No menu items!
4.6 C
Munich
Friday, April 17, 2026

ಚೀನಾ ವಿರುದ್ಧ ಸೆಣಸಾಡುವ ಕನ್ನಡಿಗನಿಗೆ ಕಿಚ್ಚನ ವಿಶ್

Must read

ಬೆಂಗಳೂರು ಮೂಲದ ಕಾಂತರಾಜ್ ಅಗಸ ಎಂಬ ಪ್ರತಿಭೆ ಸಿಂಗಾಪುರದ ಎಂಎಂಎ ಚಾಂಪಿಯನ್‍ಶಿಪ್ ನಲ್ಲಿ ಭಾಗವಹಿಸಲಿದ್ದಾರೆ. ಮೇ 28ರಂದು ಚೀನಾದ ಕ್ಸಿ-ವೈ ವಿರುದ್ಧ ಕಾಂತರಾಜ್ ಅಗಸ ಸೆಣಸಾಡಲಿದ್ದಾರೆ.

ಹೀಗೆ ಬಹು ನಿರೀಕ್ಷಿತ ಒನ್ ಚಾಂಪಿಯನ್‍ಶಿಪ್‌ನಲ್ಲಿ ಭಾರತದ ಪರ ಕನ್ನಡಿಗ ಕಾಂತರಾಜ್ ಅಗಸ ಭಾಗವಹಿಸುತ್ತಿರುವುದಕ್ಕೆ ಕನ್ನಡ ಚಲನಚಿತ್ರ ನಟ ಕಿಚ್ಚ ಸುದೀಪ್ ಸಂತಸ ವ್ಯಕ್ತಪಡಿಸಿದ್ದಾರೆ. ಕಾಂತರಾಜ್ ಅಗಸಗೆ ಟ್ವಿಟ್ಟರ್ ಮೂಲಕ ಶುಭಾಶಯ ಕೋರಿರುವ ಕಿಚ್ಚ ಸುದೀಪ್ ‘ಸ್ಥಳೀಯ ಪ್ರತಿಭೆ ಕಾಂತರಾಜ್ ಅಗಸ ಸಿಂಗಾಪುರದ ಎಂಎಂಎ ಚಾಂಪಿಯನ್‍ಶಿಪ್‌ನಲ್ಲಿ ಚೀನಾದ ಕ್ಸಿ-ವೈ ವಿರುದ್ಧ ಸೆಣಸಾಡಲಿದ್ದು, ಅವರಿಗೆ ಯಶಸ್ಸು ಸಿಗಲೆಂದು ಹಾರೈಸುತ್ತೇನೆ. ಮೇ 28ಕ್ಕೆ ನಾನು ಕಾತುರದಿಂದ ಕಾಯುತ್ತಿದ್ದೇನೆ’ ಎಂದು ಟ್ವಿಟ್ಟರ್‌ನಲ್ಲಿ ಸುದೀಪ್ ಬರೆದುಕೊಂಡಿದ್ದಾರೆ.


ಸುದೀಪ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಕಾಂತರಾಜ್ ‘ತುಂಬಾ ಧನ್ಯವಾದಗಳು ಸರ್, ನಿಮ್ಮ ಪ್ರೋತ್ಸಾಹ ಮತ್ತು ಪ್ರೀತಿ ಸದಾ ಹೀಗೆ ಇರಲಿ ಎಂದು ಆಶಿಸುತ್ತೇನೆ’ ಎಂದು ಸಂತಸ ವ್ಯಕ್ತಪಡಿಸಿದರು.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article