ವಾಟ್ಸ್ ಆ್ಯಪ್ ಮೆಸೇಜ್ ಡಿಲೀಟ್ ಮಾಡಿದ್ರೆ ಹುಷಾರ್..!

0
91

ಹಾಯ್, ಫ್ರೆಂಡ್ಸ್ ನೀವು ವಾಟ್ಸ್ ಆ್ಯಪ್ ಬಳಸುತ್ತಿದ್ದೀರಲ್ಲವೇ..? ಹೌದಾದರೆ ಈ ಸ್ಟೋರಿ ಓದ್ಲೇ ಬೇಕು..! ಓದದೇ ಇದ್ರೆ ನಿಮಗೇ ನಷ್ಟ..! ಓದಿದ್ರೆ ನಿಮ್ಗೇ ಲಾಭ..! ಸರಿ, ವಿಷಯಕ್ಕೆ ಬರೋಣ.
ಇಷ್ಟುದಿನ ವಾಟ್ಸ್ ಆ್ಯಪ್ ಹೆಂಗೆ ಬಳಸುತ್ತಾ ಇದ್ದೀರಿ ಅಂತ ಕೇಳಲ್ಲ..! ಬಟ್ ಇನ್ಮುಂದೆ ಹೆಂಗೆ ಯೂಸ್ ಮಾಡ್ಲೇ ಬೇಕಾಗುತ್ತೆ ಅನ್ನೋದನ್ನು ಹೇಳ್ತೀವಿ..! ಹ್ಞಾಂ, ಅಂದಹಾಗೇ ನಿಮಗೆ ಈ ರೀತಿಯೇ ವಾಟ್ಸ್ ಆ್ಯಪ್ ಬಳಸಿ ಅಂತ ಹೇಳೋಕೆ ಕಾರಣ ಕೇಂದ್ರ ಸರ್ಕಾರ..! ಹೌದು ಸಾರ್, ಸೆಂಟ್ರಲ್ ಗವರ್ನಮೆಂಟ್ ಆಫ್ ಇಂಡಿಯಾ ಡೇಟಾ(ದತ್ತಾಂಶ)ಗಳ ರಕ್ಷಣೆಗೋಸ್ಕರ “ನ್ಯಾಷನಲ್ ಎನ್ಕ್ರಿಪ್ಷನ್” ಪಾಲಿಸಿ ತರ್ತಾ ಇದೆ..! ಈ ಪಾಲಿಸಿ ಅಡಿಯಲ್ಲಿ ವಾಟ್ಸ್ ಆ್ಯಪ್ ಮೆಸೇಜ್ ಡಿಲೀಟ್ ಮಾಡ್ಬಾರ್ದು ಅನ್ನೋದು ಕೂಡ ಒಂದಾಗಿದೆ..! ಲೈಫ್ ಲಾಂಗ್ ಹಾಗೇಯೇ ಇಟ್ಟುಕೊಳ್ಳಬೇಕಿಲ್ಲ..! 90ದಿನಗಳ ತನಕ ಮೆಸೇಜ್ ಗಳನ್ನು ಹಾಗೇ ಸೇವ್ ಮಾಡಿಟ್ಟುಕೊಳ್ಳಬೇಕಾಗುತ್ತೆ..! ಒಂದುವೇಳೆ ಅಪ್ಪಿತಪ್ಪಿಯಾದ್ರೂ ನೀವು ಡಿಲೀಟ್ ಮಾಡಿದ್ದೇ ಆದಲ್ಲಿ ನೀವು ಕಾನೂನು ಪ್ರಕಾರ ಅಪರಾಧ ಮಾಡಿದಂತೆಯೇ…! ನಿಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಲೂ ಬಹುದು..! ಸೋ, ಎಚ್ಚರ ಎಚ್ಚರ ಎಚ್ಚರ…
ಇದೇ ರೀತಿ ಈ ಪಾಲಿಸಿಯಡಿಯಲ್ಲಿ ಆನ್ ಲೈನ್ ವ್ಯವಹಾರದ ಸಂದರ್ಭದಲ್ಲಿ ನಿಮ್ಮ ಪಾಸ್ ವರ್ಡ್ ಸೇರಿದಂತೆ ಇತರೆ ಎಲ್ಲಾ ಮೈಕ್ರೋ ಮಾಹಿತಿಗಳನ್ನೂ ಕೂಡ ಆಯಾಯ ಸೇವಾ ಸಂಸ್ಥೆಗಳು 90 ದಿನಗಳ ಕಾಲ ಹಂಗೇ ಉಳಿಸಿಕೊಳ್ಬೇಕೆಂಬುದನ್ನೂ ಕಡ್ಡಾಯ ಮಾಡುವ ಚಾನ್ಸ್ ಕೂಡ ಇದೆ..! ಈ ನೀತಿ ಜಾರಿಯಾಗಿದ್ದೇ ಆದಲ್ಲಿ ಎಲ್ಲಾ ಇ-ಕಾಮರ್ಸ್ ವ್ಯವಹಾರಗಳೂ ಮತ್ತು ವಾಟ್ಸ್ ಆ್ಯಪ್ , ಫೇಸ್ ಬುಕ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ದಾಖಲಾದ ಮಾಹಿತಿಗಳನ್ನು 90 ದಿನಗಳ ಕಾಲ ಹಾಗೆಯೇ ಉಳಿಸಿ ಕೊಳ್ಳಬೇಕಾಗುತ್ತೆ..! ಅಗತ್ಯವಿದ್ರೆ ಈ ಮಾಹಿತಿಗಳನ್ನು ಕಾನೂನು ಸಚಿವಾಲಯಕ್ಕೂ ನೀಡ ಬೇಕಾಗುತ್ತೆ..! ಒನ್ಸ್ ಅಗೈನ್ ನೆನಪಿಸ್ತಾ ಇದ್ದೀವೆ.. ವಾಟ್ಸ್ ಆ್ಯಪ್ ಮೆಸೇಜ್ ಡಿಲೀಟ್ ಮಾಡ್ ಬೇಡ್ರಪ್ಪೋ…!
ಶಶಿಧರ ಡಿ ಎಸ್ ದೋಣಿಹಕ್ಲು

LEAVE A REPLY

Please enter your comment!
Please enter your name here