No menu items!
10.8 C
Munich
Wednesday, April 29, 2026

ಅಂಡರ್ 19 ವಿಶ್ವಕಪ್ : ದ್ರಾವಿಡ್ ಹುಡುಗರು ಸೆಮಿಫೈನಲ್ ಗೆ

Must read

ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಸೆಮಿಫೈನಲ್ ಪ್ರವೇಶಿಸಿದೆ.
ಫತುಲ್ಲಾದ ಖಾನ್ ಸಾಹೆಬ್ ಒಸ್ಮಾನ್ ಅಲಿ ಕ್ರೀಡಾಂಗಣದಲ್ಲಿ ನಡೆದ ಕ್ವಾಟರ್ ಫೈನಲ್ ನಲ್ಲಿ ಭಾರತ 197 ರನ್ ಗಳಿಂದ ನಮೀಬಿಯಾ ತಂಡವನ್ನು ಸೋಲಿಸುವ ಮೂಲಕ ಸೆಮಿಫೈನಲ್ ಗೆ ಲಗ್ಗೆಇಟ್ಟಿದ್ದಾರೆ.
ಟಾಸ್ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಹುಲ್ ದ್ರಾವಿಡ್ ಹುಡುಗರು ನಿಗಧಿತ 50 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 349ರನ್ಗಳ ಗುರಿಯನ್ನು ಎದುರಾಳಿಗಳಿಗೆ ನೀಡಿದ್ದರು. ಗುರಿ ಬೆನ್ನತ್ತಿದ ನಮೀಬಿಯಾ 39 ಓವರ್ಗಳಲ್ಲಿ ಕೇವಲ 152 ರನ್ಗಳಿಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ ಶರಣಾಯಿತು.
ಭಾರತದ ಪರ ಆರಂಭಿಕ ಆಟಗಾರ ರಿಶಬ್ ಪಂತ್ ಶತಕ(111), ಸರ್ಫರಾಜ್ ಖಾನ್ (76), ಮತ್ತು ಅರ್ಮಾನ್ ಜಾಫರ್ ಅರ್ಧಶತಕ (64)ಗಳಿಸುವ ಮೂಲಕ ಬೃಹತ್ ಮೊತ್ತದ ಗುರಿಯನ್ನು ನೀಡುವಲ್ಲಿ ಯಶಸ್ವಿಯಾದರು. ಅಷ್ಟೇ ಅಲ್ಲದೇ ಮಹಿಪಾಲ್ ಲೂಮರ್ ಕೇವಲ 21 ಎಸತಗಳಲ್ಲಿ ಅಜೇಯ 41ರಬ್ಗಳಿಸುವ ಮೂಲಕ ನಮೀಬಿಯಾ ಬೌಲರ್ ಗಳಿಗೆ ನೀರುಣಿಸಿದರು.
ಬೃಹತ್ ಮೊತ್ತ ಬೆನ್ನತಿದ ನಮೀಬಿಯಾ ಭಾರತದ ಮಯಾಂಕ್ ದಾಗರ್ (3ವಿಕೆಟ್), ಅನ್ಪೋಲ್ಪ್ರೀತ್ ಸಿಂಗ್ (3 ವಿಕೆಟ್) , ವಾಷಿಂಗ್ ಟನ್ ಸುಂದರ್ (2 ವಿಕೆಟ್), ರಾಹುಲ್ ಬಾತಮ್, ಕಲೀಲ್ ಅಹ್ಮದ್ (ತಲಾ 1 ವಿಕೆಟ್) ದಾಳಿಗೆ ಉತ್ತರಿಸಲಾಗದೇ ಟೂರ್ನಿಯಿಂದ ಹೊರ ನಡೆಯಿತು.

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article