಾರದ ಜವಬ್ದಾರಿಯೂ ಹೌದಲ್ಲವೇ..? ಹೆಸರಿಗೆ ಇದು ಸರ್ಕಾರಿ ಶಾಲೆ..! ಆದ್ರೆ ಈ ಶಾಲೆಯಿದೆ, ಇಲ್ಲಿ ಮಕ್ಕಳು ಕಲಿಯುತ್ತಿದ್ದಾರೆ, ಶಿಕ್ಷಕರು ಉತ್ತಮ ರೀತಿಯಲ್ಲಿ ಶಾಲೆ ನಡೆಸಿಕೊಂಡು ಹೋಗ್ತಾ ಇದ್ದಾರೆ.. ಅನ್ನೋ ವಿಷಯವೇ ಸರ್ಕಾರಕ್ಕೆ ಗೊತ್ತಿಲ್ಲ…! ಇವೆಲ್ಲಾ ಗೊತ್ತಿದ್ದರೆ ಸರ್ಕಾರವೇಕೆ ಈ ಶಾಲಾ ಶಿಕ್ಷಕರಿಗೆ ಮೂವತ್ತು ವರ್ಷಗಳಿಂದ ಸಂಬಳ ಕೊಡ್ತಾ ಇಲ್ಲ..!
ಹೌದು ಸಾರ್ ಈ ಶಾಲೆ ಆರಂಭವಾಗಿದ್ದು 1984ರಲ್ಲಿ..! ಅವತ್ತಿಂದ ಇವತ್ತಿನವರೆಗೂ ಅಂದ್ರೆ ಸರಿ ಸುಮಾರು ಮೂವತ್ತು ವರ್ಷಗಳಿಂದಲೂ ಶಿಕ್ಷಕರಿಗೆ ಸಂಬಳ ಸಿಗ್ತಾ ಇಲ್ಲ..! 30 ವರ್ಷದಿಂದಲೂ ನಯಾಪೈಸೆ ಸಂಬಳ ಇಲ್ಲದೆ ಪಾಠ ಮಾಡ್ತಾ ಇದ್ದಾರೆ..!
“ನಾವೆಲ್ಲಾ ಮೂವತ್ತು ವರ್ಷದಿಂದ ಸಂಬಳ ಇಲ್ಲದೆ ಕೆಲಸ ಮಾಡ್ತಾ ಇದ್ದೇವೆ..! ನಾನು 1984ರಲ್ಲಿ ಶಾಲೆ ಆರಂಭವಾದಗಲಿಂದಲೂ ಪುಕ್ಕಟೆ ಪಾಠ ಮಾಡ್ತಾ ಇದ್ದೇನೆ..! ಬೇರೆ ಉದ್ಯೋಗವೂ ಇಲ್ಲದೆ ಕುಟುಂಬವನ್ನು ನಿರ್ವಹಿಸುವುದಾದರೂ ಹೇಗೆ..”? ಎಂದು ಒಬ್ಬ ಶಿಕ್ಷಕರು ತಾವು ಕಳೆಯುತ್ತಿರುವ ಕಷ್ಟದ ಬದುಕನ್ನು ಮನ ಮುಟ್ಟುವಂತೆ ಹೇಳ್ತಾರೆ..! ಒಬ್ಬರು ಶಿಕ್ಷಕಿಗೆ ಆ್ಯಕ್ಸಿಡೆಂಟ್ ಆಗಿ ಕಾಲು ಮುರಿದಿದೆ..! “ನನಗೆ ಸಂಬಳ ಆಗ್ತಾ ಇಲ್ಲ, ಜೀವನ ನಡೆಸೋದು ತುಂಬಾನೇ ಕಷ್ಟವಾಗಿದೆ..! ಸರ್ಜರಿ ಮಾಡಿಸಲಿಕ್ಕೂ ದುಡ್ಡಿಲ್ಲವೆಂದು ಗೋಗರೆಯುತ್ತಿದ್ದಾರೆ..”! ಇದೇ ಶಾಲೆಯ ಇನ್ನೊಬ್ಬ ಶಿಕ್ಷಕಿ ನೋವಿನಿಂದ “ಅಸಾಹಯಕ”ಳಾಗಿದ್ದೇನೆಂದಷ್ಟೇ ಹೇಳಿದೆರ, ಇನ್ನೊಬ್ಬರು, ಅಳುತ್ತಲೇ ನಮ್ಮ ಸಂಬಳ ಬಂದೇ ಬರುತ್ತೆ ಎಂಬ ಭರವಸೆಯಿಂದ ಇಂದಿಗೂ ಪಾಠ ಮಾಡಿ ಕೊಂಡೇ ಬರ್ತಾ ಇದ್ದೀವೆಂದು ಭರವಸೆಯೊಂದಿಗಿನ ದುಃಖವನ್ನು ಬಿಚ್ಚಿಟ್ಟಿದ್ದಾರೆ..!
ದೇಶದ ಸರ್ಕಾರಗಳಿಗೆ, ಅಧಿಕಾರಿ ವರ್ಗದವರಿಗೆ ಬೇಡದ್ದಕ್ಕೊಂದಿಷ್ಟು ಹಣವನ್ನು ವ್ಯಯಿಸಲು ಆಗುತ್ತೆ..! ಆದ್ರೆ ನೌಕರರಿಗೆ ಸಂಬಳ ಕೊಡಲಿಕ್ಕೆ ಆಗಲ್ವಾ..? ಅವರಲ್ಲಿ ಯಾರಾದ್ರೂ ಪುಕ್ಕಟೆ ದುಡಿಯುತ್ತಿದ್ದಾರೆಯೇ..? ಇಲ್ಲ. ಅವರಿಗೆಲ್ಲಾ ಸರಿಯಾಗಿ ಸಂಬಳ ಸಿಗುತ್ತೆ..! ಆದ್ರೆ ಇಂತಹ ಬಡ ಶಿಕ್ಷಕರಿಗೇಕೆ ಸಂಬಳವಿಲ್ಲ..! ಪಾಪ, ಸಾರ್ ಈ ಶಿಕ್ಷಕರು ಸಂಬಳ ಸಿಗ್ದೇ ಇದ್ರೂ ಮಕ್ಕಳಿಗೆ ಅನ್ಯಾಯ ಆಗ್ಬಾರ್ದು ಅಂತ ಪಾಠ ಮಾಡ್ತಾ ಇದ್ದಾರೆ..! ಅವರ ಅಳಲನ್ನು ಈ ಕೆಳಗಿನ ವಿಡಿಯೋದಲ್ಲಿ ನೀವೆ ನೋಡಿ..!

