ಇವನು ಮಾರೋದು ನಿಂಬೆಹಣ್ಣು, ಮೆಣಸಿನಕಾಯಿ. ಆದರೆ…?!

1
72

ಇದೊಂದು ಮನ ಮುಟ್ಟುವ ಸಂಭಾಷಣೆ.. ಓದದೇ ಇದ್ರೆ ಮಿಸ್ ಮಾಡ್ಕೊಳ್ತೀರಿ..! ಶೇರ್ ಮಾಡ್ದೇ ಇದ್ರೆ ತುಂಬಾ ಸ್ವಾರ್ಥಿಗಳಾಗ್ತೀರಿ ಅನ್ಸುತ್ತೆ..!
ಮುಂಬೈ ಸಮೀಪದ ಅಂಗಡಿಯೊಂದಕ್ಕೆ ಹುಡುಗನೊಬ್ಬ ಮೆಣಸಿನ ಕಾಯಿ ಮತ್ತು ಲಿಂಬೆ ಹಣ್ಣನ್ನು ಮಾರಲು ಬರುತ್ತಿರುತ್ತಾನೆ…! ಆ ಅಂಗಡಿಗೆ ಪ್ರತಿ ಶನಿವಾರ ಬರ್ತಾ ಇರ್ತಾನೆ..! ಹೀಗಿರುವಾಗ ಒಂದು ಶನಿವಾರ ಆ ಹುಡುಗನನ್ನು ನೋಡಿದ ಸಮೀಪದ ಅಂಗಡಿಯವ ಬಂದು ಮಾತನಾಡಿಸುತ್ತಾನೆ. ಅವನ ಪ್ರಶ್ನೆಗಳಿಗೆಲ್ಲಾ ಆ ಹುಡುಗ ಉತ್ತರಿಸುತ್ತಾನೆ. ಕೊನೆಯಲ್ಲಿ ಅವನು ಹೇಳುವ ಮಾತು ಕಲ್ಲು ಹೃದಯವನ್ನೂ ಕರಗಿಸುತ್ತೆ.. ಆ ಸಂಭಾಷಣೆ ಇಲ್ಲಿದೆ.
ಆ ಲಿಂಬೆ, ಮೆಣಸಿನಕಾಯಿಯನ್ನು ಮಾರುವ ಪುಟ್ಟ ಬಾಲಕ ಹಾಗೂ ಅಂಗಡಿ ಮಾಲಿಕರೊಬ್ಬರ ನಡುವೆ ನಡೆಯುವ ಸಂಭಾಷಣೆಯ ಕನ್ನಡ ಭಾವಾನುವಾದವಿದು..!
ಇದೊಂದು ಎಂದೂ ಮರೆಯಲಾಗದ ಸಂಭಾಷಣೆ..! ಅತ್ಯಂತ ಗಾಢವಾಗಿ ಮನಮುಟ್ಟುವ ಈ ಸಂಭಾಷಣೆಯು ಎಂಥವರ ಹೃದಯವನ್ನೂ ತಟ್ಟುತ್ತದೆ..! ಹಾಗೇ ಸುಮ್ಮನೆ ಕಣ್ಣಾಡಿಸಿ..! ನಿಮ್ಮ ಮೇಲೂ ಈ ಸಂಭಾಷಣೆ ಪ್ರಭಾವ ಬೀರಿಯೇ ಬೀರುತ್ತದೆ..! ನೀವು ಖಂಡಿತಾ ಇದನ್ನು ಶೇರ್ ಮಾಡಿಯೇ ಮಾಡುತ್ತೀರಿ..!
ಅಂಗಡಿ ಮಾಲಿಕ: ಪುಟ್ಟಾ.. ನಿನ್ನ ವಯಸ್ಸು ಎಷ್ಟು?
ಬಾಲಕ : ಗೊತ್ತಿಲ್ಲ
ಅಂಗಡಿ ಮಾಲಿಕ: ಎಲ್ಲಿರ್ತೀಯಾ?
