No menu items!
4.8 C
Munich
Saturday, May 2, 2026

ಜನರ ಗಮನ ಡೀವಯೇಟ್ ಮಾಡಲು ಸುಳ್ಳು ಅರೋಪ ಮಾಡುತ್ತಿದ್ದಾರೆ !

Must read

ಬೆಂಗಳೂರು: ಈ ಲೋಕಸಭಾ ಚುನಾವಣೆಯ ನಂತರ ಅವರ ಮತ್ತು ಜೆಡಿಎಸ್ ಸ್ಥಿತಿ ಏನಾಗಲಿದೆ ಅಂತ ಜನ ನೋಡಲಿದ್ದಾರೆ, ಯಾರಿಗೂ ಮುಖ ತೋರಿಸದ ಸನ್ನಿವೇಶ ನಿರ್ಮಾಣವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ತನ್ನ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ ಮಾಡುತ್ತಿರುವ ವೈಯಕ್ತಿಕ ಟೀಕೆಗಳು ಮಾಡುತ್ತಿದ್ದಾರೆ, ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು. ಅವರು ಹೇಳಿದ್ದನ್ನೆಲ್ಲ ಸಮುದಾಯಕ್ಕೋಸ್ಕರ ಸಹಿಸಿಕೊಂಡೆ, ಆದರೆ ಎಲ್ಲಕ್ಕೂ ಒಂದು ಮಿತಿ ಅಂತ ಇರುತ್ತದೆ, ತಮ್ಮ ರಾಜಕೀಯ ಗುರಿಸಾಧನೆಗಾಗಿ ಅವರು ಸಮುದಾಯದಿಂದ ದೂರವಾಗುತ್ತಿದ್ದಾರೆ,
ಈ ಲೋಕಸಭಾ ಚುನಾವಣೆಯ ನಂತರ ಅವರ ಮತ್ತು ಜೆಡಿಎಸ್ ಸ್ಥಿತಿ ಏನಾಗಲಿದೆ ಅಂತ ಜನ ನೋಡಲಿದ್ದಾರೆ, ಯಾರಿಗೂ ಮುಖ ತೋರಿಸದ ಸನ್ನಿವೇಶ ನಿರ್ಮಾಣವಾಗಲಿದೆ ಎಂದು ಶಿವಕುಮಾರ್ ಹೇಳಿದರು. ಬಂಡೆ ಒಡೆದೆ, ಕಲ್ಲು ಸೀಳಿದೆ ಅಂತ ಕುಮಾರಸ್ವಾಮಿ ಹೇಳ್ತಾರಲ್ಲ? ಹೌದು, ನನ್ನ ಜಮೀನಲ್ಲಿ ಬಂಡೆ ಸೀಳಿದ್ದೇನೆ, ಕಲ್ಲು ಒಡೆದಿದ್ದೇನೆ, ನನ್ನ ಮಕ್ಕಳ ಭವಿಷ್ಯಕ್ಕಾಗಿ ಅದೆಲ್ಲವನ್ನು ಮಾಡಿದ್ದೇನೆ ಎಂದು ಹೇಳಿದ ಶಿವಕುಮಾರ್,
ಯಾವುದೇ ಮಹಿಳೆಯ ಆಸ್ತಿಯನ್ನು ತಾನು ಕಬಳಿಸಿಲ್ಲ ಎಂದರು. ಅಪಾರ್ಟ್ ಮೆಂಟ್ ನವರನ್ನು ಹೆದರಿಸಿದ್ದು ಸುಳ್ಳೆಂದ ಶಿವಕುಮಾರ್, ನೀರಿನ ಅಗಾಧ ಕೊರತೆಯ ನಡುವೆಯೂ ಜನರಿಗೆ ಸಪರ್ಮಕವಾಗಿ ನೀರು ಒದಗಿಸುತ್ತಿರುವುದು ಸಹಿಸಲಾಗದೆ ಜನರ ಗಮನ ಡೀವಯೇಟ್ ಮಾಡಲು ಸುಳ್ಳು ಅರೋಪ ಮಾಡುತ್ತಿದ್ದಾರೆ ಎಂದು ಶಿವಕುಮಾರ್ ಹೇಳಿದರು.

- Advertisement -spot_img

More articles

- Advertisement -spot_img

Latest article