No menu items!
19.6 C
Munich
Tuesday, April 28, 2026

ಧರ್ಮದ ಅಫೀಮಿನಿಲ್ಲಿ ಅಮೆರಿಕಾದಿಂದ ಮುಂಬೈಗೆ ಬಂದ ಮತಾಂಧ ; ಕಲ್ಮಾ ಪಠಿಸದ ಹಿಂದೂ ಸೆಕ್ಯುರಿಟಿಗಳಿಗೆ ಚಾಕುವಿನಿಂದ ಇರಿತ

Must read

ಮುಂಬೈ ಅಂದರೆ ಮಾಯಾನಗರಿ. ಕನಸೆಂಬ ಕುದುರೆಯನ್ನೇರಿ ಇಲ್ಲಿ ಹಲವರು ಓಡುತ್ತಾರೆ. ಆದರೆ ಬದಲಾದ ಈ ಕಾಲದಲ್ಲಿ ಕೇವಲ ಮುಂಬೈ ಮಾತ್ರವಲ್ಲ ನಮ್ಮ ದೇಶದ ಹಲವಡೆ ಕನಸುಗಳು ಕಣ್ಮರೆಯಾಗುತ್ತಿವೆ. ಬದಲಿಗೆ ಧರ್ಮದ ಅಫೀಮು ಸೇವಿಸುವರ ಸಂಖ್ಯೆ ಹೆಚ್ಚಾಗುತ್ತಿದೆ.

ಕಮ್ಯುನಿಸ್ಟ್ ಸಿದ್ಧಾಂತದ ಜನಕ ಕಾರ್ಲ ಮಾರ್ಕ್ಸ್ ಹೇಳಿದಂತೆ ಅಫೀಮು ಸೇವಿಸಿದವನು ಈ ಜಗವನ್ನೇ ಮರೆಯುವಂತೆ ಧರ್ಮದ ಅಮಲೇರಿಸಿಕೊಂಡವನೂ ಸಹ ಮಾನವೀಯತೆ ಯನ್ನು ಮರೆಯುತ್ತಾನೆ. ಸಹಿಷ್ಣುತೆಯನ್ನು ತೊರೆಯುತ್ತಾನೆ. ರಸ್ತೆಯ ಮೇಲೆ ಅಮಾಯಕರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಾನೆ. ಪ್ರಾಣವನ್ನು ಕೂಡ ಬಲಿ ಪಡೆಯುತ್ತಾನೆ. ಇದಕ್ಕೆ ಮತ್ತೊಂದು ಉದಾಹರಣೆಯೇ ಮುಂಬೈನ ನಯಾ ನಗರದಲ್ಲಿ ನಡೆದ ಬೆಚ್ಚಿ ಬೀಳಿಸುವಂತಹ ಪ್ರಕರಣ.

ಹೌದು, ಸೋಮವಾರ ನಿದ್ದೆಯಿಂದ ಮುಂಬೈ ಎದ್ದೇಳುವ ಸಮಯದಲ್ಲಿ ಬೆಳಗಿನ ಜಾವ 4ಕ್ಕೆ 31 ವರ್ಷದ ಜೈಬ್ ಜುಬೇರ್ ಅನ್ಸಾರಿ ವೋಕಾರ್ಡ್ ಆಸ್ಪತ್ರೆಯ ಹಿಂಭಾಗದ ನಿರ್ಮಾಣ ಹಂತದ ಕಟ್ಟಡಕ್ಕೆ ಬಂದಿದ್ದಾನೆ. ಅಲ್ಲಿ ಕರ್ತವ್ಯದಲ್ಲಿದ್ದವರು ರಾಜ್‌ಕುಮಾರ್ ಮಿಶ್ರಾ ಮತ್ತು ಸುಬ್ರೋಟೊ ಸೇನ್.

ಇವರಿಬ್ಬರ ಹತ್ತಿರ ಬಂದ ಜುಬೇರ್ ಅನ್ಸಾರಿ ಧರ್ಮದ ಪ್ರಶ್ನೆ ಕೇಳಿದ್ಧಾನೆ. ಇಸ್ಲಾಂ ಧರ್ಮದ ಮೂಲ ಸಿದ್ಧಾಂತವಾದ ‘ಕಲ್ಮಾ’ ಅಥವಾ ‘ಕಲಿಮಾ’ ಪಠಿಸುವಂತೆ ಒತ್ತಾಯಿಸಿದ್ದಾನೆ. ಯಾವಾಗ ಆ ಗಾರ್ಡ್‌ಗಳು ತಾವು ಮುಸ್ಲಿಮರಲ್ಲ ಎಂದು ಹೇಳಿದರೋ, ಅನ್ಸಾರಿ ತನ್ನಲ್ಲಿದ್ದ ಚಾಕುವಿನಿಂದ ಅವರ ಮೇಲೆ ಮನಬಂದಂತೆ ದಾಳಿ ಮಾಡಿದ್ದಾನೆ. ಕ್ಷಣಾರ್ಧದಲ್ಲಿ ಆ ಪ್ರದೇಶವೆಲ್ಲಾ ರಕ್ತಸಿಕ್ತವಾಗಿದೆ. ಮಿಶ್ರಾ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಆಸ್ಪತ್ರೆಗೆ ಓಡಿದರೆ, ಸೇನ್ ರಕ್ತದ ಮಡುವಿನಲ್ಲಿ ಅಲ್ಲೇ ಇದ್ದ ಬೂತ್ ಒಂದರಲ್ಲಿ ಅಡಗಿಕೊಂಡಿದ್ದರು. ಬಳಿಕ ನಯಾಬ್ ಶೇಖ್ ಎಂಬ ದಾರಿಹೋಕ ಇವರ ನೆರವಿಗೆ ಧಾವಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.