ಬಾಲಕ : ವಡಾಲ, ಮುಂಬೈ
ಅಂಗಡಿ ಮಾಲಿಕ: ಇಷ್ಟೊಂದು ದೂರ ಕೆಲಸ ಮಾಡಲು ಏಕೆ ಬರ್ತಾ ಇದ್ದೀಯ?
ಬಾಲಕ : ಉತ್ತಮ ರೀತಿಯಲ್ಲಿ ಹಣ ಸಂಪಾದನೆ ಮಾಡಲು ಬರ್ತಾ ಇದ್ದೀನಿ
ಅಂಗಡಿ ಮಾಲಿಕ: ಶನಿವಾರದವರೆಗೆ ಯಾವ ಕೆಲಸ ಮಾಡ್ತೀಯ..?
ಬಾಲಕ : ಇಲ್ಲ, ನಾನು ಪ್ರತಿದಿನ ಇದೇ ಕೆಲಸ ಮಾಡುವುದು, ನೀವು ಇವತ್ತು ನೋಡಿದ್ದೀರಷ್ಟೇ..
ಅಂಗಡಿ ಮಾಲಿಕ: ಯಾವಾಗ ರೆಸ್ಟ್ ಮಾಡ್ತೀಯಾ..?
ಬಾಲಕ : ಹುಷಾರು ಇಲ್ಲದೇ ಇರುವಾಗ….
ಅಂಗಡಿ ಮಾಲಿಕ: ಸರಿ, ಎಷ್ಟೊತ್ತಿಗೆ ಬರ್ತೀಯಾ..? ಎಷ್ಟೊತ್ತಿಗೆ ಹೋಗ್ತೀಯಾ..?
ಬಾಲಕ : ಬೆಳಿಗ್ಗೆ 7ಗಂಟೆಗೆ ಬರ್ತೀನಿ.. ರಾತ್ರಿ 9ಗಂಟೆಗೆ ಹೋಗ್ತೀನಿ..!
ಅಂಗಡಿ ಮಾಲಿಕ: ಊಟ, ತಿಂಡಿಗೆ ಏನ್ ಮಾಡ್ತೀಯಾ..?
ಬಾಲಿಕ : ಡಬ್ಬಾ (ಟಿಫಿನ್ ಬಾಕ್ಸ್ )ತರ್ತೀನಿ..
ಅಂಗಡಿ ಮಾಲಿಕ: ಮನೆಯಲ್ಲಿ ಯಾರ್ ಯಾರು ಇದ್ದೀರಿ..?
ಬಾಲಿಕ : ಅಪ್ಪ, ಅಮ್ಮಾ.. ನಾನು ಮತ್ತು ನನ್ನ ಪುಟ್ಟ ತಂಗಿ
ಅಂಗಡಿ ಮಾಲಿಕ: ತಂದೆ ಏನ್ ಕೆಲಸ ಮಾಡ್ತಾರೆ..?
ಬಾಲಕ : ಅವರಿಗೆ ಆರೋಗ್ಯ ಸರಿಯಿಲ್ಲ.. ಅದಕ್ಕಾಗಿ ಮನೆಯಲ್ಲೇ ಇರ್ತಾರೆ..!
ಅಂಗಡಿ ಮಾಲಿಕ: ನೀನು ದಿನಕ್ಕೆ ಎಷ್ಟು ಸಂಪಾದನೆ ಮಾಡ್ತೀಯಾ..?
ಬಾಲಕ : 400 ರೂಪಾಯಿಯಿಂದ 500 ರೂಪಾಯಿ ದುಡಿಯುತ್ತೇನೆ…! ಕೆಲವೊಂದು ದಿನ 700 ರೂಪಾಯಿಯಿಂದ 800 ರೂಪಾಯಿ ತನಕವೂ ದುಡಿಯುತ್ತೇನೆ..!
ಅಂಗಡಿ ಮಾಲಿಕ: ನೀನು ಶಾಲೆಗೆ ಹೋಗಲ್ವಾ..?