ಈ ಕೆಳಗೆ ಜಾರ್ಖಂಡಿನ ಸಿಂದಗಿ ಜಿಲ್ಲೆಯ ಜಿಲ್ಲಾಧಿಕಾರಿಯ ಹೆಸರು ಮತ್ತು ಫೋನ್ ನಂಬರ್ ಇದೆ.. ಏನ್ ಮಾಡ್ತೀರೋ ನೋಡಿ..! ಈ ಸ್ಟೋರಿ ಶೇರ್ ಮಾಡೋ ಮೂಲಕವಾದ್ರೂ ಮೂವತ್ತು ವರ್ಷದಿಂದ ಸಂಬಳ ಇಲ್ಲದೆ ಕೆಲಸ ಮಾಡ್ತಾ ಇರುವ ಶಿಕ್ಷಕರಿಗೆ ಸಂಬಳ ಬರುವಂತೆ ಮಾಡಲು ಸಹಕರಿಸಿ..!
ಸಿಂದಗಿ ಜಿಲ್ಲಾಧಿಕಾರಿ ಹೆಸರು : ದೀಪ್ರವಾ, 06525-22570

  • ಶಶಿಧರ ಡಿ ಎಸ್ ದೋಣಿಹಕು

POPULAR  STORIES :

ಸ್ಮಶಾನದಲ್ಲೊಂದು ಹೋಟೆಲ್ ಮಾಡಿ..!

ಹೃತಿಕ್ ಹೆಂಡತಿಗೆ ಅರ್ಜುನ್ ರಾಂಪಾಲ್ ಗಂಡ..!? ಪತಿ-ಪತ್ನಿ ಔರ್ ವೋ..!

ಮನೆಯೇ ಮೃಗಾಲಯ, ಪ್ರಾಣಿಗಳೇ ಕುಟುಂಬಸ್ಥರು..!

ಹುಡುಗಿಯರ ದೇಹವೆಂದರೆ…!? ಕಮ್ಮಿ ಬಟ್ಟೆ ಹಾಕೋ ಹುಡುಗೀರು ಓದಲೇಬೇಕಾದ ಸ್ಟೋರಿ..!

ಜೀವನಾಧಾರವಾಗಿದ್ದ ಆಡುಗಳನ್ನು ಮಾರಿ ಶೌಚಾಲಯ ಕಟ್ಟಿಸಿ, ಜಾಗೃತಿ ಮೂಡಿಸಿದ ಶತಾಯುಷಿ

ಇದು ಭಾರತದ `ಶ್ರೀಮಂತ’ ಭಿಕ್ಷುಕರ ಕಥೆ..!

ವಿಶ್ವೇಶ್ವರಯ್ಯನವರ ಬಗ್ಗೆ ನಿಮಗೆಷ್ಟು ಗೊತ್ತು..? ಇವತ್ತಿನ ದಿನವಾದ್ರೂ ಅವರ ಬಗ್ಗೆ ತಿಳಿದುಕೊಳ್ಳಿ..

ಟಿವಿ ಸ್ಟೂಡಿಯೋದಲ್ಲೇ ಸಖತ್ ಫೈಟಿಂಗ್..! ಬಾಬಾಗೂ, ಲೇಡಿ ಜ್ಯೋತಿಷಿಗೂ ಲೈವ್ ಜಟಾಪಟಿ..!

ಅವನ ಕಣ್ಣು ಕಿವಿಯಲ್ಲಿತ್ತು..!? ಮಾನವ ಜಗತ್ತಿನಲ್ಲಿ ಇವನೊಂದು ಅದ್ಭುತ..!

ಗೂಗಲ್ ನಲ್ಲಿ ಯಾವ ದೇಶದ ಜನರು ಏನ್ ಏನ್ ಹುಡಕ್ತಾರೆ ಗೊತ್ತಾ..?

ಮದುವೆ ಆಯ್ತಾ..? ಡೈವೋರ್ಸ್ ಯಾವಾಗ..?!

ಸಿಹಿ ಚಹಾದ ಹಿಂದಿನ ಕಹಿ ಸತ್ಯ…!

ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!

ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

LEAVE A REPLY

Please enter your comment!
Please enter your name here