No menu items!
5.2 C
Munich
Friday, April 24, 2026

ಪದೇ-ಪದೇ ಕಾಲುಗಳಲ್ಲಿ ಶಕ್ತಿ ಇಲ್ಲದಂತಾಗುತ್ತಾ!? ಹಾಗಿದ್ರೆ ಅದು ಇದೇ ಕಾರಣ!

Must read

ಪದೇ-ಪದೇ ಕಾಲುಗಳಲ್ಲಿ ಶಕ್ತಿ ಇಲ್ಲದಂತಾಗುತ್ತಾ!? ಹಾಗಿದ್ರೆ ಅದು ಇದೇ ಕಾರಣ!

ಕೆಲವೊಬ್ಬರಿಗೆ ಕಾಲುಗಳು ಸೋತು ಹೋದಂತೆ ಆಗುವುದು, ಕಾಲುಗಳಲ್ಲಿ ನೋವು ಮತ್ತು ಊತ ಕಾಣಿಸುವುದು, ಕಾಲುಗಳ ಸೆಳೆತ ಉಂಟಾಗುವುದು, ಅಂಗಾಲು ಉರಿ ಬರುವುದು ಹೀಗೆಲ್ಲ ಆಗುತ್ತಿ ರುತ್ತದೆ. ಇಂತಹ ಸಂದರ್ಭದಲ್ಲಿ ಕಾಲುಗಳ ಈ ಸಮಸ್ಯೆಗೆ ಪರಿಹಾರವನ್ನು ಕೊಂಡುಕೊಳ್ಳುವುದು ಅನಿವಾರ್ಯ. ಕಾಲುಗಳು ದುರ್ಬಲವಾಗುವುದು ಅಥವಾ ಪದೇ ಪದೇ ಸೋತು ಹೋದಂತೆ ಆಗುವುದು ಅನೇಕ ಜನರಿಗೆ ಉಂಟಾಗುತ್ತಿರುತ್ತದೆ. ಈ ರೀತಿ ದುರ್ಬಲ ಕಾಲುಗಳಿಗೆ ಕಾರಣಗಳು ಹಲವಾರು ಇರುತ್ತವೆ.

ಈ ರೀತಿ ಕಾಲುಗಳ ಸಮಸ್ಯೆಗೆ ಕಾರಣಗಳು:-

ರಕ್ತ ಸಂಚಾರ ಸರಿಯಾಗಿ ಆಗದೇ ಇರುವುದು
ನರಮಂಡಲದ ಹಾನಿ
ಅತಿಯಾದ ಚಟುವಟಿಕೆ
ಸರಿಯಾಗಿ ವ್ಯಾಯಾಮ ಮಾಡದಿರುವುದು
ಸಂಧಿವಾತ
ಶಸ್ತ್ರಚಿಕಿತ್ಸೆಯ ನಂತರ ರಿಕವರಿ
ಔಷಧಿಗಳ ಅಡ್ಡ ಪರಿಣಾಮಗಳು
ನಿರ್ಜಲೀಕರಣ
ಸಕ್ಕರೆ ಕಾಯಿಲೆ
ರಕ್ತಹೀನತೆ
ಬೆನ್ನು ನೋವು
ಪೌಷ್ಟಿಕಾಂಶಗಳ ಕೊರತೆ
ಕೆಲವೊಂದು ಗಂಭೀರ ಆರೋಗ್ಯ ಸಮಸ್ಯೆಗಳು

ಇದು ಹೃದಯ ರಕ್ತನಾಳಗಳನ್ನು ಗಟ್ಟಿಯಾಗಿಸುತ್ತದೆ ಮತ್ತು ಕಾಲುಗಳಲ್ಲಿ ಸರಿಯಾದ ರಕ್ತ ಸಂಚಾರ ಆಗುವುದಿಲ್ಲ. ಮುಖ್ಯವಾಗಿ ರಕ್ತನಾಳಗಳಲ್ಲಿ ಕೊಬ್ಬಿನ ಅಂಶದ ಶೇಖರಣೆ ಆಗುತ್ತದೆ. ಹೆಚ್ಚಿನ ರಕ್ತದ ಒತ್ತಡ, ಧೂಮಪಾನ, ಸಕ್ಕರೆ ಕಾಯಿಲೆ, ಬೊಜ್ಜು, ಕೌಟುಂಬಿಕ ಇತಿಹಾಸ ಮತ್ತು ವಯಸ್ಸು ಹೆಚ್ಚಾದಂತೆ ಈ ರೀತಿ ಆಗುತ್ತದೆ.

ಕಾಲುಗಳು ಸೋತು ಹೋದಂತೆ ಆಗಲು ಇದು ಕೂಡ ಒಂದು ಪ್ರಮುಖ ಕಾರಣ. ಮೊದಲು ತೊಡೆಯಿಂದ ನೋವು ಶುರುವಾಗಿ ಆನಂತರ ಹಿಮ್ಮಡಿ ಮತ್ತು ಪಾದದವರೆಗೆ ನೋವು ಉಂಟಾಗುತ್ತದೆ. ಕಾಲುಗಳ ದುರ್ಬಲತೆ ಜೊತೆಗೆ ನೋವು, ಉರಿ ಮತ್ತು ಮುಳ್ಳು ಚುಚ್ಚಿದ ಅನುಭವ ಕೂಡ ಉಂಟಾಗುತ್ತದೆ.

myasthenia gravis ಮತ್ತು ಮಲ್ಟಿಪಲ್ ಸ್ಕ್ಲಿರೋಸಿಸ್:-

ಇದು ಒಂದು ಮಾಂಸ ಖಂಡಗಳಲ್ಲಿನ ನರಮಂಡಲದ ಕಾಯಿಲೆಯಾಗಿದ್ದು, ನಾವು ತೆಗೆದುಕೊಳ್ಳುವ ಔಷಧಿಗಳಿಂದ ಉಂಟಾಗುವ ವಿಷಕಾರಿ ಅಂಶ ಗಳಿಂದ ಮಾಂಸಖಂಡಗಳ ದುರ್ಬಲತೆ ಕಂಡುಬರುತ್ತದೆ. ನಿರಂತರವಾಗಿ ಕಾಲುಗಳಲ್ಲಿ ಇದರಿಂದ ಸುಸ್ತು ಮತ್ತು ಆಯಾಸ ಕಾಣಿಸುತ್ತದೆ. ಒಂದು ವೇಳೆ ಈ ರೀತಿ ಆಗುತ್ತಿದ್ದರೆ, ತಕ್ಷಣವೇ ಡಾಕ್ಟರ್ ಬಳಿ ತೋರಿಸಿಕೊಳ್ಳಿ.

- Advertisement -spot_img

More articles

- Advertisement -spot_img

Latest article