No menu items!
8.6 C
Munich
Wednesday, April 15, 2026

ಯೋಗರಾಜ್ ಭಟ್ ಅವರ ಮಾವ ಇನ್ನಿಲ್ಲ

Must read

ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರ ಮಾವ ಹಾಗೂ ನಟ ಸತ್ಯ ಉಮ್ಮತ್ತಾಲ್ ಅವರು, ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿರ್ದೇಶಕ ಪವನ್ ಕುಮಾರ್ ಅವರ ಲೈಫು ಇಷ್ಟೇನೆ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಸಿನಿ ರಂಗಕ್ಕೆ ನಟರಾಗಿ ಸತ್ಯ ಉಮ್ಮತ್ತಾಲ್ ಪ್ರವೇಶಿಸಿದ್ದರು. ಆ ಬಳಿಕ ವಿವಿಧ ಸಿನಿಮಾಗಳಲ್ಲಿ ನಟರಾಗಿ ಕಾಣಿಸಿಕೊಂಡಿದ್ದರು. ಯೋಗರಾಜ್ ಭಟ್ ನಿರ್ದೇಶದ ಅನೇಕ ಚಿತ್ರಗಳಲ್ಲಿ ಅವರ ಮಾವ ಸತ್ಯ ಕಾಣಿಸಿಕೊಂಡಿದ್ದಾರೆ. ಜಯಮ್ಮನ ಮಗ, ಕೆಂಡಸಂಪಗಿ, ಕಡ್ಡಿಪುಡಿ, ದನಕಾಯೋನ ಸೇರಿದಂತೆ ಹಲವು ಚಿತ್ರಗಳಲ್ಲಿ ನಡಿಸಿದ್ದರು. ಹೀಗೆ ಕನ್ನಡ ಚಿತ್ರರಂಗದಲ್ಲಿ ನಟರಾಗಿ ಗುರ್ತಿಸಿಕೊಂಡಿದ್ದಂತ ನಟ ಸತ್ಯ ಉಮ್ಮತ್ತಾಲ್ ಇಂದು ಹೃದಯಾಘಾತದಿಂದ ನಿಧನರಾಗಿದ್ದು, ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಇಂದು ಸಂಜೆ ಬೆಂಗಳೂರಿನಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article