ಘಟನೆ ನಡೆದ ಕೇವಲ 90 ನಿಮಿಷಗಳಲ್ಲಿ ಸಿಸಿಟಿವಿ ದೃಶ್ಯಗಳನ್ನು ಜಾಲಾಡಿದ ಪೊಲೀಸರು ಆರೋಪಿ ಅನ್ಸಾರಿಯನ್ನು ಹೆಡೆಮುರಿ ಕಟ್ಟಿದ್ದಾರೆ. ಆದರೆ ಬಂಧನದ ನಂತರ ಆತನ ಹಿನ್ನೆಲೆ ಕೆದಕಿದ ಪೊಲೀಸರಿಗೇ ಶಾಕ್ ಆಗಿದೆ. ಯಾಕೆಂದರೆ ಜುಬೇರ್ ಅನ್ಸಾರಿ ಸುಶಿಕ್ಷಿತ. ಕಿತ್ತು ತಿನ್ನುವ ಬಡತನದಲ್ಲಿ ಬೆಳೆದವನೂ ಅಲ್ಲ.

ಬದಲಾಗಿ ಹಲವಾರು ವರ್ಷಗಳ ಕಾಲ ಅಮೆರಿಕದಲ್ಲಿ ವಾಸವಿದ್ದವನು. ಆತನ ಕುಟುಂಬ ಇನ್ನೂ ಅಮೆರಿಕದಲ್ಲೇ ಇದೆ. ಅಲ್ಲಿ ಕೆಲಸ ಸಿಗದೆ ಭಾರತಕ್ಕೆ ವಾಪಸ್ ಬಂದಿದ್ದ ಈತ, ಆನ್‌ಲೈನ್ ಮೂಲಕ ಕೆಮಿಸ್ಟ್ರಿ ಕ್ಲಾಸ್ ತಗೊಳ್ಳುತ್ತಿದ್ದ. ಇಷ್ಟು ಓದಿಕೊಂಡಿದ್ದ ವ್ಯಕ್ತಿ ಈ ರೀತಿ ಕ್ರೂರವಾಗಿ ನಡೆದುಕೊಂಡಿದ್ದು ಎಲ್ಲರನ್ನೂ ದಂಗಾಗಿಸಿದೆ.

ತನಿಖೆಯ ವೇಳೆ ಪೊಲೀಸರಿಗೆ ಸಿಕ್ಕ ಅನ್ಸಾರಿಯ ಮೊಬೈಲ್ ಮತ್ತು ಡೈರಿಯಲ್ಲಿ ಬೆಚ್ಚಿಬೀಳಿಸುವ ಸತ್ಯಗಳು ಕೂಡ ಹೊರ ಬಿದ್ದಿವೆ. ‘ISIS’, ‘ಒಂಟಿ ತೋಳ ದಾಳಿ’, ‘ಜಿಹಾದ್’ ಮತ್ತು ‘ಗಾಜಾ’ ಅಂತಹ ಪದಗಳು ನೋಟ್ಸ್‌ಗಳಲ್ಲಿ ಕಂಡುಬಂದಿವೆ. ತೀವ್ರಗಾಮಿ ಸಿದ್ಧಾಂತಗಳನ್ನು ಆನ್‌ಲೈನ್ ಪೋಸ್ಟ್‌ಗಳ ಮೂಲಕ ತಲೆಗೆ ತುಂಬಿಕೊಂಡಿದ್ದ ಈತ, ತನ್ನದೇ ಆದ ಒಂದು ವಿಷಕಾರಿ ಪ್ರಪಂಚದಲ್ಲಿ ಬದುಕುತ್ತಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇದು ಬರಿ ವೈಯಕ್ತಿಕ ದ್ವೇಷವಲ್ಲ, ಇದರ ಹಿಂದೆ ದೊಡ್ಡ ಪಿತೂರಿ ಇರುವ ಶಂಕೆಯೂ ದಟ್ಟವಾಗಿದೆ.

ಈ ಪ್ರಕರಣದ ಗಂಭೀರತೆ ಅರಿತ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಪ್ರಕರಣವನ್ನು ಎನ್‌ಐಎ (NIA) ತನಿಖೆಗೆ ಒಪ್ಪಿಸುವುದಾಗಿ ಘೋಷಿಸಿದ್ದಾರೆ. ರಾಜ್ಯದ ಭಯೋತ್ಪಾದನಾ ನಿಗ್ರಹ ದಳ (ATS) ಕೂಡ ಈಗ ಅನ್ಸಾರಿಯ ಕನೆಕ್ಷನ್ ಯಾರ ಜೊತೆಗಿದೆ ಎಂದು ಜಾಲಾಡುತ್ತಿದೆ. ಇದೊಂದು ಪ್ಲ್ಯಾನ್ಡ್ ಅಟ್ಯಾಕ್ ಹೌದೋ ಅಥವಾ ಕೇವಲ ಒಬ್ಬ ವ್ಯಕ್ತಿಯ ಮತಿಭ್ರಮಣೆಯೋ ಎಂಬುದು ತನಿಖೆಯಿಂದ ಹೊರಬರಬೇಕಿದೆ. ಮೇ 4ರವರೆಗೆ ನ್ಯಾಯಾಲಯ ಆತನನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.

- Advertisement -spot_img

More articles

- Advertisement -spot_img

Latest article