ಕೆಎಲ್ ರಾಹುಲ್‌ಗೆ ಶಸ್ತ್ರಚಿಕಿತ್ಸೆ ; ಪಂತ್ ಪ್ರಾರ್ಥನೆ

Must read

ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಕೆಲವೇ ಗಂಟೆಗಳು ಇರುವಾಗ ತೀವ್ರ ಹೊಟ್ಟೆನೋವಿಗೆ ಒಳಗಾಗಿದ್ದರು. ಹೀಗೆ ತೀವ್ರ ಹೊಟ್ಟೆನೋವಿಗೆ ಒಳಗಾದ ಕೆ ಎಲ್ ರಾಹುಲ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಅಪೆಂಡಿಸಿಟಿಸ್ ಇರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕೆಎಲ್ ರಾಹುಲ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಲಾಗಿತ್ತು.

ಕೆ ಎಲ್ ರಾಹುಲ್ ಅವರಿಗೆ ಸೋಮವಾರ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಕೆಎಲ್ ರಾಹುಲ್ ಅವರಿಗೆ ಒಂದು ವಾರದ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಲಾಗಿದೆ. ಸದ್ಯ ಕೆಎಲ್ ರಾಹುಲ್ ಚೇತರಿಸಿಕೊಳ್ಳುತ್ತಿದ್ದು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ.

 

 

ಇದೀಗ ಕೆಎಲ್ ರಾಹುಲ್ ಅವರ ಆರೋಗ್ಯದ ಕುರಿತು ರಿಷಭ್ ಪಂತ್ ಟ್ವಿಟ್ಟರ್ ಮೂಲಕ ಪ್ರಾರ್ಥಿಸಿಕೊಂಡಿದ್ದಾರೆ. ಆದಷ್ಟು ಬೇಗ ಗುಣಮುಖರಾಗಿ ಬನ್ನಿ, ನೀವು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥನೆ ಮತ್ತು ಶುಭಹಾರೈಕೆಗಳನ್ನು ಕಳುಹಿಸುತ್ತಿದ್ದೇನೆ ಎಂದು ಕೆ ಎಲ್ ರಾಹುಲ್ ಅವರಿಗೆ ರಿಷಭ್ ಪಂತ್ ಟ್ವೀಟ್ ಮಾಡಿದ್ದಾರೆ.

 

- Advertisement -spot_img

More articles

- Advertisement -spot_img

Latest article