ಬಾಲಿಕ : ಮನೆಯ ಸಂಪೂರ್ಣ ಜವಬ್ದಾರಿ ನನ್ನ ತಲೆ ಮೇಲಿದೆ..! ನಾನು ಸ್ಕೂಲ್ ಗೆ ಹೋಗುವುದಾದರೂ ಹೇಗೆ..? ಅದಕ್ಕಾಗಿ ನಾ ಶಾಲೆಗೆ ಹೋಗ್ತಾ ಇಲ್ಲ..!
ಅಂಗಡಿ ಮಾಲಿಕ: ನೀನು ದೊಡ್ಡವನಾದ ಮೇಲೆ ಏನ್ ಆಗ್ತೀಯಾ..?
(ಅವನ ಹಾರ್ಟ್ ಟಚ್ಚಿಂಗ್ ಮಾತು) ನಾನು ದೊಡ್ಡವನಾದ ಮೇಲೆ ನನ್ನ ತಂಗಿಯನ್ನು ಚೆನ್ನಾಗಿ ಓದಿಸುತ್ತೇನೆ..! ಅವಳನ್ನು ಡಾಕ್ಟರ್ ಮಾಡಬೇಕೆಂದಿದ್ದೇನೆ..! ನನ್ನ ಅಮ್ಮನನ್ನು ಚೆನ್ನಾಗಿ ನೋಡಿ ಕೊಳ್ತೀನಿ..! ಅವಳನ್ನು ಖುಷಿಯಿಂದ ಇರುವಂತೆ ನೋಡಿಕೊಳ್ತೀನಿ..! ತಂದೆಗೆ ಆರೋಗ್ಯ ಸರಿ ಇಲ್ವಲ್ಲಾ.., ಅವರಿಗೆ ಒಳ್ಳೆಯ ಟ್ರೀಟ್ಮೆಂಟ್ ಕೊಡಿಸ್ತೀನಿ..!
ಎಂಥಾ ಮಾತು ಅಲ್ವಾ ಇದು..! ಇಷ್ಟೊಂದು ಚಿಕ್ಕ ವಯಸ್ಸಲ್ಲೇ ಎಂಥಹಾ ದೊಡ್ಡ ಯೋಚನೆ..! ಕಿಂಚಿತ್ತೂ ಸ್ವಾರ್ಥವಿಲ್ಲದೆ ತಂಗಿಯನ್ನು ಓದಿಸ್ತೀನಿ, ಆಕೆ ಒಳ್ಳೆಯ ಸ್ಥಾನಮಾನ ಪಡೆಯಲಿ ಅನ್ನೋ ಕನಸು..! ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆಂಬ ಭರವಸೆ..! ಹೆಬ್ಬಯಕೆ..! ನಿಜಕ್ಕೂ ಈ ಹುಡುಗನ ಮಾತು ಎಲ್ಲರ ಮನ ಕರಗಿಸುತ್ತೆ ಅಲ್ವಾ..! ಈ ಮಾತನೆಂದೂ ಯಾರೂ ಮರೆಯಲು ಸಾಧ್ಯವೇ ಇಲ್ಲ..! ಆ ಹುಡುಗನಿಗೆ ಶುಭವಾಗಲಿ ಅನ್ನೋ ಹಾರೈಕೆಯೊಂದಿಗೆ…
ನಾವೂ ಓದಿದ್ದೇವೆ… ಇಷ್ಟವಾಯ್ತು.. ಭಾವಾನುವಾದ ಮಾಡಿ ನಿಮ್ಮೊಂದಿಗೆ ಹಂಚಿ ಕೊಳ್ತಾ ಇದ್ದೀವಿ..! ನೀವು..?

Courtesy : vinod.bulani
ಅನುವಾದ :  ಶಶಿಧರ ಡಿ ಎಸ್ ದೋಣಿಹಕ್ಲು

POPULAR  STORIES :

ಜಗದಲ್ಲಿ ಎಂತೆಂಥಾ ಕೆಲಸಗಳು ಇವೆ ಗೊತ್ತಾ..?

ಮೂವತ್ತು ವರ್ಷದಿಂದ ಸಂಬಳ ಇಲ್ದೆ ಪಾಠ ಮಾಡ್ತ ಇರೋ ಶಿಕ್ಷಕರು ..!

ಇನ್ಮುಂದೆ ಫೇಸ್ ಬುಕ್ ನಲ್ಲಿ ಡಿಸ್ ಲೈಕ್ ಮಾಡಬಹುದು..!

ಜೀವನಾಧಾರವಾಗಿದ್ದ ಆಡುಗಳನ್ನು ಮಾರಿ ಶೌಚಾಲಯ ಕಟ್ಟಿಸಿ, ಜಾಗೃತಿ ಮೂಡಿಸಿದ ಶತಾಯುಷಿ

ಇದು ಭಾರತದ `ಶ್ರೀಮಂತ’ ಭಿಕ್ಷುಕರ ಕಥೆ..!

ವಿಶ್ವೇಶ್ವರಯ್ಯನವರ ಬಗ್ಗೆ ನಿಮಗೆಷ್ಟು ಗೊತ್ತು..? ಇವತ್ತಿನ ದಿನವಾದ್ರೂ ಅವರ ಬಗ್ಗೆ ತಿಳಿದುಕೊಳ್ಳಿ..

ಟಿವಿ ಸ್ಟೂಡಿಯೋದಲ್ಲೇ ಸಖತ್ ಫೈಟಿಂಗ್..! ಬಾಬಾಗೂ, ಲೇಡಿ ಜ್ಯೋತಿಷಿಗೂ ಲೈವ್ ಜಟಾಪಟಿ..!

ಅವನ ಕಣ್ಣು ಕಿವಿಯಲ್ಲಿತ್ತು..!? ಮಾನವ ಜಗತ್ತಿನಲ್ಲಿ ಇವನೊಂದು ಅದ್ಭುತ..!

ಗೂಗಲ್ ನಲ್ಲಿ ಯಾವ ದೇಶದ ಜನರು ಏನ್ ಏನ್ ಹುಡಕ್ತಾರೆ ಗೊತ್ತಾ..?

ಮದುವೆ ಆಯ್ತಾ..? ಡೈವೋರ್ಸ್ ಯಾವಾಗ..?!

ಸಿಹಿ ಚಹಾದ ಹಿಂದಿನ ಕಹಿ ಸತ್ಯ…!

ಲೋಡ್ ಶೆಡ್ಡಿಂಗ್ ಹೊಡೆತಕ್ಕೆ ಜನಸಾಮಾನ್ಯನ ಲೈಫ್ ಚಿಂದಿ ಚಿತ್ರಾನ್ನ..! 

ಅವತ್ತು ಎಮ್ಮೆ ಕಾಯುತ್ತಿದ್ದವ ಇಂದು ಬಿಪಿಒ ಕಂಪನಿಯ ಮಾಲಿಕ..! ರಿಯಲ್ ಹೀರೋ..

ಇಟ್ ಹ್ಯಾಪನ್ಸ್ ಓನ್ಲಿ ಇನ್ ದುಬೈ..!

ಸಿಸಿಟಿವಿ ಬಯಲು ಮಾಡ್ತು ಹೆಂಡತಿಯ “ಅತ್ತೆಪ್ರೀತಿ”

ಇಡೀ ಊರನ್ನೇ ಶ್ರೀಮಂತ ಮಾಡಿದ ವ್ಯಕ್ತಿಯ ಕಥೆ..!

ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!

 ಅವನು ಐಎಎಸ್ ಆಫೀಸರ್…ಇವನು ಗ್ರೇಟ್ ಕ್ರಿಕೆಟರ್…!

ನಿಮ್ ಮನೇಲೂ ಕರೆಂಟಿಲ್ವಾ..? ಏನೂ ಮಾಡಕ್ಕಾಗಲ್ಲ… ಈ ವೀಡಿಯೋ ನೋಡಿ ನಕ್ಕುಬಿಡಿ..!

ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!

ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

 

1 COMMENT

LEAVE A REPLY

Please enter your comment!
Please enter your name here